ಆಳಂದ: ಪಟ್ಟಣದ ತಾಲೂಕಾ ಆಡಳಿತ ಸೌಧದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಬಸವೇಶ್ವರರ ಅಶ್ವಾರೂಢ ಪುತ್ಥಳಿಗೆ ಆಳಂದ ಪಟ್ಟಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಮುಂಬೈನಲ್ಲಿ ತಯಾರಿಸಲಾದ 25ಲಕ್ಷ. ರೂ ವೆಚ್ಚದ ಪ್ರತಿಮೆಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು ಪಟ್ಟಣದ ಬಸ್ ನಿಲ್ದಾಣ ಬಳಿ ಬರ ಮಾಡಿಕೊಂಡು ಪೂಜೆ ಸಲ್ಲಿಸಿದರು.
ಬಸ್ ನಿಲ್ದಾಣದಿಂದ ಪ್ರಾರಂಭವಾದ ಮೆರವಣಿಗೆಯು ಪಟ್ಟಣದ ಪ್ರಮುಖ ಮಾರ್ಗಗಳ ಮೂಲಕ ತಾಲೂಕಾ ಆಡಳಿತ ಸೌಧದ ಕಚೇರಿ ತಲುಪಿತು. ಮೆರವಣಿಗೆಯುದ್ದಕ್ಕೂ ಡೊಳ್ಳು, ಬಾಜಾ ಬಜಂತ್ರಿ, ಪೂರ್ಣ ಕುಂಭ ಹೊತ್ತ ಸುಮಂಗಲಿಯರು ಹೆಜ್ಜೆ ಹಾಕಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಪುರಸಭೆ ಅಧ್ಯಕ್ಷೆ ರಾಜಶ್ರೀ ಖಜೂರಿ, ಉಪಾಧ್ಯಕ್ಷ ಚಂದ್ರಕಾಂತ ಹತ್ತರಕಿ, ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ, ಮಲ್ಲಿಕಾರ್ಜುನ ತಡಕಲ, ಚಂದ್ರಕಾಂತ ಭೂಸನೂರ, ಶರಣಪ್ಪ ಮಲಶೆಟ್ಟಿ, ಮಲ್ಲಿಕಾರ್ಜುನ ಕಂದಗೂಳೆ, ರಾಜಶೇಖರ ಮಲಶೆಟ್ಟಿ, ಚೆನ್ನಬಸವ ಪಾಟೀಲ, ನಿಜಲಿಂಗಪ್ಪ ಕೊರಳ್ಳಿ, ಪರಮೇಶ್ವರ ಹತ್ತರಕಿ, ಗುಂಡು ಗೌಳಿ, ಯುವರಾಜ ಹತ್ತರಕಿ, ವಿಜಯಕುಮಾರ ಕೊಥಳಿಕರ, ರಾಜು ಸನ್ಮುಖ, ಶ್ರೀಮಂತ ನಾಮಣೆ, ಮಲ್ಲಿಕಾರ್ಜುನ ಕರಲಗಿ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅವರು ಡೊಳ್ಳು ಬಾರಿಸಿರುವುದು ಮೆರವಣಿಗೆಯ ಆಕರ್ಷಣೆಯಾಗಿತ್ತು.
ಪ್ರತಿಮೆಯನ್ನು ನ. 23 ರಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರು ಅನಾವರಣಗೊಳಿಸಲಿದ್ದಾರೆ.