ಗಡಿ ಗ್ರಾಮಗಳ ಅಭಿವೃದ್ದಿಗೆ ರಾಜ್ಯ ಸರ್ಕಾರ ಒತ್ತು ಕೊಟ್ಟಿದೆ: ಗುತ್ತೇದಾರ

0
13

ಆಳಂದ: ಹಲವು ದಶಕಗಳಿಂದಲೂ ಮೂಲಸೌಲಭ್ಯಗಳಿಲ್ಲದೆ ನೆನಗುದ್ದಿಗೆ ಬಿದ್ದುಕೊಂಡಿದ್ದ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಗ್ರಾಮಗಳ ಅಭಿವೃದ್ಧಿಗೆ ರಾಜ್ಯದ ಬಿಜೆಪಿ ಸರ್ಕಾರ ಸಾಕಷ್ಟು ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಿದೆ ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಇಂದಿಲ್ಲಿ ಹೇಳಿದರು.

ತಾಲೂಕಿನ ಖಜೂರಿ ವ್ಯಾಪ್ತಿಯ ಹೊದಲೂರ ಗ್ರಾಮದಲ್ಲಿ ಮಂಗಳವಾರ ಬೇಡಗಾ ರಸ್ತೆಗೆ 1.50ಕೋಟಿ, ಶಾಲಾ ಕೋಣೆಗೆ 60 ಲಕ್ಷ ರೂಪಾಯಿ 25 ಲಕ್ಷದ ಸಿಮೆಂಟ್ ರಸ್ತೆ, 25 ಲಕ್ಷ ರೂ.ಗಳ ಮಲ್ಲಯ್ಯನ ಭವನ ನಿರ್ಮಾಣ ಕಾಮಗಾರಿಗಳಿಗೆ ಪ್ರತ್ಯೇಕ ಭೂಮಿ ಪೂಜೆ ನೆರವೇರಿಸಿ ಬಳಿಕ ವೇದಿಕೆಯಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ಇದುವರೆಗೂ ಒಟ್ಟು ಹೊದಲೂರ ಒಂದೇ ಗ್ರಾಮಕ್ಕೆ ನಾಲ್ಕು ವರ್ಷದಲ್ಲಿ 13.10 ಕೋಟಿ ವೆಚ್ಚದಲಿ ಕಾಮಗಾರಿ ಕೈಗೊಂಡು ಜನತೆಗೆ ಮೂಲಸೌಲಭ್ಯ ಕಲ್ಪಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಒತ್ತುಕೊಟ್ಟಿದ್ದರಿಂದ ಕ್ಷೇತ್ರಕ್ಕೆ ಕೇಳಿದಷ್ಟು ಅನುದಾನ ನೀಡಿರುವುದು ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗಿದೆ, ಕೈಗೆತ್ತಿಕೊಂಡ ಹೊಸ ಕಾಮಗಾರಿ ಮಂಜೂರಾತಿ, ಟೆಂಡರ್ ಹಂತದಲ್ಲಿವೆ, ಹೀಗೆ ಗಡಿ ಪ್ರದೇಶ ಹೊದಲೂರ, ಆಳಂಗಾ, ಖಜೂರಿ, ಕೋತನಹಿಪ್ಪರಗಾ ನಂದಗೂರ, ಜವಳಗಾ ಜೆ, ಖಂಡಾಳ, ಜಮಗಾ, ತುಗಾಂವ ಹೀಗೆ ಇನ್ನಿತರ ಗ್ರಾಮಗಳಲ್ಲಿ ರಸ್ತೆ, ಶಾಲಾ ಕಟ್ಟಡ, ಕುಡಿಯುವ ನೀರು, ಸಮುದಾಯ ಭವನ, ಕಲ್ಯಾಣ ಮಂಟಪ, ಸಿಮೆಂಟ ರಸ್ತೆಯಂತ ಕಾಮಗಾರಿಗಳಿಗೆ ಅನುದಾನವಿಟ್ಟು ಬೇಡಿಕೆಗಿಂತ ಹೆಚ್ಚಿನ ಕಾಮಗಾರಿ ಮಾಡಿದ್ದು, ಗಡಿ ಜನರಿಗೆ ಅನುಕೂಲವಾಗಿದೆ. ಆದರೆ ಅಭಿವೃದ್ಧಿ ನಿಂತ ನಿರಲ್ಲ ಇದು ನಿರಂತರವಾಗಿ ಸಾಗುವಂತಾದ್ದಾಗಿದೆ. ಇನ್ನೂ ಹೆಚ್ಚಿನ ಅನುದಾನ ತಂದು ಕೆರೆ, ರಸ್ತೆ, ಕಟ್ಟಡದಂತ ಹಲವು ಕಾಮಗಾರಿಗೆ ಮುಂದಾಗಿದ್ದು, ಇಂಥ ನಿರೀಕ್ಷೆ ಮೀರಿ ಕಾಮಗಾರಿ ಕೈಗೊಳ್ಳಲು ಬರುವ ಚುನಾವಣೆಯಲ್ಲಿ ಜನತೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಜೆಸ್ಕಾಂ ನಿರ್ದೇಶಕ ವೀರಣ್ಣಾ ಮಂಗಾಣೆ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಕಾರ್ಯದಂತೆ ಕ್ಷೇತ್ರದಲ್ಲಿ ಶಾಸಕ ಗುತ್ತೇದಾರ ಅವರು ಕಡಿಮೆ ಅವಧಿಯಲ್ಲಿ ಹೆಚ್ಚಿನ ಕಾಮಗಾರಿಗಳ ಮಾಡಿ ಜನ ಸೇವೆ ಮಾಡಿದ್ದು ಇಂಥ ವ್ಯಕ್ತಿಗಳನ್ನು ಮತ್ತೊಮ್ಮೆ ಅಧಿಕಾರಕ್ಕೆ ಬರಲು ಆಶೀರ್ವದಿಸಬೇಕು ಎಂದು ಹೇಳಿದರು.

ವೇದಿಕೆಯ ಮೇಲೆ ತಾಪಂ ಮಾಜಿ ಉಪಾಧ್ಯಕ್ಷ ಗುರುನಾಥ ಪಾಟೀಲ, ಮಾಜಿ ಸದಸ್ಯ ಮಲ್ಲಿಕಾರ್ಜುನ ಕಂದಗುಳೆ, ಹೊದಲೂರ ಗ್ರಾಪಂ ಅಧ್ಯಕ್ಷೆ ಸಂಗೀತಾ ಸಿದ್ದರಾಮ ಬನಶೆಟ್ಟಿ, ಉಪಾಧ್ಯಕ್ಷ ಗೈಯನಾಥ ಬಿರಾದಾರ, ಸದಸ್ಯ ರಾಮನಂದ ಕಾಮಶೆಟ್ಟಿ, ಭೀಮಾಶಂಕ ಕಲಶಟ್ಟಿ, ರವಿ ಮಾಂಗ, ಮಹಿಭೂಬ ಪಟೇಲ ಸೇರಿ ಇನ್ನಿತರು ಹಾಗೂ ರುದ್ರವಾಡಿ ಗ್ರಾಪಂ ಅಧ್ಯಕ್ಷ ಶ್ರೀಶೈಲ ಪಾಟೀಲ, ಪಿಡಬ್ಲೂಡಿ ಎಇಇ ಶಶೀಧರ ಪಾಟೀಲ, ಪಿಡಿಒ ನಾಗೇಶ ಮೂರ್ತಿ, ರಾಜೇಂದ್ರ ಸಾವಳಗಿ ಮತ್ತಿತರು ಆಗಮಿಸಿದ್ದರು.

ಮಲ್ಲಿನಾಥ ಕೋರೆ, ಶ್ರೀಶೈಲ ಬನಶೆಟ್ಟಿ, ಸಿದ್ರಾಮಪ್ಪಾ ನಿಲೆಗಾರ, ಕಲ್ಯಾಣಿ ಮೂಲಗೆ, ನಾಗನಾಥ ಕಾಮಶೆಟ್ಟಿ, ಶರಣು ಮುರುಮೆ, ದಯಾನಂದ ಮಾಳಗೆ, ಮಹೇಶ ಪಾಟೀಲ, ಶಿವರಾಜ ಪಾಟೀಲ, ಅಣ್ಣಾರಾಯ ಬಿರಾದಾರ ಸೇರಿದಂತೆ ನೆರೆಹೊರೆಯ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು. ನೂರೊಂದಯ್ಯ ಸ್ವಾಮಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here