ವಿವಿಧ ಬೇಡಿಕೆಗಳಿಗಾಗಿ ಶೋಷಿತರ ಪರ ಹೋರಾಟಗಾರರಿಂದ ಸುರಪುರ ಬಂದ್‌ಗೆ ನಿರ್ಧಾರ

0
57

ಸುರಪುರ: ಅನೇಕ ಬೇಡಿಕೆಗಳ ಈಡೇರಿಸಲು ಅನೇಕ ಬಾರಿ ಮನವಿ ಮಾಡಿದರು ಸರಕಾರಗಳು ನಿರ್ಲಕ್ಷ್ಯ ತೋರಿಸುತ್ತಿವೆ.ಇದರಿಂದ ಬೇಸತ್ತು ಈ ತಿಂಗಳ ೧೨ನೇ ತಾರೀಖಿನಂದು ಸುರಪುರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಬೇಸರ ವ್ಯಕ್ತಪಡಿಸಿದರು.

ಒಕ್ಕೂಟದಿಂದ ನಗರದ ಡಾ: ಬಾಬಾ ಸಾಹೇಬ ಅಂಬೇಡ್ಕರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಹಲವಾರು ವರ್ಷಗಳಿಂದ ತಾಲ್ಲುಕಿನಲ್ಲಿನ ಅನೇಕ ಸಮಸ್ಯೆಗಳು ಹಾಗೆ ಉಳಿದಿವೆ.ಈ ಸಮಸ್ಯೆಗಳ ಬಗೆಹರಿಸಲು ಅನೇಕ ಬಾರಿ ಪ್ರತಿಭಟನೆ ನಡೆಸಿ ಮನವಿ ಮಾಡಿದರು ಪ್ರಯೋಜನೆಯಾಗುತ್ತಿಲ್ಲ.ಆದ್ದರಿಂದ ಈಗ ಕೊನೆಯಬಾರಿ ಮನವಿ ಮಡುತ್ತಿದ್ದು ಒಂದು ವಾರದೊಳಗೆ ನಮ್ಮ ಬೇಡಿಕೆಗಳ ಈಡೇರಿಸದಿದ್ದಲ್ಲಿ ಸುರಪುರ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದರು.

Contact Your\'s Advertisement; 9902492681

ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟಿರುವುದರಿಂದ ಸಾವಿರಾರು ಎಕರೆ ಬೆಳೆ ನಾಶವಾಗಿದೆ,ರೈತರಿಗೆ ಪರಿಹಾರ ನೀಡಬೇಕು.ಹಾಳಾದ ರಸ್ತೆಗಳ ದುರಸ್ತಿಗೊಳಿಸಬೇಕು. ತಾಲ್ಲೂಕಿನಲ್ಲಿ ಅನೇಕ ವಿದ್ಯಾರ್ಥಿ ವಸತಿ ನಿಲಯಗಳು ಖಾಸಗಿ ಕಟ್ಟಡದಲ್ಲಿ ನಡೆಸಲಾಗುತ್ತಿದ್ದು.ಸ್ವಂತ ಕಟ್ಟಡಗಳ ನಿರ್ಮಿಸಲು ಕ್ರಮ ಕೈಗೊಳ್ಳಬೇಕು.ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬೊಮ್ಮನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಿಗೆ ಬೆಳಿಗ್ಗೆ ಸರಿಯಾದ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು.ನರಸಿಂಗಪೇಟೆ ಮತ್ತು ಸೀಬಾರ ಬಂಡಿ ಬಳಿ ನಿರ್ಮಿಸಲಾದ ಹೌಸಿಂಗ್ ಬೋರ್ಡ ಮನೆಗಳ ಹರಾಜು ಮಾಡಿ ಜನೊಪಯೋಗಕ್ಕೆ ನೀಡಬೇಕು.

ನಗರದ ಎಲ್ಲಪ್ಪ ಬಾವಿ ಬಳಿ ನಿರ್ಮಿಸಲಾಗುತ್ತಿರುವ ಉದ್ಯಾನವನದ ಕಾಮಗಾರಿ ಪೂರ್ತಿಗೊಳಿಸಬೇಕು.ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿನ ಆಶ್ರಯ ಮನೆಗಳ ಹಂಚಿಕೆಯಲ್ಲಿನ ಭ್ರಷ್ಟಾಚಾರದ ತನಿಖೆ ನಡೆಸಿ ಅರ್ಹರಿಗೆ ಮನೆಗಳ ಒದಗಿಸಬೇಕು. ನಗರದ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಬೇಕು ಮತ್ತು ಭದ್ರತಾ ಸಿಬ್ಬಂದಿ ನೇಮಕಗೊಳಿಸಬೇಕು. ಅಂಗನವಾಡಿಗಳಿಗೆ ಪೂರೈಸಲಾಗುವ ತತ್ತಿ ಮತ್ತಿತರೆ ವಸ್ತುಗಳ ಖರೀದಿಯಲ್ಲಿನ ಅವ್ಯವಹಾರ ತನಿಖೆ ನಡೆಸಿ ಪಾರದರ್ಶಕತೆ ತರಬೇಕು. ತಾಲ್ಲುಕಿನಲ್ಲಿನ ಅನೇಕ ಗ್ರಾಮಗಳಲ್ಲಿ ನಿರ್ಮಿಸಬೇಕಾದ ವಾಲ್ಮೀಕಿ ಭವನ ಸೇರಿದಂತೆ ಎಲ್ಲಾ ಭವನಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಉಪ ತಹಸೀಲ್ದಾರ ನಾಸೀರ ಅಹ್ಮದ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಉಸ್ತಾದ ವಜಾಹತ್ ಹುಸೇನ,ಗೋಪಾಲ ಬಾಗಲಕೋಟೆ,ಮಾನಯ್ಯ ದೊರೆ,ಕೃಷ್ಣಾ ದಿವಾಕರ, ಕೇಶಣ್ಣ ದೊರೆ, ಬಸವರಾಜ ಕವಡಿಮಟ್ಟಿ,ದೇವಪ್ಪ ದೇವರಮನಿ, ಅಶೋಕ, ಸಂಗಣ್ಣ, ಅಯ್ಯಾಳಪ್ಪ, ದೇವಿಂದ್ರಪ್ಪ, ಭೀಮಣ್ಣ, ಬಸವರಾಜ,ನಾಗರಾಜ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here