ಕಲಬುರಗಿ: ರಾಜ್ಯದ ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಎ. ಮುನಿರತ್ನ ಅವರು, ನಾಗನಳ್ಳಿಯ ಬಸವರಾಜ ಪೀರಪ್ಪ ಅವರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ತಾಕಿಗೆ ಭೇಟಿ ನೀಡಿ ರೈತರನ್ನು ಸದರಿ ಯೋಜನೆಯ ಬಗ್ಗೆ ಹಾಗೂ ಸೀಬೆ ಬೆಳೆಯ ಬಗ್ಗೆ ತಾಂತ್ರಿಕವಾಗಿ ಸಲಹೆ ನೀಡಿದರು.
ಹಾಗೂ ಇಲಾಖೆಯ ಹನಿ ನೀರಾವರಿ ಯೋಜನೆಯ ಸದುಪಯೋಗವನ್ನು ಒಗ್ಗೂಡಿಸುವಿಕೆಯೊಂದಿಗೆ ಪಡೆದುಕೊಂಡಿರುತ್ತಾರೆಂದು ತಿಳಿಸಿದರು. ರೈತರ ತೋಟದಲ್ಲಿ ಶಿಮ್ಲಾದಿಂದ ತಂದ ಸೇಬಿನ ಗಿಡಗಳನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇಲಾಖೆಯ ಅಧಿಕಾರಿಗಳಿಗೆ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮತ್ತು ಪ್ರಗತಿ ವರದಿಯನ್ನು ಪಡೆದುಕೊಂಡರು ಹಾಗೂ ಆರ್ಥಿಕ ವರ್ಷವು ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಖರ್ಚು ಭರಿಸಲು ಸೂಚಿಸಿದರು. ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಇತರರಿದ್ದರು.