ಸಾಧಕರಿಗೆ ದೇವನಾಂಪ್ರಿಯ ಪ್ರಶಸ್ತಿ ಪ್ರದಾನ

0
30

ಕಲಬುರಗಿ: ಪ್ರಶಸ್ತಿ ಪುರಸ್ಕಾರಗಳಿಂದ ವ್ಯಕ್ತಿಯ ಜವಾಬ್ದಾರಿ ಹೆಚ್ಚಳವಾಗುತ್ತದೆ. ಈ ಕಾರಣಕ್ಕೆ ಸಮಾಜಕ್ಕೆ ಎಲ್ಲರೂ ತಮ್ಮದೆಯಾದ ಕೊಡುಗೆ ನೀಡುವ ಮೂಲಕ ದೇಶದ ಏಳ್ಗೆಗೆ ಇನ್ನೂ ಹೆಚ್ಚಿನ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕಾದ ಅಗತ್ಯತೆ ಹಿಂದಿಗಿಂತಲೂ ಇಂದು ಹೆಚ್ಚಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷ ಹಾಗೂ ನಟ ನೆ.ಲ.ನರೇಂದ್ರಬಾಬು ಹೇಳಿದರು.

ನಗರದ ಹೊರವಲಯದ ರಾಜಾಪುರದ ವಿಶ್ವಕರ್ಮ ಶಿಕ್ಷಣ ಹಾಗೂ ಅಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ದೇವನಾಂಪ್ರಿಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ದೇಶಕ್ಕೆ ಹೊಸ ಆಲೋಚನೆಗಳು, ಹೊಸಹೊಸ ಅವಿಷ್ಕಾರಗಳ ಅಗತ್ಯತೆ ಇದೆ.. ಈ ನಿಟ್ಟಿನಲ್ಲಿ ಎಲ್ಲರೂ ಸಮಗ್ರ ವಿಕಾಸದೆಡೆಗೆ ಸಾಗಬೇಕಾದರೆ ದೇಶ ಮೊದಲು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಎಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಮಕ್ಕಳು ಹಾಗೂ ಯುವಕರ ದೇಶದ ಶಕ್ತಿ. ಮುಂದೆ ದೇಶದ ಚುಕ್ಕಾಣಿ ಹಿಡಿಯುವವರು ಅವರೇ, ಅವರಿಗೆ ಉತ್ತಮ ಸಂಸ್ಕಾರ, ದೇಶಪ್ರೇಮ, ಸಾಮಾಜಿಕ ಸೇವಾ ಮನೋಭಾವ ಬೆಳೆಸಬೇಕು ಎಂದು ಹೇಳಿದರು.

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಬಾಬು ಪತ್ತಾರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಇಂದಿನ ಮಕ್ಕಳಲ್ಲಿ ಕೌಶಲ ಬೆಳೆಸಬೇಕು. ಕೌಶಲ ಆಧಾರಿತ ಶಿಕ್ಷಣ ಅವರಿಗೆ ನೀಡಿದಾಗ ಮಾತ್ರ ಭವಿಷ್ಯದಲ್ಲಿ ಅವರು ಸ್ವಾವಲಂಬಿಗಳಾಗಿ ಬದುಕುತ್ತಾರೆ ಎಂದರು.

ಒಬಿಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಕೇಶವ, ವಕೀಲರಾದ ಮಹಾಂತೇಶ ಕವಲಗಿ, ಮೋನಪ್ಪ ಇನಾಮದಾರ ಸೇರಿದಂತೆ ಇತರರು ಮಾತನಾಡಿದರು. ವಿಶ್ವಕರ್ಮ ಶಿಕ್ಷಣ ಹಾಗೂ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ವೀರೇಂದ್ರ ಇನಾಮದಾರ ಅಧ್ಯಕ್ಷತೆ ವಹಿಸಿದ್ದರು. ಡಾ.ಶರಣಬಸಪ್ಪ ವಡ್ಡನಕೇರಿ ನಿರೂಪಿಸಿ ವಂದಿಸಿದರು.

ದೇವನಾಂಪ್ರಿಯ ಪ್ರಶಸ್ತಿ ಪುರಸ್ಕೃತರು: ಗುರುಶಾಂತಯ್ಯ ಭಂಟನೂರ, ಡಾ.ನಾಗೇಂದ್ರ ಮಸೂತಿ, ಪ್ರಭುಲಿಂಗ ನೀಲೂರೆ, ಡಾ.ಕರುಣಾ ಜಮದರಖಾನಿ, ಶಿವಾನಂದ ವೈಜಾಪುರ, ಡಾ.ಚಿ.ಸಿ.ನಿಂಗಣ್ಣ, ಡಾ. ಸಂಗಮೇಶ ಹಿರೇಮಠ, ಡಾ.ಉಮಾದೇವಿ, ಡಾ. ಹಣಮಂತ ಮೇಲಕೇರಿ ಹಾಗೂ ಶರಣಪ್ಪ ಹೊನ್ನಗೆಜ್ಜೆ ಅವರಿಗೆ ದೇವನಾಂಪ್ರಿಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here