ಕೆಂಭಾವಿ: ಕನ್ನಡ ನಾಡಿನ ವೀರ ಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವ, ಸ್ವಾತಂತ್ರ್ಯ ಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ ಚೆನ್ನಮ್ಮ ಎಂದು ಶಹಾಪುರ ಗ್ರಾಮೀಣ ಬಿಜೆಪಿ ಮಂಡಲದ ಅಧ್ಯಕ್ಷ ರಾಜುಗೌಡ ಉಕ್ಕನಾಳ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ವೀರರಾಣಿ ಕಿತ್ತೂರ ಚೆನ್ನಮ್ಮಳ 199 ನೆ ಜಯಂತಿ ಅಂಗವಾಗಿ ರಾಣಿ ಚೆನ್ನಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರಾಣಿ ಚೆನ್ನಮ್ಮ ದೇಶದ ಎರಡನೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಎಂದೆ ಹೆಸರಾಗಿದ್ದಾರೆ. ಅವರ ಶೌರ್ಯ, ಸಾಹಸ, ಆದರ್ಶಗಳನ್ನು ಯುವ ಪೀಳಿಗೆ ಅನುಸರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಸಂಗಣ್ಣ ತುಂಬಗಿ, ಗುಂಡುಗೌಡ ಯಾಳಗಿ, ಶರಣಪ್ಪ ಯಾಳಗಿ, ಗುರುಮೂರ್ತಿ ಪತ್ತಾರ, ಮಲ್ಲಿನಾಥಗೌಡ ಪಾಟೀಲ, ಗೌಡಪ್ಪಗೌಡ ಅಸಂತಾಪುರ, ಭೀಮನಗೌಡ ಮುದನೂರ, ರಾಜು ಬಾಂಬೆ, ಶಿವಪ್ಪ ಕಂಬಾರ, ಅನ್ವರ ನಾಶಿ, ಶಿವು ಸಾಸನೂರ, ಯಮನಪ್ಪ ಕುಂಬಾರ ಸೇರಿದಂತೆ ಇತರರಿದ್ದರು.