ಇಷ್ಟಲಿಂಗ ಪೂಜೆಯಿಂದ ಮಾನಸಿಕ ನೆಮ್ಮದಿ

0
20

ಭಾಲ್ಕಿ: ಪಟ್ಟಣ ಚನ್ನಬಸವಾಶ್ರಮದಲ್ಲಿ ಬೆಳಗಾವಿ ಜಿಲ್ಲೆಯ ಶರಣ ವಿಚಾರ ವಾಹಿನಿ ಹಮ್ಮಿಕೊಂಡಿರುವ ಬಸವಭೂಮಿ ಯಾತ್ರೆಯಲ್ಲಿ ಪಾಲ್ಗೊಂಡಿರುವ ಬಸವಭಕ್ತರ ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ನೆರವೇರಿತು.

ಬಸವಕಲ್ಯಾಣ ಅನುಭವಮಂಟಪದ ಅಧ್ಯಕ್ಷರಾದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಮಾಡಿಸಿದರು. ಇಷ್ಟಲಿಂಗ ಪೂಜೆಯಿಂದ ಮನುಷ್ಯನಿಗೆ ಮಾನಸಿಕ ನೆಮ್ಮದಿ ಸುಖ, ಶಾಂತಿ ದೊರೆಯುತ್ತದೆ. ಅದಕ್ಕಾಗಿ ನಾವು ಪ್ರತಿನಿತ್ಯ ಇಷ್ಟಲಿಂಗ ಪೂಜೆಯನ್ನು ಮಾಡಿಕೊಳ್ಳಬೇಕು. ಶರಣರು ಅರ್ಚನೆ, ಅರ್ಪಣೆ, ಅನುಭಾವಕ್ಕೆ ಮಹತ್ವ ನೀಡಿದರು. ನಮ್ಮ ಒತ್ತಡದ ಬದುಕಿನಲ್ಲಿ ಹತ್ತು ನಿಮಿಷವಾದರೂ ನಾವು ನಮಗಾಗಿ ಮೀಸಲಿಡಬೇಕು.

Contact Your\'s Advertisement; 9902492681

ನಮ್ಮ ಮನಸ್ಸು 24 ತಾಸು ಬರ್ಹಿಮುಖವಾಗಿಯೇ ಹರಿಯುತ್ತದೆ. ಆ ಮನಸ್ಸನ್ನು ನಾವು ಅಂರ್ತಮುಖಿಯಾಗಿ ಮಾಡುವುದ್ದಕ್ಕಾಗಿ ಲಿಂಗಪೂಜೆ ನಮಗೆ ಅವಶ್ಯಕವಾಗಿದೆ. ಮನಸ್ಸು ಅಂರ್ತಮುಖಿಯಾದಾಗ ನಮಗೆ ನೆಮ್ಮದಿ ಸಿಗುತ್ತದೆ ಎಂದು ಪೂಜ್ಯರು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು, ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ಹಾಗೂ ಬಸವಭೂಮಿ ಯಾತ್ರೆಯ ರೂವಾರಿಗಳಾದ ಶರಣ ಐ.ಆರ್.ಮಠಪತಿ ಅವರು ಉಪಸ್ಥಿತರಿದ್ದರು.

ಶ್ರೀಮಠದ ಸದ್ಭಕ್ತರಿಂದ ಎಲ್ಲ ಬಸವಭಕ್ತರಿಗೆ ವಸತಿ ವ್ಯವಸ್ಥೆ ಮಾಡಲಾಗಿತ್ತು. ಶರಣೆ ಶುಭಾಂಗಿ ಶರಣ ಚನ್ನಬಸವ ಬಳತೆ ಇವರು ಪ್ರಸಾದ ದಾಸೋಹವನ್ನು ಮಾಡಿದರು. ಶಿವಕುಮಾರ ಪಾಂಚಾಳ ಅವರಿಂದ ವಚನ ಸಂಗೀತ ನೆರವೇರಿತು. ಈ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಸುಮಾರು ಒಂದು ಸಾವಿರದ ಐದುನೂರು ಜನ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here