ಆಳಂದ: ಶೋಷಿತರು ಮತ್ತು ಹಿಂದುಳಿದವರ ಶ್ರೇಯೋಭಿವೃದ್ಧಿಗೆ ನಾರಾಯಣ ಗುರುಗಳ ಹೋರಾಟ ಅವಿರಸ್ಮರಣೀಯವಾದದ್ದು. ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಪರಿವರ್ತನೆಯ ಹರಿಕಾರರಾಗಿ ಅವರು ಸಮಾಜದ ಒಳಿತಿಗಾಗಿ ದುಡಿದಿದ್ದಾರೆ. ಅವರ ಆಚಾರ ವಿಚಾರ ಹಾಗೂ ಆದರ್ಶಗಳನ್ನು ಪಾಲಿಸುವಂತೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಕರೆ ನೀಡಿದರು.
ಸೋಮವಾರ ತಾಲೂಕಿನ ಮಟಕಿ ಗ್ರಾಮದಲ್ಲಿ ಆರ್ಯ ಇಡಿಗ ಸಮಾಜ ಸಂಘ(ರಿ) ಗ್ರಾಮ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತ್ಯೋತ್ಸವ ಆಚರಣೆಯನ್ನು ಶಾಸಕರಾದ ಸುಭಾಷ್ ಆರ್ ಗುತ್ತೇದಾರ ಅವರು ಉದ್ಘಾಟಿಸಿದರು.
ಒಂದೇ ಜಾತಿ, ಒಂದೇ ಧರ್ಮ ಹಾಗೂ ಒಂದೇ ದೇವರು ಎಂಬ ತತ್ವವನ್ನು ನೀಡಿದ ಅವರ ಸಂದೇಶಗಳು ಸಮಾಜಕ್ಕೆ ತಲುಪುವ ಕೆಲಸವಾಗಬೇಕು ಎಂದರು.
ಹಿಂದುಳಿದ ವರ್ಗಗಳಿಗೆ ದೇವಸ್ಥಾನಗಳು ಪ್ರವೇಶ ನೀಡದಿದ್ದ ಸಂದರ್ಭದಲ್ಲಿ ದೇವಸ್ಥಾನಗಳನ್ನೇ ನಿರ್ಮಾಣ ಮಾಡಿ ಹಿಂದುಳಿದ ವರ್ಗಗಳಿಗೆ ಧಾರ್ಮಿಕ ನಂಬಿಕೆ ಬರುವಂತೆ ಮಾಡಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಕರದಾಳದ ಪೀಠಾಧಿಪತಿಗಳಾದ ಪ್ರಣವಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ, ಕೆಎಂಎಫ್ ನಿರ್ದೇಶಕ ಸಂತೋಷ ಎಸ್ ಗುತ್ತೇದಾರ, ಕಾಶಿನಾಥ ಗುತ್ತೇದಾರ, ತಿಪ್ಪಯ್ಯ ಗುತ್ತೇದಾರ, ತಾಲೂಕು ಪಂಚಾಯತಿ ಸದಸ್ಯ ಮಾಜಿ ಶರಣಬಸಪ್ಪ ಬಿರಾದಾರ, ಮುಖಂಡರಾದ ಪರಮೇಶ್ವರ ಶಿರೂರೆ, ನಿರಗುಡಿ ಗ್ರಾಮ ಪಂಚಾಯತ ಅಧ್ಯಕ್ಷ ಯಶವಂತರಾಯ ಪಾಟೀಲ, ಸಮಾಜದ ಬಸಯ್ಯ ಗುತ್ತೇದಾರ, ಚಂದಯ್ಯ ಗುತ್ತೇದಾರ ಹೆಬಳಿ, ರಾಮಯ್ಯ ಗುತ್ತೇದಾರ, ಗುಂಡಯ್ಯ ಗುತ್ತೇದಾರ, ಕೃಷ್ಣಯ್ಯ ಗುತ್ತೇದಾರ, ಮಂಜುನಾಥ ಬಿರಾದಾರ, ಶಿವಶರಣಪ್ಪ ಚಿಂಚೋಳಿ, ಬಸಣ್ಣ ಪೂಜಾರಿ, ಈರಣ್ಣ ಗುತ್ತೇದಾರ, ಡೊಂಡಿಬಾ ದಡಕೆ, ಮಲ್ಲಯ್ಯ ಗುತ್ತೇದಾರ, ಆರ್ಯ ಈಡಿಗ ಸಮಾಜ ಬಂಧುಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.