ಸಂಗಮೇಶ ಎನ್ ಜವಾದಿಯವರ ಸಾಮಾಜಿಕ ಸೇವೆ ಅನನ್ಯ: ಶರಣೆ ಇಂದುಮತಿ ಗಾರಂಪಳ್ಳಿ

0
16

ಚಿಟಗುಪ್ಪ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳು, ಹಮ್ಮಿಕೊಂಡು ಅವರ ಕಲ್ಯಾಣಕ್ಕಾಗಿ ಹತ್ತು ಹಲವು ವಿನೂತನ ಯೋಜನೆಗಳ ಮೂಲಕ ಅವರೆಲ್ಲರ ಉನ್ನತಿಗಾಗಿ ದುಡಿಯುತ್ತಿರುವ ಸಂಗಮೇಶ ಎನ್ ಜವಾದಿಯವರ ನಿಸ್ವಾರ್ಥ ಸೇವೆ ಅನನ್ಯವಾದದ್ದು ಎಂದು ಸಾಹಿತಿ, ಉಪನ್ಯಾಸಕಿ ಶರಣೆ ಇಂದುಮತಿ ಗಾರಂಪಳ್ಳಿ ನುಡಿದರು.

ನಗರದ ಅರುಣೋದಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿ ಜರುಗಿದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಗೋಷ್ಠಿ ಕಾರ್ಯಕ್ರಮದಲ್ಲಿ ಶರಣರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬ ವಿಷಯದ ಮೇಲೆ ಸುದೀರ್ಘವಾಗಿ
ಉಪನ್ಯಾಸ ನೀಡಿ ಮಾತನಾಡಿದ ಅವರು ಸದ್ದುಗದ್ದಲವಿಲ್ಲದೆ ಜನಜಾಗೃತಿ ವೈಚಾರಿಕ ಕಾರ್ಯಕ್ರಮಗಳು ಮಾಡಿ, ಈ ಭಾಗದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆಯುತ್ತಿದ್ದಾರೆ.

Contact Your\'s Advertisement; 9902492681

ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಮಕ್ಕಳ ಮತ್ತು ವಿಕಲಚೇತನರ ಹಿತ ಕಾಪಾಡಲು ಹಗಲಿರುಳೂ ಶ್ರಮಿಸುತ್ತಿದ್ದಾರೆ. ಹತ್ತು ಹಲವು ವಿನೂತನ ಸೌಲಭ್ಯಗಳನ್ನು ಅನುಷ್ಠಾನ ಗೊಳಿಸುವ ಕಾಯಕದಲ್ಲಿ ಸಂಗಮೇಶ ಎನ್ ಜವಾದಿ ಯವರ ನಿರತರಾಗಿದ್ದಾರೆ. ಅದಕ್ಕಾಗಿ ನಮ್ಮೆಲ್ಲರ ಸಹಕಾರ ಮತ್ತು ಬೆಂಬಲ ಅವರಿಗೆ ಸದಾ ಇರಬೇಕೆಂದು ಹೇಳಿದರು.

ನಿವೃತ್ತ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಾಹಾರುದ್ರ ಅಣದೂರ ಮಾತನಾಡಿ, ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸಾರ್ವಜನಿಕ ಸಭೆಗಳನ್ನು ನಡೆಸಿ, ಕಾರ್ಯಗಾರ/ವಿಚಾರ ಗೋಷ್ಟಿಗಳು ಹಾಗೂ ನವೀನ ಚಟುವಟಿಕೆಗಳ ಮೂಲಕ ಮಹಿಳೆಯರು ಮತ್ತು ಮಕ್ಕಳು ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳು ಹಮ್ಮಿಕೊಂಡು ಹಗಲಿರುಳು ದುಡಿಯುತ್ತಿರುವ ಸಂಗಮೇಶ ಎನ್ ಜವಾದಿ ಯವರ ನಿಸ್ವಾರ್ಥ ಸೇವೆ ಅಜರಾಮವಾದದ್ದು,ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಇವರ ಸಾಮಾಜಿಕ ಸೇವೆಯ ಕೆಲಸಗಳು ನಾಡಿಗೆ ಮಾದರಿಯಾಗಲಿ ಎಂದರು.

ಆದರ್ಜ ಶಿಕ್ಷಕಿ, ಸಾವಿತ್ರಿ ಮೂತ್ತಲಗೇರಿ ಮಾತನಾಡಿ ಮಕ್ಕಳಿಗೆ ಹಾಗೂ ವಿಕಲಚೇತನರಿಗೆ ಅನ್ಯಾಯವಾದರೆ ನ್ಯಾಯ ಕೊಡಿಸಿ, ಮೂಲಭೂತ ಸೌಲಭ್ಯ, ವೈದ್ಯಕೀಯ ಸೌಲಭ್ಯ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಗಮೇಶ ಎನ್ ಜವಾದಿಯವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.ಈ ನಿಟ್ಟಿನಲ್ಲಿ ನಾವೆಲ್ಲರೂ ಅವರ ಜೊತೆ ನಿಲ್ಲಬೇಕು.ಅಂದಾಗ ಮಾತ್ರ ಅವರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯ ಹಾಗೂ ಪ್ರೋತ್ಸಾಹ ಸೀಗುತ್ತದೆ ಎಂದರು.

ಪರಿಷತ್ತಿನ ಅಧ್ಯಕ್ಷ ಸಂಗಮೇಶ ಎನ್ ಜವಾದಿ ಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಪುರಸಭೆ ಸದಸ್ಯೆ ಶ್ರೀಮತಿ ಪಾರ್ವತಿ ಮಠಪತಿ, ಶಾಲಾ ಮುಖ್ಯ ಶಿಕ್ಷಕಿ ಶೀಲಾದೇವಿ ಪಾಟೀಲ, ಶಿಕ್ಷಕಿಯರಾದ ಅರುಣಕುಮಾರಿ, ಸಂಗೀತಾ ಇದ್ದರು.

ಇದೆ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಣ್ಯರಿಗೆ ಗೌರವ ಸನ್ಮಾನ ಮಾಡಲಾಯಿತು. ಅದೇ ರೀತಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸಮಾರಂಭದಲ್ಲಿ ಪರಿಷತ್ತಿನ ಪದಾಧಿಕಾರಿಗಳು, ನಾಗರಿಕರು,ಮಾತೆಯರು, ಅಪಾರ ಪ್ರಮಾಣದಲ್ಲಿ ಮುದ್ದು ಮಕ್ಕಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here