ಬೆಂಳೂರಿನಲ್ಲಿ 18 ಮತ್ತು 19 ರಂದುದಸಂಸ ಪ್ರಮುಖರ ಸಭೆ ನಡೆಯಲಿದ್ದು, ರಾಜ್ಯ ಸರ್ಕಾರದ ವಿರುದ್ಧ ಹೋರಾಟರೂಪಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ದಿ. 30 ರಂದು ಕಲಬುರಗಿಯಲ್ಲಿ ಬಿಜೆಪಿ ರಾಜ್ಯಮಟ್ಟದ ಓಬಿಸಿ ಮೋರ್ಚಾ ಸಮಾವೇಶ ಆಯೋಜಿಸಲಾಗಿದ್ದು, ಹಿಂದುಳಿದ ವರ್ಗದಜನರನ್ನು ಹುನ್ನಾರಿಗೆ ಸಿಲುಕಿಸುವ ಪ್ರಯತ್ನಅಡಗಿದೆ. -ಅರ್ಜುನ ಭದ್ರೆ, ದಲಿತ ಮುಖಂಡ.
ಕಲಬುರಗಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ನಂತರದಎರಡನೇ ಸ್ಥಾನದಲ್ಲಿ ನಿಲ್ಲುತ್ತಾರೆ ಎಂಬ ದೇವದುರ್ಗ ಶಾಸಕ ಶಿವನಗೌಡ ನಾಯಕ ಹೇಳಿಕೆಯನ್ನು ರಾಜ್ಯದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ ಖಂಡಿಸಿದರು.
ಅಂಬೇಡ್ಕರ್ ವಿಚಾರಧಾರೆಗಳಿಗೆ ಸಂಪೂರ್ಣ ವಿರೋಧಿಸಿ ಆರ್‍ಎಸ್‍ಎಸ್‍ಗೆ ತಲೆಭಾಗುವ ಮುಖ್ಯಮಂತ್ರಿ ಬಸವರಾಜ ಅವರೇಗೆಎರಡನೇ ಅಂಬೇಡ್ಕರ್ ಆಗುತ್ತಾರೆ? ನಿಮ್ಮ ಗುಲಾಮಿ ಪ್ರವೃತ್ತಿಗೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರು ಬಳಸಿಕೊಳ್ಳಲು ನೈತಿಕತೆ ಏನಿದೆ? ಎಂದು ಸುದ್ದಿ ಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕೋಲಾರದ ಮಾಲೂರಿನಲ್ಲಿದೇವರಗುಜ್ಜಕೋಲು ಸ್ಪರ್ಶಿಸಿದ್ದಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಬಾಲಕನ ಕುಟುಂಬಕ್ಕೆ 60 ಸಾವಿರದಂಡ ವಿಧಿಸಿದ ಪ್ರಕರಣಕಣ್ಮುಂದೆಇದೆ.ಅಲ್ಲದೆ ಚಿಕ್ಕಮಗಳೂರಿನಲ್ಲಿ ಒಬ್ಬರತೋಟದ ಮೂಲಕ ಪರಿಶಿಷ್ಟ ಜಾತಿಗೆ ಸೇರಿದ 10ಕ್ಕೂ ಹೆಚ್ಚು ಕೂಲಿಕಾರ್ಮಿಕರನ್ನುಕೂಡಿ ಹಾಕಿದ ಪ್ರಕರಣಕಣ್ಣಿಗೆಕಾಣಿಸಲ್ಲವೇ?ರಾಜ್ಯದಲ್ಲಿ ಸಾಮಾಜಿಕ ಸಮಾನತೆಎಲ್ಲಿದೆ? ಎಂದುಖಾರವಾಗಿ ಪ್ರಶ್ನಿಸಿದರು.
ಈ ಮಧ್ಯ ಮಾಜಿ ಸಚಿವಕೆ.ಎಸ್. ಈಶ್ವರಪ್ಪನವರುದಲಿತರಲ್ಲಿ ಶ್ರೀಮಂತ ಇದ್ದವರಿಗೆ ಮೀಸಲಾತಿ ಬೇಡಎಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಭದ್ರೆ, ಉತ್ತರ ಪ್ರದೇಶದಲ್ಲಿಒಬ್ಬ ಶ್ರೀಮಂತ ಯುವಕಅತಿ ಸೂರದ್ರುಪಿ ಇರುವುದನ್ನು ಸಹಿಸಿಕೊಳ್ಳದೆ ಹತ್ಯೆ ಮಾಡಿದ್ದರು.ಶ್ರೀಮಂತ ದಲಿತರು ಮದುವೆ ಸಂದರ್ಭದಲ್ಲಿಕುದುರೆ ಮೇಲೆ ಕುಳಿತುಕೊಂಡು ಮೆರವಣಿಗೆ ಮಾಡಿಕೊಳ್ಳುವಂತಿಲ್ಲ ಎಂಬುದು ನ್ಯಾಯವೇ?ಎಂದು ಟೀಕಿಸಿದರು.