ಕಲಬುರಗಿ; ನಗರದ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಎನ್.ಪಿ.ಎಸ್ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ ಸಮಾರಂಭವನ್ನು ರಾಜ್ಯ ಎನ್.ಪಿ.ಎಸ್ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಧರ್ಮರಾಜ ಜವಳಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ರಾಜ್ಯ ಎನ್.ಪಿ.ಎಸ್ ನೌಕರರ ಸಂಘ ಬೆಂಗಳೂರು 2006 ನಂತರ ಸರ್ಕಾರಿ ನೌಕರಿಗೆ ಸೇರಿದ ನೌಕರರಿಗೆ ನಿವೃತ್ತ ನಂತರ ಅವರಿಗೆ ಸಂದ್ಯಾಕಾಲದ ಬದುಕಿಗೆ ನಿವೃತ್ತಿ ವೇತನ ಇರುವುದಿಲ್ಲ. ಇದನ್ನು ತಡೆಗಟ್ಟವು ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಎನ್.ಪಿ.ಎಸ್ ನೌಕರಿಗೆ ಒಳಪಡುವ ನೌಕರರು ತಮ್ಮದೆಯಾದ ಹಲವಾರು ರೀತಿಯ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
ಸಂಘ ರಾಜ್ಯಾಧ್ಯಕ್ಷರಾದ ಶಾಂತಾರಾಮ ಮತ್ತು ಹಲವಾರು ಪದಾಧಿಕಾರಿಗಳು ಚಾಮರಾಜನಗರ ನಗರ ದಿಂದ ಬೀದರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಪಿಎಸ್ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಂಡಿದ್ದು, ತದನಂತರ ಡಿಸೆಂಬರ್ 19 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಾಡು ಇಲ್ಲವೇ ಮಡಿ ಎಂಬಂತೆ. ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುವ ಉದ್ದೇಶದಿಂದ ಒಪಿಎಸ್ ಸಂಕಲ್ಪ ಯಾತ್ರೆ ನವ್ಹೆಂಬರ 2 ಕ್ಕೆ ಕಲಬುರ್ಗಿಗೆ ಆಗಮಿಸಲ್ಲಿದ್ದು ಆ ದಿನ ಕಲಬುರಗಿ ಜಿಲ್ಲಾ ಮತ್ತು ತಾಲ್ಲೂಕು ಎನ್.ಪಿ.ಎಸ್ ನೌಕರರ ಸಂಘದ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಕಲ್ಪ ಯಾತ್ರೆ ಯಸಶ್ವಿಗೊಳಿಸಬೇಕಾಗಿ ಜವಳಿ ಹೇಳಿದ್ದಾರೆ.
ಕಲಬುರಗಿ ಜಿಲ್ಲಾ ಎನ್ ಪಿ ಎಸ್ ನೌಕರರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಶೋಕ ಸೋನ್ನ (ಗೌರವ ಸಲಹೆಗಾರ), ಸೈಬಣ್ಣಾ ಮಹಾಂತಗೋಳ (ಅಧ್ಯಕ್ಷ), ಅಂಬುಜಾ ಎಂ ಡಿ (ಪ್ರಧಾನ ಕಾರ್ಯದರ್ಶಿ), ಶರಣಪ್ಪ ಶ್ರೀಗಿರಿ (ಖಜಾಂಚಿ), ನಾಗರತ್ನ ಹೆಚ್, ಮಹೇಶಕುಮಾರ ಹೆಬ್ಬಾಳೆ, ರಾಚಯ್ಯ ಸ್ವಾಮಿ, ಹೈದರಸಾಬ್ ಚೌದ್ರಿ (ಉಪಾಧ್ಯಕ್ಷರು), ರಾಜಕುಮಾರ ಜಿ, ಗುರುಶರಣ ನಾಗಶೆಟ್ಟಿ, ನೇತ್ರಾವತಿ, ಬಾಬುರಾವ, ಶಿವಾನಂದ ದ್ಯಾಮಗೊಂಡ (ಸಹ ಕಾರ್ಯದರ್ಶಿಗಳು), ಬಸವರಾಜ ಕರೆಪ್ಪಗೋಳ, ಶಿವಕುಮಾರ ಬೀರಾದಾರ, ಆಂಬುಜಿ ಪಂಚಾಳ, ಇನಾಮೋದ್ದಿನ, ಬನ್ನಪ್ಪಾ ಜೋಗಿ (ಜಂಟಿ ಕಾರ್ಯದರ್ಶಿಗಳು), ಶ್ರೀಶೈಲ ಖುರ್ದ (ಆಂತರೀಕ ಲೆಕ್ಕ ಪರಿಶೋಧಕ), ಸುನಿಲ್ ದತ್ತ ಡಾಂಗೆ (ಮಾಧ್ಯಮ ಪ್ರತಿನಿಧಿ/ಮಿಡಿಯಾವಿಂಗ್), ಅಣವೀರಪ್ಪಾ ಯಾಕಾಪೂರ (ಕಾನೂನು ಸಲಹೆಗಾರ), ಪ್ರದೀಪಕುಮಾರ ವಾಕಳಿ, ವೆಂಕಟೇಶ, ರವಿ ಪಾಟೀಲ, ಶ್ರೀನಿವಾಸ ಗುತ್ತೆದ್ದಾರ, ರಾಘವೇಂದ್ರ ಜೋಶಿ, ಪರಶುರಾಮ ಗುತ್ತಲ(ಸಂಘಟನಾ ಕಾರ್ಯದರ್ಶಿಗಳು) ಆಯ್ಕೆಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿ ರಾಜ್ಯ ಸಂಘದ ಜಂಟಿ ಕಾರ್ಯದರ್ಶಿ ವೃಷಭೇಂದ್ರ ಹೀರೆಮಠ, ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಸೈಬಣ್ಣಾ ಮಹಾಂತಗೋಳ ವಹಿಸಿದ್ದರು. ವಿವಿಧ ತಾಲೂಕಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.