ಕಲಬುರಗಿ: ನಗರದ ಜಿಲ್ಲಾ ಕೋರ್ಟ್ ಆವರಣದಲ್ಲಿ ರಾಜ್ಯ ಎನ್ ಪಿ ಎಸ್ ನೌಕರರ ಸಂಘ, ಜಿಲ್ಲಾ ಘಟಕ ಹಾಗೂ ದಕ್ಷಿಣ ತಾಲೂಕಿನ ವತಿಯಿಂದ ತಾಲೂಕು ಮಟ್ಟದ ಎನ್ ಪಿ ಎಸ್ ನೌಕರರ ಒಂದು ವಿಶೇಷ ಸಮಾವೇಶ ಶನಿವಾರ ಜರುಗಿತು.
ಕಾರ್ಯಕ್ರಮವನ್ನು ರಾಜ್ಯ ಎನ್ ಪಿ ಎಸ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಚಂದ್ರಕಾಂತ ತಳವಾರ ಉದ್ಘಾಟಿಸಿ, ಮಾತನಾಡಿದ ಅವರು 2006 ರೇ ನಂತರ ಸರ್ಕಾರಿ ನೌಕರಿಗೆ ಸೇರಿದ ನೌಕರರಿಗೆ ನಿವೃತ್ತ ನಂತರ ಅವರಿಗೆ ಸಂದ್ಯಾಕಾಲದ ಬದುಕಿಗೆ ನಿವೃತ್ತಿಯ ನಂತರ ಅವರಿಗೆ ಪಿಂಚಣಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಎನ್ ಪಿ ಎಸ್ ನೌಕರರ ಸಂಘವು ಇದೆ ಡಿಸೆಂಬರ್ 19 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಾಡು ಇಲ್ಲವೇ ಮಡಿ ಎಂಬಂತೆ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲು ತಿರ್ಮಾನಿಸಿದ್ದು, ಈಗಾಗಲೇ ರಾಜ್ಯಸ್ಥಾನ, ಜಾಖರ್ಂಡ್, ಛತ್ತಿಸಡ ಮತ್ತು ಪಂಜಾಬ್ ರಾಜ್ಯದಲ್ಲಿ ಎನ್ ಪಿ ಎಸ್ ರದ್ದುಗೊಳಿಸಿವೆ. ನಮ್ಮ ಹೋರಾಟ ಫಲನೀಡಬೇಕು.ಎನ್ ಪಿ ಎಸ್ ಸಂಪೂರ್ಣವಾಗಿ ರದ್ದಾಗಬೇಕು, ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ ನಿಶ್ಚಿತ ಪಿಂಚಣಿ ನಮ್ಮ ಹೋರಾಟ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಜ್ಯ ಕಾರ್ಯದರ್ಶಿ ಧರ್ಮರಾಜ ಜವಳಿ, ಜಿಲ್ಲಾ ಅಧ್ಯಕ್ಷರಾದ ಸೈಬಣ್ಣಾ ಮಹಾಂತಗೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬುಜಾ ಎಂ ಡಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಬುರಗಿ ದಕ್ಷಿಣ ತಾಲೂಕಿನ ಅಧ್ಯಕ್ಷ ನವನಾಥ ಸಿಂದೆ ವಹಿಸಿದ್ದರು.
ಜಿಲ್ಲಾ ನ್ಯಾಯಾಲಯ ಸಂಘದ ಅಧ್ಯಕ್ಷ ನಾಗೇಂದ್ರಪ್ಪ ಪಾನಗಾಂವ, ಜಿಲ್ಲಾ ನ್ಯಾಯಾಲಯ ಸಂಘದ ಪ್ರಧಾನ ಕಾರ್ಯದರ್ಶಿ ವೀರಭದ್ರಪ್ಪ, ಅಣವೀರಪ್ಪ ಯಾಕಾಪೂರ, ಗುರುಶರಣ, ಜಮಿಲ್ ಅಹಮದ್, ಶರಣಬಸಪ್ಪ ಹಂಚೆ, ರಾಚಣ್ಣಾ, ಉಮೇಶ ಧಮುರಕರ, ಲಲೀತಾ ಪಾಟೀಲ ಹಾಗೂ ಕಲಬುರಗಿ ಜಿಲ್ಲಾ ನ್ಯಾಯಾಲಯ ಎನ್ ಪಿ ಎಸ್ ಮತ್ತು ಒಪಿಎಸ ನೌಕರರು ಹಾಜರಿದ್ದರು.