ಬಾವಿ ತೊಡುವುದರೊಂದಿಗೆ ಕಾಮಗಾರಿಗೆ ಚಾಲನೆ

0
120
  • ಆರ್.ಟಿ ನಗರದಲ್ಲಿ ಶ್ರೀಕರ ನಾರಾಯಣ ಮಂದಿರ- ಉತ್ತರಾದಿ ಶ್ರೀಗಳಿಂದ ಭೂಮಿ ಪೂಜೆ

ಕಲಬುರಗಿ: ಇಲ್ಲಿನರಾಮ ಮಂದಿರರಿಂಗ್‍ರಸ್ತೆಯಲ್ಲಿ ಬರುವರವೀಂದ್ರನಾಥಟ್ಯಾಗೋರ್ (ಆರ್.ಟಿ ನಗರ) ನಗರ ಬಡಾವಣೆಯಲ್ಲಿರುವಉತ್ತರಾದಿ ಮಠಕ್ಕೆ ಸೇರಿದ್ದ ನಿವೇಶನದಲ್ಲಿ ಶ್ರೀಕರ ನಾರಾಯಣ ಮಂದಿರ, ಸಭಾ ಭವನ, ತೆರದ ಬಾವಿ ಸೇರಿದಂತೆ ಹಲವು ನಿರ್ಮಾಣ ಕಾಮಗಾರಿಗಳಿಗೆ ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದರು ಶನಿವಾರ ಭೂಮಿ ಪೂಜನ ನೆರವೇರಿಸಿ ಕಾಮಗಾರಿಗಳೆಲ್ಲವೂ ಸುಗಮವಾಗಿ ಸಾಗಲಿ ಎಂದು ಪರಮಾನುಗ್ರಹ ಮಾಡಿದರು.

ಗುರುಗಳು ಪವಿತ್ರ ಮಂತ್ರಾಕ್ಷತೆ ಪುಷ್ಪಗಳನ್ನು ನಿವೇಶನದ ಭೂಮಿ ಪೂಜನ ಸ್ಥಳದಲ್ಲಿ ಅಪಿಸುವ ಮೂಲಕ ಇಲ್ಲಿ ಶ್ರೀಕರ ನಾರಾಯಣ ಮಂದಿರವಾಗಲಿ, ಇದರಿಂದ ಸರ್ವರಉತ್ತರೋತ್ತರ ಏಳಿಗೆಯಾಗುತ್ತದೆ ಎಂದು ಅನುಗ್ರಹಿಸಿದರು.ಗುರುಗಳ ಮಾತಿಗೆ ಸೇರಿದ್ದಆರ್.ಟಿ ನಗರ, ಓಝಾ ಬಡಾವಣೆ, ಜಿಡಿಎ, ವಿವೇಕಾನಂದ ನಗರ ಬಡಾವಣೆಯ ಸಮಸ್ತ ಭಕ್ತರೆಲ್ಲರೂ ಭಗವನ್ನಾಮ ಸಂಕೀರ್ತನೆಯ ಜಯಘೋಷಗಳನ್ನು ಹಾಕುವ ಮೂಲಕ ಕರತಾಡನ ಮಾಡುತ್ತ ಗುರುಗಳ ಸಂಕಲ್ಪವನ್ನು ಸ್ವಾಗತಿಸಿದರು.

Contact Your\'s Advertisement; 9902492681

ದಿ. ರಂಗಾಚಾರ್ಯರಾಯಚೂರಕರ್‍ಅವರುಉತ್ತರಾದಿ ಮಠಕ್ಕೆ ಈ ನಿವೇಶನಗಳನ್ನು ದಾನರೂಪದಲ್ಲಿ ನೀಡಿದಶಕವೇಆಗಿತ್ತು. ಇಲ್ಲಿ ಮಠದಕಾಮಗಾರಿ ನಡೆಯಬೇಕು.ದಾರ್ಮಿಕವಾಗಿಇಲ್ಲೊಂದುಕೇಂದ್ರಕಾರ್ಯಾರಂಭಿಸಬೇಕೆಂದು ಬಡಾವಣೆಯ ಭಕ್ತರ ಬಹುದಿನಗಳ ಬೇಡಿಕೆಯಾಗಿತ್ತು. ಗುರುಗಳು ಇಂದು ಬಡಾವಣೆಗೆ ಆಗಮಿಸಿ ತಮ್ಮಕರಕಮಲಗಲಿಂದ ಭೂಮಿ ಪೂಜನ ನೆರವೇರಿಸುವ ಮೂಲಕ ಭಕ್ತರ ಬೇಡಿಕೆಈಡೇರಿದಂತಾಗಿದೆ.

ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿ, ಹಿರಿಯ ಸಿವಿಲ್ ಇಂಜಿನಿಯರ್ ನರೇಂದ್ರ ಫಿರೋಜಾಬಾದ್‍ದಂಪತಿ ಭೂಮಿ ಪೂಜನದಲ್ಲಿ ಮುಂಚೂಣಿಯಲ್ಲಿದ್ದು ಸಕಲ ವಿಧಿ ವಿಧಾನಗಳನ್ನು ನೆರವೇರಿಸಿದರು.ಮಂದಿರ ನಿರ್ಮಾಣದ ಮಂಗಳಕರವಾದಂತಹ ಕಾರ್ಯ ಸಾಂಗೋಪಾಂಗವಾಗಿ ನೆರವೇರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವ ಮೂಲಕ ಸತ್ಯಾತ್ಮತೀರ್ಥರು ಪವಿತ್ರ ಮಂತ್ರಾಕ್ಷತೆ, ಜಲವನ್ನು ನಿರ್ಮಾಣಕಾಮಗಾರಿಯ ಸ್ಥಳದಲ್ಲಿ ಅರ್ಪಿಸಿ ಸತ್ಕಾರ್ಯ ಬೇಗ ಕೈಗೂಡುವಂತೆ ಹರಸಿದರು.

ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್ಯ, ಮಠಾಧಿಕಾರಿಗಳಾದ ರಾಮಾಚಾರ್ಯಘಂಟಿ, ಪಂ.ವಿನೋದಾಚಾರ್ಯ ಗಲಗಲಿ, ಲಕ್ಷ್ಮಣಾಚಾರ್ಯ ಸರಡಗಿ, ಅಹಂಕಾರಿಆಚಾರ್ಯರು, ಬಡಾವಣೆಯ ಹಿರಿಯರು, ಹಂಸನಾಮಕ ಪಾರಾಯಣ ಸಂಘದಅಧ್ಯಕ್ಷರಾದ ಪದ್ಮನಾಭಾಚಾರ್ಯಜೋಷಿ, ನರೇಂದ್ರ ಫಿರೋಜಾಬಾದ್, ಪತ್ರಕರ್ತರಾದ ಶ್ರೀನಿವಾಸ ಸಿರನೂರಕರ್, ಶೇಷಮೂರ್ತಿಅವಧಾನಿ, ಶೇಷಗಿರಿ ಹುಣಸಗಿ, ಶ್ಯಾಮಸುಂದರ, ಗುರುರಾಜ ನಾವದಗಿ, ಆನಂದಜೋಷಿ, ಮಧ್ವೇಶ ಹಂದÀರಕಿ, ಗೀತಾ ಪಾರಾಯಣ ಸಂಘದ ಕೆಬಿ ಕುಲಕರ್ಣಿ. ಮಾಣಿಕರಾವಕುಲಕರ್ಣಿ, ಗಿರೀಶ ಯಾಲಾಳಕರ್, ವಿಲಾಸ ಪಾಟೀಲ್, ರಾಘವೇಂದ್ರಕುಲಕರ್ಣಿ ನರಿಬೋಳ್, ಮನೋಹರ, ರಾಜು, ವೆಕಂಟೇಶ ಬಬಲಾದ, ಶ್ರೀನಿವಾಸ ಚಾತ್ರಾ, ರಾಜು ಫಿರೋಜಾಬಾದ್, ವಿಪ್ರ ಸಮಾಜ ಮುಖಂಡರವಿ ಲಾತೂರಕರ್ ಹಾಗೂ ಓಝಾ, ಆರ್ಟಿ ನಗರ, ವಿವೇಕಾನಂದ ನಗರ, ಜಿಡಿಎ ಲೇಔಟ್ ಬಡಾವಣೆಯ ನಿವಾಸಿಗಳು, ಸುಮಂಗಲೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುಗಳಿಂದ ಫಲ- ಮಂತ್ರಾಕ್ಷತೆ ಪಡೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here