ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಮಲ್ಲಿಕಾರ್ಜುನ್ ಖರ್ಗೆ ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿಯಾಗಿದೆ. ಇಡೀ ದಲಿತ ಸಮುದಾಯವು ಹೆಮ್ಮೆ ಪಡುವ ಸಂಗತಿಯಾಗಿದ್ದು ,ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಮ್ಮ ನಾಯಕರು ಹೆಸರು ಮಾಡಿದ್ದು ನಮಗೆ ಸಂತಸ ತಂದಿದೆ.- ಚಂದ್ರಶೇಖರ್ ಹರ್ನಾಳ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಹಿರಿಯ ದಲಿತ ಮುಖಂಡರು.
ಜೇವರ್ಗಿ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಮಲ್ಲಿಕಾರ್ಜುನ ಖರ್ಗೆ ನಮ್ಮ ಭಾಗದ ಹೆಮ್ಮೆಯ ನಾಯಕರು ಆಗಿದ್ದು ಇಡೀ ಕರ್ನಾಟಕ ರಾಜ್ಯ ಸೇರಿದಂತೆ, ಹೈದರಾಬಾದ್ ಕರ್ನಾಟಕಕ್ಕೆ ಒಂದು ಹೆಮ್ಮೆಯ ಸಂಗತಿ ಆಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರಾದ ರಾಜಶೇಖರ್ ಸಿರಿ ಹರ್ಷ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿ ಎದುರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ವಿಜಯೋತ್ಸವವನ್ನು ಆಚರಿಸುತ್ತಾ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.
ಮಧ್ಯಾಹ್ನ ಡಾ.ಮಲ್ಲಿಕಾರ್ಜುನ ಖರ್ಗೆಯವರು ಪಕ್ಷದ ರಾಷ್ಟ್ರೀಯ ಸಾರಥ್ಯವನ್ನು ವಹಿಸಿದ ಫಲಿತಾಂಶ ತಿಳಿದಂತೆ ಕಾರ್ಯಕರ್ತರಲ್ಲಿ ಉತ್ಸಾಹ ಮನೆ ಮಾಡಿದೆ. ವಿಜಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ, ರುಕುಂ ಪಟೇಲ್ ಇಜೇರಿ, ಸಿದ್ದಲಿಂಗ , ರೆಡ್ಡಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಾಂತಪ್ಪ ಕೊಡಲಗಿ, ಕಾಶಿರಾಯ್ ಗೌಡ ಯಲಗೋಡ,ಮುನ್ನ ಪಟೇಲ್ ಯಾಳವರ್ , ಸುಭಾಷ್ ಚನ್ನೂರ, ಬಹದ್ದೂರ್ ರಾಥೋಡ್, ಗಂಗಾಧರ್ ಕಟ್ಟಿ ಸಂಗಾವಿ, ರಾಜಶೇಖರ್ ಶಿಲ್ಪಿ, ಕಾಸಿಂ ಪಟೇಲ್ ಮುದ್ವಾಳ, ಭೀಮರಾಯ ನಗನೂರ ಹಾಗೂ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.