ಕಲಬುರಗಿ: ಬರಹಖಾಲಿತನವನ್ನುತುಂಬುವುಂತಹದ್ದುಅನ್ಯಾಯ, ಅವಮಾನಗಳಿಗೆ ಎದುರುಗೊಳ್ಳುವಂತದ್ದಾಗಿದೆ. ಬರಹ ಪ್ರಜ್ಞೆಯನ್ನು ಮೂಡಿಸುತ್ತದೆ, ವಿಶಿಷ್ಟ್ಯವಾದ ಶಕ್ತಿ ಸಾಹಿತ್ಯದಲ್ಲಿರುತ್ತದೆ.ಅಂತಹ ಶಕ್ತಿಯನ್ನು ಬರಹದ ಮೂಲಕ ಅನೇಕಲ್ಯ, ಅಂಬೇಡ್ಕರ್ ಫಸಲು ಮತ್ತುಕಾಲದಕನ್ನಡಿ ಕೃತಿಗಳು ಹೊರಗೆಳೆದಿವೆ ಎಂದು ಹಿರಿಯ ಸಾಹಿತಿಡಾ.ಜಯಪ್ರಕಾಶ ಮಾವಿನಕುಳಿ ಅಭಿಪ್ರಾಯಪಟ್ಟರು.
ಗುಲ್ಬರ್ಗ ವಿಶ್ವವಿದ್ಯಾಲಯದಕನ್ನಡಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿಕನ್ನಡಅಧ್ಯಯನ ಸಂಸ್ಥೆ ಹಾಗೂ ಸಪ್ನ ಬುಕ್ ಹೌಸ್, ಬೆಂಗಳೂರು ಸಹಯೋಗದೊಂದಿಗೆ ಪೆÇ್ರ.ಎಚ್.ಟಿ. ಪೋತೆಯವರ ‘ಅನೇಕಲವ್ಯ’ (ಕಥಾ ಸಂಕಲನ), ‘ಅಂಬೇಡ್ಕರ್ ಫಸಲು’ (ಜೀವನಕಥನ) ಹಾಗೂ ಸಂದರ್ಶಕ ಪ್ರಾಧ್ಯಾಪಕ ಡಾ.ಶ್ರೀಶೈಲ ನಾಗರಾಳ ಅವರ ‘ಕಾಲದಕನ್ನಡಿ’ (ವಿಮರ್ಶೆ) ಗ್ರಂಥಗಳ ಲೋಕಾರ್ಪಣೆ ಮಾಡಿ ಮಾತನಾಡಿದಅವರು, ಒಂದು ಸಮಾಜದ ಬದಲಾವಣೆಗೆ ಪೆÇೀತೆಯವರ ಕೃತಿಗಳು ಶಕ್ತಿ ತುಂಬುತ್ತವೆ. ಅವರ ಕಥೆಗಳಲ್ಲಿ ಚಿಂತನೆ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತದೆ. ಒಬ್ಬ ಬರಹಗಾರನಿಗೆಇರಬೇಕಾದ ಸೂಕ್ಷ್ಮ ಸಂವೇದನೆ ಪೆÇೀತೆಯವರಿಗೆಇದೆ.ಹೀಗಾಗಿ ಅವರ ಪುಸ್ತಕಗಳು ಓದಿಸಿಕೊಂಡು ಹೋಗುತ್ತವೆ. ಡಾ.ನಾಗರಾಳ ಅವರಲ್ಲಿ ವಾಸ್ತವಿಕತೆ ಪ್ರಜ್ಞೆತುಂಬ ಕೆಲಸ ಮಾಡಿದೆ. ಹೀಗಾಗಿ ವಿಮರ್ಶೆಯ ಮೊನಚು ಹರಿತವಾಗಿದೆ.ಒಂದುಕೃತಿಯನ್ನು ವಿವಿಧ ಆಯಾಮಗಳಲ್ಲಿ ವಿಶ್ಲೇಷಿಸುವ ಗುಣ ನಾಗರಾಳ ಅವರಲ್ಲಿಇದೆಎಂದು ಹೇಳಿದರು.
ಕೃತಿಕುರಿತುಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೆÇ್ರ. ವಿಕ್ರಮ ವಿಸಾಜಿಅವರು ಮಾತನಾಡುತ್ತ ನಮ್ಮ ಸಮಾಜದ ಪಲ್ಲಟಗಳನ್ನು ತಲ್ಲಣ, ಸಂಕಟಗಳು, ಸಮಸ್ಯೆ-ಸವಾಲುಗಳನ್ನು ಆಕರವಾಗಿರಿಸಿ ಪಾರಮಾರ್ಥಿಕತೆಯನ್ನು ಅರಿತುಕೊಳ್ಳುವ ಬಗೆಯನ್ನುಡಾ.ನಾಗರಾಳ ಅವರು ವಿಶ್ಲೇಷಿಸಿದ್ದಾರೆ.ವಾಸ್ತವಗಳನ್ನು ಸಂವೇದನೆಗೊಳಿಸುವ ಕಲೆಗಾರಿಕೆ ಪೆÇ್ರ.ಪೆÇೀತೆಯವರ ಕಥೆಗಳಲ್ಲಿ ಅನುರಣನಗೊಂಡಿವೆ.
ಪೆÇೀತೆಯವರ ಕಥೆಗಳಲ್ಲಿ ಅಂಬೇಡ್ಕರ್‍ಚಿಂತನೆ ವಾದ, ಪ್ರಜ್ಞೆಗಳೆಲ್ಲವು ಸಮೀಕರಿಸಿಕೊಂಡು ಅಂತರಾಳಧಲ್ಲಿ ಮುಖಾಮುಖಿಗೊಳಿಸಿಕೊಂಡು ಆಂತರ್ಯದಲ್ಲಿ ರಚನೆಗೊಳುತ್ತವೆ. ಅಂಬೇಡ್ಕರ್ ವಿಚಾರಗಳನ್ನು ಹೊಸ ತಲೆಮಾರಿನಲ್ಲಿ ಮುಂದುವರೆಸಿದ ಹಿರಿಯರ ಮೌಲ್ಯಗಳನ್ನು ವಿಸ್ತರಿಸುತ್ತ ಹೋದವರಕುರಿತಾದಜೀವನಕಥನವಾಗಿದೆ.ಅಂಬೇಡ್ಕರ್‍ಅವರ ಪ್ರಜ್ಞೆಗಳನ್ನು ಜಾಗೃತಗೊಳಿಸುತ್ತವತ್ತ ತೊಡಗಿಸಿಕೊಂಡವರ ಚಿಂತನೆಗಳಿಗೆ ಈ ಕೃತಿಆಕರ ವಸ್ತುವಾಗಿದೆಎಂದರು.
ಡಾ. ಸೋಮಲಿಂಗ ಜಿ. ಗೆಣ್ಣೂರ್, ಬಾಗಲಕೋಟೆಜಿಲ್ಲೆಯಕೆ.ಎ.ಎಸ್. ವಿಶೇಷ ಜಿಲ್ಲಾಧಿಕಾರಿಗಳು ಹಾಗೂ ಸಮೂಹ ವ್ಯವಸ್ಥಾಪಕರು ಕೃಷ್ಣಾ ಮೇಲ್ದಂಡೆಯೋಜನೆ, ಬಾಗಲಕೋಟೆಇವರು ಮಾತನಾಡುತ್ತ ಅವಮಾನಗಳನ್ನು ಚಾಲೇಂಜ್ ಆಗಿ ತೆಗೆದುಕೊಳಬೇಕೆ ವಿನಹ, ರಿವೇಂಜ್ ಆಗಿ ತೆಗೆದುಕೊಳ್ಳಬಾರದು ಎನ್ನುತ್ತತಮ್ಮಜೀವನದಲ್ಲಿ ಅನುಭವಿಸಿದ ಅವಮಾನ ಕಷ್ಟಗಳನ್ನು ಹೇಳುವದರ ಜೊತೆಗೆ ಡಿ.ಸಿ. ಹುದ್ದೆವರೆಗೆಅನುಭವಿಸದ ಅನುಭವಗಳನ್ನು ಕುರಿತು ವಿವರಿಸಿದರು.
ಡಾ. ಶ್ರೀಶೈಲ ನಾಗರಾಳ ಅವರುತಮ್ಮಕಾಲದಕನ್ನಡರಚನೆಯ ಅನುಭವಗಳನ್ನು ಹಂಚಿಕೊಂಡರು.ಪೆÇ್ರ.ಎಚ್.ಟಿ. ಪೋತೆಯವರು ಇಂದಿನ ಯುವಕರು ಹೆಚ್ಚು ಓದಬೇಕು.ತಮ್ಮ ವೈಚಾರಿಕಚಿಂತನೆಯನ್ನು ಕೃತಿಗಳ ಮೂಲಕ ಹೊರತರಬೇಕು.ಯುವಕರು ಮುಂದೆ ಬರಬೇಕು. ಹೆಚ್ಚು ಹೆಚ್ಚು ಓದಬೇಕು. ನಮಗಿಂತಲೂ ಮುಂದೆ ಹೋಗಬೇಕು ಎಂದರು.ಪೆÇ್ರ.ಬಿ.ಎಂ.ಕನಹಳ್ಳಿ ಅಧ್ಯಕ್ಷತೆ ವಹಿಸಿದರು, ಶ್ರಿ ಸುರೇಶ ಬಡಿಗೇರ ಉಪಸ್ಥಿತರಿದ್ದರು ಡಾ.ಎಂಬಿ.ಕಟ್ಟಿ ಸ್ವಾಗತಿಸಿದರು.ಡಾ. ಹಣಮಂತ ಮೇಲ್ಕೇರಿ ವಂದಿಸಿದರು. ಡಾ. ಸಂತೋಷಕುಮಾರಕಂಬಾರ ನಿರೂಪಿಸಿದರು.