ಕಲಬುರಗಿ: ಸಮುದಾಯದಲ್ಲಿ ಕ್ಷಯರೋಗದ (ಟಿಬಿಯ) ಲಕ್ಷಣಗಳು ಇರುವ ವ್ಯಕ್ತಿಗಳಿಗೆ ಸಹಕರಿಸಲು ನೀ – ಕ್ಷಯ್ ಮಿತ್ರ ನಮ್ಮೊಂದಿಗೆ ಕೈ ಜೋಡಿಸಲು ಕ್ಷಯ ಮುಕ್ತ ಗ್ರಾಮ ಮಾಡುವಲ್ಲಿ ದಾನಿಗಳ ಪಾತ್ರ ಬಹಳ ಪ್ರಾಮುಖ್ಯತೆ ಇದೆ ಅದರಂತೆ ಕ್ಷಯರೋಗ ಗುಣಮುಖವಾಗುವಂತಹ ರೋಗವಾಗಿದೆ ಇದರ ಬಗ್ಗೆ ಭಯ ಪಡದೆ ಕ್ಷಯ ಖಚಿತವಾಗಿರುವ ರೋಗಿ ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆದು ಗುಣಮುಖವಾದಗ ಕ್ಷಯರೋಗ ಮುಕ್ತ ಕರ್ನಾಟಕ ಮಾಡಲು ಸಾಧ್ಯವಿದೆ ಟಿಬಿ ಮುಕ್ತ ಅಭಿಯಾನಕ್ಕೆ ನೀ – ಕ್ಷಯ ಮಿತ್ರರರಾಗಲು ಸಂಘ ಸಂಸ್ಥೆಗಳು ಟ್ರಸ್ಟ್ , ಪ್ರಭಾವಿ ವ್ಯಕ್ತಿಗಳು ಕೈ ಜೋಡಿಸಬೇಕೆಂದು ಜಿಲ್ಲಾ ಹಿರಿಯ ಆರೋಗ್ಯ ನೀರಿಕ್ಷಾಣಧಿಕಾರಿ ಸಂತೋಷ ಕುಡಳ್ಳಿ ಹೇಳಿದರು.
ಅವರು ಚಿತ್ತಾಪೂರ ತಾಲ್ಲೂಕಿನ ಡಾ ಓಮ್ ಇಂಡೊ ಜರ್ಮನ್ ಆಸ್ಪತ್ರೆಯ ಪ್ರಾಂಗಣದಲ್ಲಿ ಏರ್ಪಡಿಸಿದ್ದ ನೀ – ಕ್ಷಯ್ ಮಿತ್ರ ಕಾರ್ಯಕ್ರಮ, ಕ್ಷಯರೋಗಿಗೆ ಪೌಷ್ಟಿಕಾಹಾರ ಧಾನ್ಯದ ಕಿಟ್ ವಿತರಣಾ ಕಾರ್ಯಕ್ರಮ . ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಕಲಬುರಗಿ ಹಾಗೂ ತಾಲ್ಲೂಕ ಆರೋಗ್ಯ ಕೇಂದ್ರ ಚಿತ್ತಾಪುರ. ಹಾಗೂ ಜ್ಯೋತಿ ಸೇವಾ ಕೇಂದ್ರ ಟ್ರಸ್ಟ್ ಚಿತ್ತಾಪುರ ಇವರ. ಸಂಯೋಗದಲ್ಲಿ ಹಮ್ಮಿಕೊಂಡ.
75ನೇ ಆಜಾದಿಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿ ನೀ – ಕ್ಷಯ್ ಮಿತ್ರ ಅಭಿಯಾನ ಕಾರ್ಯಕ್ರಮದಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ಪೌಷ್ಟಿಕಾಹಾರ ನೀಡಲು ಪ್ರತಿಯೊಬ್ಬ ದಾನಿಗಳು ಟ್ರಸ್ಟ್, ಸಂಸ್ಥೆಗಳು ಸಾಮಾನ್ಯ ಪ್ರಜೆಗಳು ಕೈ ಜೋಡಿಸುವುದರ ಜೊತೆಗೆ ಜನರಿಗೆ ಕ್ಷಯರೋಗ ಕುರಿತು ಜಾಗೃತಿ ಮೂಡಿಸಿದರೆ.
ಸಾರ್ವಜನಿಕರಿಗೆ ಕ್ಷಯರೋಗದಿಂದ ಬಳಲುತ್ತಿರುವವರು ಉತ್ತಮವಾದ ಆಹಾರದ ಸೇವನೆ ಬಹಳ ಮುಖ್ಯ ಅದರಂತೆ ವಿವಿಧ ಕ್ಷೇತ್ರದ ಪ್ರಮುಖ ವ್ಯಕ್ತಿ ಗ್ರಾಮೀಣ ಭಾಗದ ಪಂಚಾಯತ ಪ್ರತಿ ಸದಸ್ಯರು ದಾನಿಗಳು ಕ್ಷಯರೋಗಿಗೆ ದತ್ತು ತೆಗೆದುಕೊಳ್ಳುವ ಜವಬ್ದಾರಿ ವಹಿಸಿದ್ದರೆ ಕ್ಷಯರೋಗದ ಎಂಬ ಕೀಳಾರಿಮೆ ಹೊಗಲು ಸಾಧ್ಯ ಕ್ಷಯರೋಗ ನಿರ್ಮೂಲನೆ ಮಾಡಲು.
ಕೇಂದ್ರ ಸರ್ಕಾರ ಕೈಗೊಂಡಿರುವ ಮಹತ್ವದ ಕಾರ್ಯಕ್ರಮ ಕ್ಷಯ ಮುಕ್ತ ಭಾರತ / ಕರ್ನಾಟಕ ಎಂಬ ಘೋಷವಾಕ್ಯದಂತೆ ದಾನಿಗಳು ಕ್ಷಯರೋಗ ನಿರ್ಮೂಲನಗೆ ಪಣತೊಡಬೇಕೆಂದರು ಅದರಂತೆ ಜ್ಯೋತಿ ಸೇವಾ ಕೇಂದ್ರ ಟ್ರಸ್ಟ್ ನವರು ಕೋವಿಡ್ ಸಮಯದಲ್ಲಿ ಕ್ಷಯರೋಗಿಗೆ ಸಹಾಯ ಮಾಡದನ್ನು ಇಲ್ಲಿ ಸ್ಮರಿಸಬಹುದು. ಉತ್ತಮ ಕಾರ್ಯ ನಿರ್ವಹಿಸುತ್ತಿದ್ದರೆ ಎಂದು ಹೇಳಿದರು.
ಜ್ಯೋತಿ ಸೇವಾ ಕೇಂದ್ರ ಟ್ರಸ್ಟ್ ನ, ಸಿಸ್ಟರ್ ನೂಸಿ ಪ್ರೀಯಾ ಅವರು ಮಾತನಾಡುತ್ತಾ ಆರೋಗ್ಯ ಇಲಾಖೆಯೊಂದಿಗೆ ಸಹಭಾಗಿತ್ವ ಕಾರ್ಯಕ್ರಮದಲ್ಲಿ ಭಾಗವಹಿಸುವದರ ಜೊತೆಗೆ ಕ್ಷಯರೋಗದಿಂದ ಬಳಲುತ್ತಿರುವ ಕ್ಷಯರೋಗಿಗೆ ಪೌಷ್ಟಿಕಾಂಶವುಳ್ಳ ವಿವಿಧ ಆಹಾರ ಧಾನ್ಯ ಒಬ್ಬ ವ್ಯಕ್ತಿ ಸರಿಯಾಗಿ ಮಾತ್ರೆ ತೆಗೆದುಕೊಳ್ಳುವ ಮುಂಚರ ಸತ್ವ ಭರಿತ ಪೌಷ್ಟಿಕಾಂಶ ಊಟ ಮಾಡಿದರೆ ಶಕ್ತಿ ಹೆಚ್ಚುತದೆ ಉತ್ತಮ ಜೀವನ ಮತ್ತು ಆರೋಗ್ಯ ಪಡೆಯುವಲ್ಲಿ ಸಂದೇಹವಿಲ್ಲ .
ಕ್ಷಯರೋಗಿ ನಮ್ಮ ಚಿತ್ತಾಪುರ ನಗರ ಕ್ಷಯ ಮುಕ್ತ ನಗರ ಮಾಡಲು ನಮ್ಮದೊಂದು ಚಿಕ್ಕ ಪ್ರಯತ್ನ 25 ಕ್ಷಯರೋಗಿಗಳಿಗೆ ಆರು ತಿಂಗಳ ವರಿಗೆ ದತ್ತು ತೆಗೆದುಕೊಂಡು ಅವರ ಆರೋಗ್ಯದ ಸುಧಾರಣೆ ನನ್ನ ಜವಬ್ದಾರಿ ನೀಡಲು ಅವಕಾಶ ನೀಡಿದ ಕ್ಷಯರೋಗ ನಿರ್ಮೂಲನಾ ಕೇಂದ್ರದ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸುತ್ತೆನೆ ಎಂದು ಹೇಳಿ ಇಲಾಖೆಯ ಕಾರ್ಯದ ಬಗ್ಗೆ ಪ್ರಶಂಸೆಸಿದರು.
ಅತಿಥಿ ಜಿಲ್ಲಾ ಡಿಆರ್ ಟಿಬಿ ಸಕ್ಷಮ್ ಟಿ ಐ ಎಸ್ ಎಸ್ ಸಮಾಲೋಚಕ ಮಂಜುನಾಥ ಕಂಬಾಳಿಮಠ ಅವರು ಮಾತನಾಡುತ್ತ ಕ್ಷಯರೋಗ ಗಾಳಿ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುವಂತ ರೋಗವಾಗಿದ್ದು ಪ್ರತಿ ಒಬ್ಬರು ಎಚ್ಚರವಹಿಸಬೇಕು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಕ್ಷಯರೋಗ ಪರೀಕ್ಷೆ ಮತ್ತು ಚಿಕಿತ್ಸೆ ಸಂಪೂರ್ಣವಾಗಿ ಉಚಿತ ಇರುತ್ತದೆ. ಮತ್ತು ಆರು ತಿಂಗಳ ಚಿಕಿತ್ಸೆಯ ಸಂಧರ್ಬದಲ್ಲಿ ರೋಗಿಗಳಿಗೆ ಪೌಷ್ಟಿಕ ಆಹಾರ ಸಂಬಂದ ಮಾಸಿಕ ೫೦೦ ರೂ, ಗಳನ್ನು ಕೊಡಲಾಗುತ್ತದೆ ಇದರ ಉಪಯೋಗ ಪ್ರತಿ ರೋಗಿಯು ಪಡೆಯಬೇಕು ಎಂದು ತಿಳಿಸಿದರು.
ವೇದಿಕೆ ಮೇಲೆ ಅಧ್ಯಕ್ಷತೆ ವಹಿಸಿದ್ದ ಡಾ. ಇಮಾನ್ ಅವರು ಅಧ್ಯಕ್ಷತೆ ನುಡಿಗಳನಾಡಿದರು. ವೇದಿಕೆ ಮೇಲೆ ಪ್ರಮುಖರಾದ ಹಿರಿಯ ಕ್ಷಯರೋಗ ಮೇಲ್ವಿಚಾರಕ ಉದಯಕುಮಾರ್ ಭಾಗೋಡಿ , ಜ್ಯೋತಿ ಸೇವಾ ಕೇಂದ್ರ ಟ್ರಸ್ಟ್ ನ ಆರೋಗ್ಯ ಸಂಯೋಜಕ ಆನಂದ ಮುಕ್ತೆದಾರ, ಟಿಬಿ ಹೆಚ್ ವಿ. ಸೈಯದ್ ಮುನಾವರ್, ಕಿರಿಯ ಆರೋಗ್ಯ ನೀರಿಕ್ಷಾಣಧಿಕಾರಿ ರೇಷ್ಮಾ. ಕ್ಷಯ ರೋಗಿಗಳು, ಜ್ಯೋತಿ ಸೇವಾ ಕೇಂದ್ರ ಟ್ರಸ್ಟ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದರು. ರುದ್ರಪ್ಪ ಹಣಮಂತ ಸ್ವಾಗತಿಸಿದರು. ಆನಂದ ನಿರೂಪಿಸಿದರು. ಹಣಮಂತ ವಂದಿಸಿದ್ದರು.