ಕಲಬುರಗಿ: ಮಹಿಳೆ ಮತ್ತು ಹಸು ಗೂಸುಗಳ ಸಾವಿಗೆ ಕಾರಣರಾದ ವೈದ್ಯರು ಹಾಗೂ ಸಿಬ್ಬಂದಿಯ ಮೇಲೆ ಕೊಲೆ ಮೊಕದ್ದಮೆ ದಾಖಲಿಸಬೇಕು ಮತ್ತು ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕೆಂದು ಜನವಾದಿ ಮಹಿಳಾ ಸಂಘಟನೆ ಅಗ್ರಹಿಸಿದೆ.
ತುಮಕೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯೊಬ್ಬರನ್ನು ತಾಯಿ ಕಾರ್ಡು. ಆಧಾರ್ ಕಾರ್ಡು ಇಲ್ಲ ಎಂಬ ಕಾರಣದಿಂದ ಎಷ್ಟೇ ಪರಿಪರಿಯಾಗಿ ಬೇಡಿಕೊಂಡರು ಆಸ್ಪತ್ರೆಗೆ ದಾಖಲಿಸಿ ಕೊಳ್ಳದೆ ಚಿಕಿತ್ಸೆಯನ್ನು ನೀಡದೆ ವಾಪಸ್ ಕಳುಹಿಸಿದ ಅಮಾನವೀಯ ಘಟನೆಯಿಂದ ಹೆರಿಗೆಯ ಸಂದರ್ಭದಲ್ಲಿ ಮಹಿಳೆ ಮತ್ತು ಎರಡು ಹಸುಗೂಸುಗಳ ಸಾವಿಗೆ ಕಾರಣರಾದ ವೈದ್ಯರು ಮತ್ತು ಇತರೆ ಸಿಬ್ಬಂದಿ ಮೇಲೆ ಕೊಲೆ ಮೊಕದ್ದಮೆ ದಾಖಲಿಸಬೇಕು ಹಾಗೂ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕೆಂದು ಸಂಘಟನೆಯ ಅಧ್ಯಕ್ಷರಾದ ಮೀನಾಕ್ಷಿ ಬಾಳಿ ಒತ್ತಾಯಿಸಿದ್ದಾರೆ.
ಆರೋಗ್ಯ ಶಿಕ್ಷಣ ಉದ್ಯೋಗ ಆಹಾರ ಮೂಲಭೂತಕ್ಕಾಗಬೇಕು .ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ಆಡಳಿತದ ಕಾರಣದಿಂದ ಜನರು ಉದ್ಯೋಗ ಹರಿಸಿ ರಾಜ್ಯದಿಂದ ರಾಜ್ಯಕ್ಕೆ ಸಾವಿರಾರು ಮಂದಿ ವಲಸಿ ಹೋಗುತ್ತಾರೆ ಇಂಥ ಸಂದರ್ಭದಲ್ಲಿ ಯಾವುದೇ ರೀತಿಯ ದಾಖಲೆಗಳನ್ನು ಮಾಡಿಸಿಕೊಳ್ಳಲು ಅಥವಾ ಅವರ ಬಳಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಅದರಲ್ಲೂ ಗರ್ಭಿಣಿ ಮಹಿಳೆ ಪ್ರಸವ ಸಂದರ್ಭದಲ್ಲಿ ಮಗುವಿಗೆ ಜನ್ಮ ನೀಡಿ ಮರುಜೀವ ಪಡೆಯುತ್ತಾಳೆ. ಇವರ ಬಗ್ಗೆ ತುಂಬಾ ಜವಾಬ್ದಾರಿತವಾಗಿ ಪ್ರೀತಿಯಿಂದ ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಬೇಕಾದ ವೈದ್ಯರ ಮೃಗೀಯ ವರ್ತನೆ ಖಂಡನಾರ್ಹವಾದೆ ಎಂದು ತಿಳಿಸಿದ್ದಾರೆ.
ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬಹುತೇಕ ಕಡೆ ಹೆರಿಗೆಗೆ ಕನಿಷ್ಠ 10 ಸಾವಿರ ಲಂಚ ನಡೆಯುತ್ತಿದೆ ಹಣ ನೀಡದಿದ್ದರೆ ವಿನಾಕಾರಣ ಸಬೂಬು ಹೇಳಿ ಬೇರೆ ಕಡೆ ಸಾಗಿಸುತ್ತಾರೆ. 108 ಎಂಬ ಉಚಿತ ಆಂಬುಲೆನ್ಸ್ ಗೆ ರೋಗ ಬಂದಿದೆ ಈ ಕಾರಣದಿಂದ ಅಪಘಾತ. ತುರ್ತು .ಸಂದರ್ಭದಲ್ಲಿ ಹಾಗೂ ಬಡವರಿಗೆ ಆಂಬುಲೆನ್ಸ್ ಸೇವೆ ಎಂಬುದು ದುಬಾರಿಯಾಗಿದೆ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗದೆ ತೊಂದರೆ ಆಗುತ್ತಿದೆ ರಾಜ್ಯ ಸರ್ಕಾರ ಕೋವಿಡ್ ಸಂದರ್ಭವು ಸೇರಿದಂತೆ ಆರೋಗ್ಯ ಇಲಾಖೆಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ ಈ ಕಾರಣದಿಂದಾಗಿ ಕಾರ್ಯಾಂಗದ ಮೇಲೆ ಯಾವುದೇ ರೀತಿಯ ಹಿಡಿತ ಇಲ್ಲವಾಗಿದೆ ಆರೋಗ್ಯ ಇಲಾಖೆಯ ದುಸ್ಥಿಗೆ ಆರೋಗ್ಯ ಸಚಿವರೆ ನೇರ ಕಾರಣರಾಗಿದ್ದಾರೆ ಅದ್ದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಉಪಾಧ್ಯಕ್ಷ ಕೆ ನೀಲಾ ಹೇಳಿದ್ದಾರೆ.
ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರವು ಸೇರಿದಂತೆ ಎಲ್ಲಾ ಕಡೆ ಸುಸಜ್ಜಿತ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯನ್ನು ಉತ್ತಮಪಡಿಸಬೇಕು ಖಾಲಿ ಇರುವ ಪ್ರಸೂತಿ ತಜ್ಞರು ಸೇರಿದಂತೆ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಸಿಬ್ಬಂದಿಯನ್ನು ಭರ್ತಿಮಾಡಬೇಕು ಎಂದು ಹಾಗೂ ಉತ್ತಮ ಕಟ್ಟಡ ವಾರ್ಡ್ ಳ ನಿರ್ಮಿಸಬೇಕೆಂದು ದೇವಿ, ಚಂದಮ್ಮ ಗೋಳಾ, ಪದ್ಮಿನಿ ಕಿರಣಗಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.