ಶಹಾಬಾದ: ಸಮಸ್ಯೆ ಹೇಳಿಕೊಂಡ ಬಂದ ಮಹಿಳೆಯ ಕೆನ್ನೆ ಬಾರಿಸಿದ ಸಚಿವ ವಿ. ಸೋಮಣ್ಣನವರು ಮಹಿಳಾ ಕುಲಕ್ಕೆ ಅವಮಾನ ಮಾಡಿದ್ದಾರೆ. ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತೆವೆ.ಅಲ್ಲದೇ ಕೂಡಲೇ ಬಿಜೆಪಿ ಸರಕಾರ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ತೆಗೆದುಕೊಳ್ಳಬೇಕೆಂದು ಕಲಬುರಗಿ ಕಾಂಗ್ರೆಸ್ ಜಿಲ್ಲಾ ವಕ್ತಾರ ಪೀರಪಾಶಾ ಒತ್ತಾಯಿಸಿದ್ದಾರೆ.
ಮಹಿಳೆಯರ ಮೇಲೆ ಕಪಾಳ ಮೋಕ್ಷ ಮಾಡಿದ ಸಚಿವ ವಿ.ಸೋಮಣ್ಣ ಸಚಿವ ಸ್ಥಾನದಲ್ಲಿ ಮುಂದುವರೆಯುವುದಕ್ಕೆ ಯೋಗ್ಯತೆ ಇಲ್ಲ. ಅವರ ವರ್ತನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೆವೆ. ಮಹಿಳೆಯೆಂದರೆ ಇಡೀ ಸಮಾಜ ಸೌಜನ್ಯದಿಂದ ಕಾಣುತ್ತದೆ.ಆದರೆ ಸೋಮಣ್ಣನವರು ಒಬ್ಬ ಸಚಿವರಾಗಿ ಮಹಿಳೆಯ ಮೇಲೆ ಕೈ ಎತ್ತಿರುವುದು ರಾಕ್ಷಸ ಸಂಸ್ಕøತಿ ಎತ್ತಿ ತೋರಿಸುತ್ತದೆ.
ಈ ಘಟನೆ ನಡೆದರೂ ಇಲ್ಲಿಯವರೆಗೆ ಬಿಜೆಪಿಯ ಯಾವೊಬ್ಬ ಮುಖಂಡರು ಮಹಿಳೆಯ ಪರ ಧ್ವನಿ ಎತ್ತುತ್ತಿಲ್ಲ. ಶೋಭಾ ಕರಂದ್ಲಾಜೆಯವರು ಮಹಿಳೆಯಾಗಿ ಮಹಿಳೆಯ ಪರ ಮಾತನಾಡದಿರುವುದು ಅತಿ ದೊಡ್ಡ ದುರಂತ. ಬಿಜೆಪಿ ಸರಕಾರದ ಸಚಿವರು ಏನು ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಶಿಕ್ಷಣ ಸಚಿವರು ಸರಕಾರಿ ಶಾಲೆಯ ನಿರ್ವಹಣೆಗೆ ಮಾಸಿಕ ವಿದ್ಯಾರ್ಥಿಗಳ ಪೆÇೀಷಕರಿಂದ 100 ರೂಪಾಯಿ ದೇಣಿಗೆ ಪಡೆದುಕೊಳ್ಳುವಂತೆ ಆದೇಶ ಹೊರಡಿದ್ದರು.
ನಂತರ ಪೋಷಕರಿಂದ ಹಾಗೂ ವಿವಿಧ ಪಕ್ಷದ ಮುಖಂಡರಿಂದ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಆದೇಶ ವಾಪಸ್ಸು ಪಡೆದುಕೊಂಡರು.ನಂತರ ವಿ.ಸೋಮಣ್ಣ ಅವರ ವರ್ತನೆ ನೋಡಿದರೇ ಬಿಜೆಪಿ ಸಂಸ್ಕøತಿ ಹೇಗಿದೆ ಎಂದು ತೋರುತ್ತದೆ.ಕೂಡಲೇ ಸಚಿವ ಸೋಮಣ್ಣನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಇಲ್ಲದಿದ್ದರೇ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಳೆ ಪರಿಹಾರ ನೀಡಿ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಬೆಲೆ ಏರಿಕೆ, ನಿರೋದ್ಯೋಗ ,ಭ್ರಷ್ಟಾಚಾರ ಸಮಸ್ಯೆ ತಾಂಡವವಾಡುತ್ತಿದೆ.ಕೋಟಿಗಟ್ಟಲೇ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳು ಕಳಪೆ ಮಟ್ಟದಲ್ಲಾಗುತ್ತಿವೆ.ಇದರಿಂದ ರಾಜ್ಯದ ಜನರು ಹಿಂಸೆ ಅನುಭವಿಸುತ್ತಿದ್ದಾರೆ.ಇದರ ಮಧ್ಯೆ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ರೈತರು ಕಣ್ಣೀರು ಹಾಕುತ್ತಿದ್ದಾರೆ.ಇದರ ಮಧ್ಯೆ ಸರಕಾರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬೆಳೆ ಪರಿಹಾರ ನೀಡುತ್ತಿದ್ದಾರೆ.ಆದರೆ ಅದು ಕೂಡ ಸರಿಯಾಗಿ ರೈರ ಖಾತೆಗೆ ಹಾಕಿಲ್ಲ.ಕೆಲವರಿಗೆ ಕಡಿಮೆ.ಕೆಲವರಿಗೆ ಹೆಚ್ಚಿಗೆ ಬಂದಿವೆ.ಬೆಳೆ ಪರಿಹಾರದಲ್ಲೂ ಅಸಮಾನತೆ ತೋರಿದ್ದಾರೆ.
ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಸಮೀಕ್ಷೆ ಮಾಡಿದ್ದಾರೆ ಹೊರತು, ರೈತರ ಹೊಲಗಳಿಗೆ ತೆರಳಿ ನೋಡಿಲ್ಲ.ಇದರಿಂದ ರೈತಾಪಿ ವರ್ಗದವರಿಗೆ ಎಲ್ಲಿಲ್ಲ ತೊಂದರೆಯುಂಟಾಗಿದೆ.ಇದಕ್ಕೆ ರಾಜ್ಯ ಸರಕಾರವೇ ಹೋಣೆ.ಕಷ್ಟದಲ್ಲಿರುವ ರೈತರಿಗೆ ಸಹಾಯಹಸ್ತಕ್ಕೆ ಬರದಿದ್ದರೇ ಸರಕಾರ ಯಾಕೇ ಬೇಕು.ಜನರ ರಕ್ತ ಹೀರುವ ಸರಕಾರ ಆಗದೇ, ಕೂಡಲೇ ಬೆಳೆ ಪರಿಹಾರ ಹೆಚ್ಚಿಸಿ ರೈತರ ಕಣ್ಣೀರು ಒರೆಸುವ ಕೆಲಸ ಸರಕಾರ ಮಢಬೇಕು ಎಂದು ಪೀರಪಾಶಾ ಒತ್ತಾಯಿಸಿದರು.