ಯಡ್ರಾಮಿ: ಆರೋಗ್ಯ ಸಿಬ್ಬಂದಿಗೆ 1.50 ಕೋಟಿ ವೆಚ್ಚದಲ್ಲಿ ವಸತಿ ಗೃಹ: ಡಾ. ಅಜಯ್ ಸಿಂಗ್

0
20

ಜೇವರ್ಗಿ: ಜೇವರ್ಗಿ ಮತಕ್ಷೇತ್ರದಲ್ಲಿ ಬರುವ ಯಡ್ರಾಮಿ ಸಮುದಾಯ ಆಕೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಅಲ್ಲೇ ಇದ್ದು ಕರ್ತವ್ಯ ಮಾಡುವಂತೆ ಅನುಕೂಲವಾಗಲೆಂದು ತಾವೇ ಮುತುವರ್ಜಿ ವಹಿಸಿ 1 . 50 ಕೋಟಿ ಮೊತ್ತದಲ್ಲಿ ವಸತಿ ಯೋಜನೆ ಸಿದ್ಧಪಡಿಸಿ ಸರ್ಕಾರದಿಂದ ಮಂಜೂರಾತಿ ಪಡೆದಿದ್ದಾಗಿ ಹೇಳಿರುವ ಜೇವರ್ಗಿ ಶಾಸಕರು ಹಾಗೂ ವಿಧಾನಸಬೆ ವಿರೋಧ ಪಕ್ಷ ಮುಖ್ಯ ಸಚೇತಕರಾದ ಡಾ. ಅಜಯ್ ಸಿಂಗ್ ಕ್ಷೇತ್ರದ ಬಡ ಜನತೆಯ ಆರೋಗ್ಯ ಸಂರಕ್ಷಣೆಗೆ ತಾವು ಸದಾ ಕಟಿಬದ್ಧ ಎಂದಿದ್ದಾರೆ.

ಶುಕ್ರವಾರ ಯಡ್ರಾಮಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ 1. 50 ಕೋಟಿ ವೆಚ್ಚದ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಇಟ್ಟು ಅವರು ಮಾತನಾಡಿದರು.

Contact Your\'s Advertisement; 9902492681

ಆರೋಗ್ಯ ಸಿಬ್ಬಂದಿ ಹಳ್ಳಿಗಳಲ್ಲಿದ್ದು ಸೇವೆ ನೀಡಿದಲ್ಲಿ ಜನತೆಗೆ ಸದಾಕಾಲ ಆರೋಗ್ಯ ರಕ್ಷಣೆ ದೊರಕುತ್ತದೆ. ಇದೇ ಕಾರಣಕ್ಕಾಗಿಯೇ ಆರೋಗ್ಯ ಸಿಬ್ಬಂದಿಗೆ ಇರಲು ಮನೆಗಳನ್ನು ನಿರ್ಮಿಸಲು ತಾವು ಆದ್ಯತೆ ನೀಡಿದ್ದಾಗಿ ಡಾ. ಅಜಯ್ ಸಿಂಗ್ ಹೇಳಿದ್ದಾರೆ. ತಾಲೂಕು ಆರೋಗ್ಯಾಧಿಕಾರಿಗಳು, ಇತರೆ ಸಿಬಬಂದಿಗಳು,  ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here