ಸಂವಿಧಾನ ನೀಡಿದ ಅಂಬೇಡ್ಕರ್ ಅಜರಾಮರ: ಬಸವರಾಜ ಮದ್ರಿಕಿ

0
95

ಶಹಾಬಾದ:ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಜರಾಮರರಾಗಿದ್ದಾರೆ ಎಂದು ಸಂಗೊಳಿ ರಾಯಣ್ಣ ಯುವ ಘರ್ಜನೆಯ ಜಿಲ್ಲಾಧ್ಯಕ್ಷ ಬಸವರಾಜ ಮದ್ರಿಕಿ ಹೇಳಿದರು.

ಅವರು ಸೋಮವಾರ ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ೬೫ನೇ ಮಹಾಪರಿನಿರ್ವಾಣ ದಿನದ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ನೇರವೇರಿಸಿ ಮಾತನಾಡಿದರು.
ಅಂಬೇಡ್ಕರ್ ತಾವು ನೀಡಿದ ಸಂವಿಧಾನದ ಮೂಲಕ ಪ್ರತಿಯೊಬ್ಬ ಭಾರತೀಯರ ಮನದಲ್ಲಿ ತಲುಪಿದ್ದಾರೆ.ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಸಾಮಾಜಿಕ ಶ್ರೇಣಿಕೃತ ವ್ಯವಸ್ಥೆಯಲ್ಲಿ ಕೆಳವರ್ಗದವರ ಬದುಕು ಶೋಚನೀಯವಾಗಿತ್ತು.

Contact Your\'s Advertisement; 9902492681

ಈ ಅವಕಾಶ ವವಂಚಿತ ಸಮುದಾಯದ ಧ್ವನಿಯಾಗಿ ಅಂಬೇಡ್ಕರ್ ಕಾರ್ಯನಿರ್ವಹಿಸಿದ್ದಾರೆ.ಅಲ್ಲದೇ ಎಲ್ಲಾ ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಹಾಗೂ ಹಕ್ಕುಗಳ ರಕ್ಷಣೆಗಾಗಿ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಈ ದೇಶದ ಶೋಷಿತರ ಬಾಳಿನ ಭಾಗ್ಯದ ಬೆಳಕು ಯಾರಾದರೂ ಇದ್ದರೇ ಅದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಎಂದರು.

ಗ್ರಾಮ ಪಂಚಾಯತ್ ಸದಸ್ಯ ಮಲ್ಲಣ್ಣ ಮರತೂರ ಮಾತನಾಡಿ, ಸ್ವಾತಂತ್ರ್ಯ ಮತ್ತು ಸಮಾನತೆ ಎಲ್ಲಾ ವರ್ಗದವರ ಸ್ವತ್ತಾಗಿದ್ದು, ಅದನ್ನು ಎಲ್ಲರೂ ಸಮಾನವಾಗಿ ಪಡೆದುಕೊಂಡಾಗ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ. ಆದರೆ ಇಂದು ಸಂವಿಧಾನ ಸರಿಯಾಗಿ ಓದದ ಹಾಗೂ ಅರಿಯದ ಅವಿವೇಕಿಗಳು ಸಂವಿಧಾನ ಕೇವಲ ಎಸ್‌ಸಿ/ಎಸ್‌ಟಿ ಅವರಿಗೆ ಮಾತ್ರ ಇದೆ ಎಂದು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ.ಸಂವಿಧಾನ ಇರುವುದು ಎಲ್ಲರಿಗೂ ಎಂದು ಮಗಾಣಬೇಕಿದೆ.ಅದಕ್ಕಾಗಿ ಸಂವಿಧಾನವನ್ನು ಎಲ್ಲರೂ ಓದಬೇಕೆಂದು ಹೇಳಿದರು.

ಗ್ರಾಮ ಪಂಚಾಯತ್ ಸದಸ್ಯ ಬೆಳ್ಳಪ್ಪ ಕಣದಾಳ ಮಾತನಾಡಿ, ಕಠಿಣ ಪರಿಶ್ರಮದಿಂದ ಸಮಾಜದಲ್ಲಿ ಎಲ್ಲವನ್ನೂ ಸಾಧಿಸಬಹುದೆಂದು ಅಂಬೇಡ್ಕರ್ ನಮಗೆ ತಿಳಿಸಿಕೊಟ್ಟಿದ್ದಾರೆ. ಅವರು ನಡೆದು ಬಂದ ದಾರಿಯಲ್ಲಿ ನಾವುಗಳು ನಡೆದು ಅವರಂತೆ ನೊಂದ ಮನುಷ್ಯರ ಕಣ್ಣೀರು ಓರೆಸುವ ಕೆಲಸ ಇಂದಿನ ದಿನಗಳಲ್ಲಿ ನಡೆಯಬೇಕಿದೆ ಎಂದು ಹೇಳಿದರು.

ನಾಗೇಂದ್ರ ಹುಗ್ಗಿ,ಹೊನಪ್ಪ ಕನ್ನ, ಶಿವು ಹುಗ್ಗಿ, ರಮೇಶ್ ಹುಗ್ಗಿ,ಅಮೃತ ಕುಸನೂರ್, ಶಿವರಾಯ ಮರತೂರ, ಜೈಭೀಮ್ ಯುವಕ ಸಂಘದ ಸದ್ಯಸರು ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here