ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರಿಕ ಆದ್ಯ ಕರ್ತವ್ಯ

0
45

ಶಹಾಬಾದ: ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರಿಕ ಆದ್ಯ ಕರ್ತವ್ಯ ಪರಿಸರ ಕಲ್ಮಶವಾದರೆ ಇಡೀ ಸಮಾಜವೇ ಕಲ್ಮಶವಾದಂತೆ. ಹೀಗಾಗಿ ಸ್ವಚ್ಛತೆಯನ್ನು ಕಾಪಾಡಿ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬೇಕು ಅದಕ್ಕಾಗಿ ನಾವೆಲ್ಲರೂ ಶ್ರಮವಹಿಸಬೇಕು ಎಂದು ಉದ್ಯೋಗ ಖಾತ್ರಿ ಅಧಿಕಾರಿ ಕಾವೇರಿ ಹೇಳಿದರು.

ಅವರು ಮಂಗಳವಾರ ಹೊನಗುಂಟಾ ಗ್ರಾಪಂ ವತಿಯಿಂದ ಆಯೋಜಿಸಲಾದ ಸ್ವಚ್ಛ ಹೀ ಸೇವಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತಾವು ತೋರಿಸಿಕೊಂಡರೆ ಪೌರ ಬಂಧುಗಳ ಕಷ್ಟದ ಜೊತೆಗೆ ಸ್ವಚ್ಛತೆ ಅರಿವು ಉಂಟಾಗಿ ಅವರು ತಮ್ಮ ಪೆÇೀಷಕರಿಗೆ ಮನೆ ಸುತ್ತಮುತ್ತಲಿನವರಿಗೆ ತಿಳಿಸುವುದರ ಜೊತೆಗೆ ತಮ್ಮ ಮನೆ ಮತ್ತು ಬೀದಿಯನ್ನು ಸ್ವಚ್ಛತೆಯಿಂದ ಕಾಪಾಡುವುದು ಜವಾಬ್ದಾರಿ ನನ್ನದು ಕೂಡ ಎಂಬ ತಿಳುವಳಿಕೆ ಅವರಲ್ಲಿ ಮೂಡುತ್ತದೆ ಸಮಾಜದಲ್ಲಿ ನಮ್ಮ ಜೀವನ ಶೈಲಿ ಹಾಗೂ ಸಾರ್ವಜನಿಕ ವ್ಯವಸ್ಥೆಯಿಂದ ದಿನೇ ದಿನೇ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದರಿಂದ ಪರಿಸರಕ್ಕೆ ತೊಂದರೆಯಾಗುತ್ತಿದೆ. ಪ್ಲಾಸ್ಟಿಕ್ ರಾಸಾಯನಿಕಗಳಿಂದ ಪರಿಸರಕ್ಕೆ ಆಗಬಹುದಾದ ದುಷ್ಟರಿಣಾಮಗಳ ಬಗ್ಗೆ ನಾವು ಮುನ್ನಚ್ಚರಿಕೆ ವಹಿಸದಿದ್ದಲ್ಲಿ ಭವಿಷ್ಯದಲ್ಲಿ ತೀವ್ರ ಗಂಡಾಂತರ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಪಿಡಿಓ ಮಹಾದೇವ ಧಾಮಾ ಮಾತನಾಡಿ, ಪ್ಲಾಸ್ಟಿಕ್ ಎಂಬ ಅಪಾಯಕಾರಿ ವಸ್ತು ಸಕಲ ಜೀವಿಗಳಿಗೆ ವಿಷಕಾರಿಯಾಗಿದೆ. ನಿರ್ವಹಣೆ ತಿಳಿಯದ ಕೆಲವರು ಪ್ಲಾಸ್ಟಿಕ್ ಸುಡುವ ಮೂಲಕ ಪರಿಸರ ಕಲುಷಿತಗೊಳಿಸುತ್ತಿದ್ದಾರೆ. ಪ್ಲಾಸ್ಟಿಕ್ ಸುಟ್ಟಾಗ ಹೊರಡುವ ವಿಷಾನಿಲ ಮಾರಣಾಂತಿಕ ರೋಗಗಳ ಹುಟ್ಟಿಗೆ ಕಾರಣವಾಗಿದೆ. ಪ್ಲಾಸ್ಟಿಕ್ ಬದಲಿಗೆ ಬಹು ಉಪಯುಕ್ತವಾದ ನಾರಿನ, ಬಟ್ಟೆಯ ಚೀಲಗಳು, ಕಟ್ಟಿಗೆಯ ಕುರ್ಚಿ, ಮೇಜು ಬಳಸುವ ಮೂಲಕ ಪ್ಲಾಸ್ಟಿಕ್‍ಗೆ ವಿದಾಯ ಹೇಳಬೇಕಿದೆ ಎಂದು ಹೇಳಿದರು.

ಸ್ವಚ್ಛ ಭಾರತ್, ಸ್ವಸ್ಥ ಭಾರತ, ಪರಿಸರ ಸಂರಕ್ಷಿಸಿ ಆರೋಗ್ಯ ಕಾಪಾಡಿ ಎಂಬ ಘೋಷವಾಕ್ಯದೊಂದಿಗೆ ಹೊನಗುಂಟಾ ಗ್ರಾಮದ ಚಂದ್ರಲಾಪರಮೇಶ್ವರಿ ದೇವಸ್ಥಾನದ ಸ್ವಚ್ಛತಾ ಕಾರ್ಯವನ್ನು ಮಾಡಿ ಸಾರ್ವಜನಿಕರಿಗೆ ಸ್ವಚ್ಛತೆ ಕುರಿತು ವಿಶೇಷ ಜಾಗೃತಿ ಮೂಡಿಸಿದರು ಅಲ್ಲದೆ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದ ಮುಖಂಡರು ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ಸ್ವಚ್ಛತೆ ಕುರಿತು ಪ್ರತಿಜ್ಞೆ ಸ್ವೀಕರಿಸಿದರು.

ಮಲ್ಲೇಶಿ ಭಜಂತ್ರಿ, ಕಾರ್ಯದರ್ಶಿ ಜಗನ್ನಾಥ್, ರಾಜು ಆಡಿನ್, ರಾಜು ಸಣಮೋ,ಜೈಭೀಮ ರಸ್ತಾಪೂರ,ಸಿದ್ದು ವಾರಕರ್,ಸಂಗಣ್ಣ ಇಜೇರಿ,ಶಿವಕುಮಾರ ಬುರ್ಲಿ, ಕಾಶಿನಾಥ ಕುಲಕರ್ಣಿ,ನಾಗು ಕುಂಬಾರ, ಶಿವಕುಮಾರ ಕಾರೊಳ್ಳಿ ಸೇರಿದಂತೆ ಗ್ರಾಪಂ ಸದಸ್ಯರು, ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಇದ್ದರು. ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here