ಕಲಬುರಗಿ: ಇಂದು ಬೆಳಿಗ್ಗೆ ನಗರದ ಹೊರ ವಲಯದ ರಾಮತೀರ್ಥ ದೇವಸ್ಥಾನದ ಪಕ್ಕದ ಅಲೆಮಾರಿ ಸಮುದಾಯದ ಗುಡಿಸಲಿನಲ್ಲಿ ಇರುವ ಮಕ್ಕಳಿಗೆ ಹಾಲು ಕೂಡಿಸುವ ಮೂಲಕ ವಿಭಿನ್ನ ರೀತಿಯ ನಾಗರ ಪಂಚಮಿ ಹಬ್ಬ ಆಚರಿಸಲಾಯಿತು .
ಹುತ್ತಕ್ಕೆ ಹಾಲು ಎರೆದು ಪೌಷ್ಟಿಕ ಆಹಾರ ಹಾಳು ಮಾಡುವ ಬದಲು ಬಡ ಮಕ್ಕಳಿಗೆ ನೀಡಿ ಸಂಪ್ರದಾಯದ ಹೆಸರಿನಲ್ಲಿ ಪೌಷ್ಟಿಕ ಆಹಾರವಾದ ಹಾಲನ್ನು ಹಾಳು ಮಾಡಬೇಡಿ ಎಂದು ಜನರಿಗೆ ಮನವಿ ಮಾಡಲಾಯಿತು .
ಈ ಕಾರ್ಯಕ್ರಮದಲ್ಲಿ ಯುವ ಹೋರಾಟಗಾರ ಸುನೀಲ ಮಾನಪಡೆ ಮಕ್ಕಳ ಹಕ್ಕುಗಳ ಹೋರಾಟಗಾರ ವಿಠಲ ಚಿಕಣಿ, ಸಂವಾದ ಸಂಸ್ಥೆಯ ರುಕ್ಮಿಣಿ, ಪೂಜಾ ಸಿಂದೆ, ಕಲಾವಿದರಾದ ಸಾಯಿಬಣ್ಣ ದೊಡ್ಡಮನಿ , ಬಾಬು ಪಠಣ , ರಮೇಶ ,ಅಂಬರೀಶ್, ಮಹಾಂತೇಶ ಸೇರಿದಂತೆ ಬಡಾವಣೆಯ ಮಹಿಳೆಯರು ಇದ್ದರು.