ಶಹಾಬಾದ: ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಕಾವ್ಯ ಇಡೀ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಸಾಹಿತ್ಯ ಕೊಡುಗೆಯಾಗಿದೆ ಎಂದು ಶಿವಕುಮಾರ ನಾಟೇಕಾರ ಹೇಳಿದರು.
ಅವರು ರವಿವಾರ ನಗರದ ಹಳೆಶಹಾಬಾದ ವಾಲ್ಮೀಕಿ ವೃತ್ತದಲ್ಲಿ ಆಯೋಜಿಸಲಾದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾಲ್ಮೀಕಿ ರಾಮಾಯಣ ದೇಶ-ಭಾμÉಗೆ ಸೀಮಿತಗೊಳ್ಳದೆ ಜಾಗತಿಕವಾಗಿ ಆರಾಧಿಸಲ್ಪಟ್ಟಿದೆ.ಜನಸಮುದಾಯದ ಎಲ್ಲ ಸಮಸ್ಯೆಗಳು, ಸಂಕಟಗಳು, ಸವಾಲುಗಳಿಗೆ ವಾಲ್ಮೀಕಿ ರಾಮಾಯಣದಲ್ಲಿ ಉತ್ತರ ಸಿಗುತ್ತದೆ. ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ಉತ್ತಮ ಸಮಾಜ ನಿರ್ಮಾಣದ ಮಹತ್ವದ ಸಂಗತಿಗಳನ್ನು ರಾಮಾಯಣ ಮಹಾಕಾವ್ಯದಿಂದ ನಾವು ಕಲಿಯಬಹುದಾಗಿದೆ ಎಂದು ಹೇಳಿದರು.
ಹಿರಿಯರಾದ ದೇವೆಂದ್ರಪ್ಪ ಹೊನಗುಂಟಿ, ನಗರಸಭೆಯ ಸದಸ್ಯರಾದ ಜಗದೇವ ಸುಬೇದಾರ,ತಿಪ್ಪಣ್ಣ ನಾಟೇಕಾರ, ಅಣ್ಣಾರಾಯ ಹುಗ್ಗಿ, ಯಂಕಣ್ಣ ಸುಬೇದಾರ, ಮಹಾಂತೇಶ ಸುಬೇದಾರ ಇತರರು ಉಪಸ್ಥಿತರಿದ್ದರು.