ಸ್ವಾಭಿಮಾನ, ಶೌರ್ಯಕ್ಕೆ ಮತ್ತೊಂದು ಹೆಸರು ಕಿತ್ತೂರು ರಾಣಿ ಚೆನ್ನಮ್ಮ

0
26

ಶಹಾಬಾದ: ಕಿತ್ತೂರು ರಾಣಿ ಚೆನ್ನಮ್ಮ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಮುಂಚೆ ಬ್ರಿಟಿಷರ ಅಧಿಪತ್ಯಕ್ಕೆ ಧಿಕ್ಕಾರವನ್ನು ಹೇಳಿ ಈ ನೆಲದ ಸ್ವಾಭಿಮಾನ ಹಾಗೂ ಶೌರ್ಯಕ್ಕೆ ಮತ್ತೊಂದು ಹೆಸರಾಗಿ ತಮ್ಮ ಬದುಕನ್ನು ಇವತ್ತಿಗೂ ಮಾದರಿಯಾಗಿ ನಮ್ಮುಂದೆ ತೆರೆದಿಟ್ಟಿದ್ದಾರೆ ಎಂದು ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ ಹೇಳಿದರು.

ಅವರು ರವಿವಾರ ನಗರದ ಕನ್ನಡ ಭವನದಲ್ಲಿ ಕಸಾಪ ವತಿಯಿಂದ ಆಯೋಜಿಸಲಾದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ರಾಣಿ ಚೆನ್ನಮ್ಮನೊಂದಿಗೆ ದೇಶದ ಒಳಗಡೆಯಿದ್ದ ನಮ್ಮ ರಾಜರು ಒಗ್ಗಟ್ಟಿನಿಂದ ಕೈಜೋಡಿಸಿದ್ದರೆ ನಮಗೆ 250 ವರ್ಷಗಳ ಮುಂಚೆ ಸ್ವತಂತ್ರ ಸಿಗುತ್ತಿತ್ತು.ನಮ್ಮ ದೇಶದಲ್ಲಿಯೇ ಹುಟ್ಟಿ ಬೆಳೆದು ದೇಶಕ್ಕೆ ಸ್ವಾತಂತ್ರ್ಯ ಹಾಗೂ ಗೌರವ ತಂದ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆ ಮೂಲಕ ಅವರ ಉತ್ತಮ ಆದರ್ಶ ಪಾಲನೆಗಳು ಪ್ರತಿಯೊಬ್ಬರಲ್ಲಿಯೂ ಮನೆಮಾಡಬೇಕು.ಮಕ್ಕಳಲ್ಲಿ ಧೈರ್ಯ, ತ್ಯಾಗದ ಮನೋಭಾವನೆ ಬೆಳೆಸಬೇಕು.ಶಾಲಾ ಪಠ್ಯಪುಸ್ತಕಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಾಹಸಿ ಕಥೆಗಳು ಬರಬೇಕು.ಮಕ್ಕಳಲ್ಲಿ ಸ್ವಾಭಿಮಾನ, ದೇಶಭಕ್ತಿ ಬೆಳೆಸಿದರೆ ದೇಶಕ್ಕೆ ಭವಿಷ್ಯವಿದೆ ಎಂದು ಹೇಳಿದರು.

ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಮದ್ರಕಿ ಮಾತನಾಡಿ, ದೇಶ, ಭಾಷೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಕನ್ನಡ ಭಾಷೆಗಾಗಿ ಹೋರಾಟ ಮಾಡಿದ ವೀರ ಕಿತ್ತೂರಿನ ರಾಣಿ ಚೆನ್ನಮ್ಮನ ಆಶಯದಂತೆ ನಾಡಿನ ಜನರು ಯಾರಿಗೂ ತಲೆ ಬಾಗದೇ ಕನ್ನಡ ಭಾಷೆಯನ್ನು ಗೌರವಿಸಬೇಕಾಗಿದೆ.ಬ್ರಿಟಿಷರ ವಿರುದ್ಧ ಹೋರಾಡಿ ಶೌರ್ಯ ಮೆರೆದ ಸ್ತ್ರೀರತ್ನ ಕಿತ್ತೂರು ರಾಣಿ ಚೆನ್ನಮ್ಮ ಅವರಿಗೆ ಯಾವುದೇ ಜಾತಿಗೆ ಸಿಮೀತವಾಗಿಲ್ಲ. ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಬ್ರಿಟಿಷರ ವಿರುದ್ಧ ಏಕಾಂಗಿಯಾಗಿ ಹೋರಾಡಿದ ಮಹಿಳೆ.ಜಾತಿ, ಮನೆತನಕ್ಕಾಗಿ ಹೋರಾಟ ಮಾಡದೇ ಜನತೆಯ ರಕ್ಷಣೆಗಾಗಿ, ಸ್ವಾತಂತ್ರ್ಯಕ್ಕಾಗಿ ಪಣತೊಟ್ಟು ಹೋರಾಟ ನಡೆಸಿದವಳು ಎಂದರು.

ಕಸಾಪ ಜಿಲ್ಲಾಸಹಕಾರ್ಯದರ್ಶಿ ನಾಗಣ್ಣ ರಾಂಪೂರೆ ಹಾಗೂ ಖಜಾಂಚಿ ಬಾಬುರಾವ ಪಂಚಾಳ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಿಳೆಯರು ನಿರಂತರವಾಗಿ ನಮಗೆ ಸ್ಪೂರ್ತಿಯಾಗಿರಬೇಕು.ಅವರನ್ನು ಯಾವುದೇ ಜಾತಿಗೆ ಅಂಟಿಸಬಾರದು.ಎಲ್ಲರೂ ಒಂದೇ ಜಾತಿ.ಅದು ಮನುಷ್ಯ ಜಾತಿ.ಮಣ್ಣು ತಿಂದು ಹಣ್ಣು ಕೊಡುವ ಮರಗಳಿಗೆ ಯಾವ ಜಾತಿಯೂ ಇಲ್ಲ.ಅದನ್ನು ನೋಡಿಯಾದರೂ ಕಲಿಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಸಾಪ ಸದಸ್ಯರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here