ಕಲಬುರಗಿ: ಪ್ರವಾದಿ ಮೊಹಮ್ಮದ್ ಅವರ ಜೀವನ ಸಂದೇಶ ಮತ್ತು ಸದ್ಭಾವನ ಸಮಾರಂಭವನ್ನು ಇಲಿಯಾಸ್ ಸೇಠ್ ಭಾಗವಾನ್ ಮಿಲತ್ ಫೌಂಡೇಶನ್ ವತಿಯಿಂದ ಜರುಗಿತು.
ಪ್ರವಾದಿ ಮೊಹಮ್ಮದ್ ಅವರ ಸಂದೇಶ ಮಾನವರನ್ನು ಅಂಧಕಾರದಿಂದ ಬೆಳಕಿನೆಡೆಗೆ ಕೆಡುಕಿನಿಂದ ಒಳಿತಿನಡೆಗೆ ಎನ್ನುವ ಸಂದೇಶ ಎಲ್ಲಾ ಧರ್ಮದವರಿಗೂ ಕೊಡುವ ಕಾರ್ಯಕ್ರಮ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಯಿತು.
ಸಮಾರಂಭದಲ್ಲಿ ಅಂತರಾಷ್ಟ್ರೀಯ ವಿದ್ವಾಂಸರಾದ ಮೌಲಾನಾ ಅಬು ತಾಲಿಬ್ ರಹಮನಿ ಅವರು ಮಾತನಾಡಿ ಪ್ರವಾದಿ ಮೊಹಮ್ಮದ್ ಅವರ ಕೊಡುಗೆಗಳು, ಮತ್ತು ಅವರ ಜೀವನ ಸಂದೇಶ, ಮುಸಲ್ಮಾನ್ ಬಾಂಧವರು ಎಲ್ಲಾ ಧರ್ಮದವರ ಜೊತೆ ಹೇಗಿರಬೇಕು. ಕುರಾನ್ ಏನು ಹೇಳುತ್ತದೆ. ನಾವು ಎಲ್ಲ ಧರ್ಮವನ್ನು ಗೌರವಿಸಬೇಕು. ಯಾವಾಗ ಸಮಾಜ ಸುಧಾರಣೆಯಾಗುತ್ತೆ ಮಹಿಳೆಯರನ್ನು ಗೌರವಿಸಬೇಕು.
ಈ ಜಗತ್ತಿನಲ್ಲಿ ದುಡ್ಡು ಗಳಿಸಿದರೆ ಸಾಲದು ನಮಗೆ ಅಲ್ಲಾಹ ಏನು ಹೇಳಿದ್ದಾರೆ. ಅದನ್ನು ನಾವು ಇಲ್ಲಿ ಮಾಡಬೇಕು. ಎನ್ನುವ ಸಂದೇಶವನ್ನು ಕೊಟ್ಟರು. ಇಹಲೋಕಾಧಿಪತಿ ಎಂದರೆ ಸಂಪೂರ್ಣ ವಿಶ್ವ ಮತ್ತು ಸಮಸ್ತ ಮಾನವಕುಲಕ್ಕೆ ಅಲ್ಲಾಹನ ಪ್ರವಾದಿ ಯಾವುದೇ ಪ್ರತ್ಯೇಕ ಜನಾಂಗ ಅಥವಾ ರಾಷ್ಟ್ರಕ್ಕೆ ಅಲ್ಲ, ತತ್ವಗಳು, ವಿಚಾರಗಳು, ಮತ್ತು ಶಿಕ್ಷಣಗಳಲ್ಲಿ ಸ್ವಾಭಾವಿಕವಾಗಿಯೂ ಭಿನ್ನತೆಗಳಿರುತ್ತಿದ್ದವು. ಆದರೆ ಪವಿತ್ರ ಕುರಾನಿನಲ್ಲಿ ಇಂಥ ವಿರೋಧ ಭಾರತದ ಛಾಯೆಯನ್ನು ನಾವು ಕಾಣುವುದಿಲ್ಲ ಎಂದು ಕುರಾನ್ ಸ್ವತಃ ಈ ರೀತಿ ಹೇಳುತ್ತದೆ. ಮತ್ತು ನಾಥ್ ಖಾ ಹಜರತ್ ತಾರಿಕ್ ಜಮೀಲ ಸಾಹೇಬ್ ಕಾಸ್ಮಿ ಹಾಡುಗಳನ್ನು ಹಾಡಿದರು.
ಸುಲಫಲ ಮಠದ ಜಗದ್ಗುರು ಡಾ. ಸಾರಂಗಧರ ಸ್ವಾಮಿಜಿ ಅವರು ಮಾತನಾಡಿ ಮಾಜಿ ಶಾಸಕ ದಿ. ಖಮರುಲ್ ಇಸ್ಲಾಂ ನಂತರ ಇಲಿಯಾಸ್ ಸೇಠ್ ಭಾಗವಾನ್ ಇಂತಹ ಒಂದು ಬಹಳ ಅದ್ಭುತವಾದ ಕಾರ್ಯಕ್ರಮವನ್ನು ಮಾಡಿದ್ದಾರೆ. ಸದ್ಭಾವನ ಸಮಾರಂಭ ಯಾವ ರೀತಿ ಮಾಡಬೇಕು ತೋರಿಸಿಕೊಟ್ಟಿದ್ದಾರೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಜ್ಜಾದ ನಷಿನ್ ಅಲಿಬಾಬ ಸಜ್ಜಾಧ, ಸೈಯದ್ ಹಿದಾಯಿತುಲ್ಲಾ ಖಾದ್ರಿ ಸಜ್ಜದ ನಶಿನ್, ಶ್ರೀ ಹವಾ ಮಲ್ಲಿನಾಥ್ ಮಹಾರಾಜ್ ನಿರಗುಡಿ, ಮುಸ್ತಫಾ ಬಾಬಾ ಖಾದ್ರಿ ಸಜ್ಜದ ನಶಿನ್, ಹಜರತ್ ಅಬ್ಬು ತುರಬ್ ಸಾಹೇಬ್ ಸಜ್ಜದ ನಶಿನ್, ಫಾದರ್ ಸ್ಟೈನಿ ಲೋಬೋ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಇಕ್ಬಾಲ್ ಅಹಮದ್ ಸರಡಗಿ, ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ಗುರುಮಿತ್ ಸಿಂಗ್, ನೀಲಕಂಠರಾವ ಮೂಲಗೆ, ಸೈಯದ್ ಆಕ್ತರ್ ಸಾಹಬ್, ಬಾಬಾ ಖಾನ್ ಸಾಹಬ್, ವಾಹಾಜ ಬಾಬ, ಅಜಗರ ಚುಲಬುಲ್, ಅಶೋಕ ಬಡದಾಳ, ಕೃಷ್ಣಾರೆಡ್ಡಿ, ಹಣಮಂತ ಯಳಸಂಗಿ, ಲಾಲ್ ಅಹಮದ್ ಸೇಠ್, ಸಜ್ಜಾದ್ ಅಲಿ ಇನಾಮದಾರ್, ಸೈಯದ್ ಅಹಮದ್, ಮೌಲಾನ ಹಾಫೀಜ ಶರೀಫ್, ಮೌಲಾನಾ ಜಾವಿದ್ ಆಲಂ ಖಾಸ್ಮಿ ಸೇರಿದಂತೆ ಸುಮಾರು ನಾಲ್ಕರಿಂದ ಐದು ಸಾವಿರ ಜನ ಸೇರಿದರು.