ಜನಪರ ಹಕ್ಕೊತ್ತಾಯಿಸಿ ಭಾರತ ಕಮ್ಯುನಿಸ್ಟ್ ಪ್ರತಿಭಟನೆ

0
22

ಆಳಂದ: ವಿವಿಧ ರೈತಪರ ಹಾಗೂ ಕಾರ್ಮಿಕ ಪರ ಬೇಡಿಕೆಗೆ ಒತ್ತಾಯಿಸಿ ಪಟ್ಟಣದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ( ಮಾಕ್ರ್ಸ್‍ವಾದಿ) ನಿಂದ ಪ್ರಮುಖ ರಸ್ತೆಗಳ ಮೂಲಕ ಪ್ರತಿಭಟನೆ ಕೈಗೊಂಡು ಸರ್ಕಾರಕ್ಕೆ ಹಕ್ಕೊತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಅವರು ಮಾತನಾಡಿ, ಕರ್ನಾಟಕ ಸರಕಾರದ ರಾಜಕೀಯ ಸಾಮಾಜಿಕ ಹಾಗೂ ಆರ್ಥಿಕ ನಡೆಯು ರಾಜ್ಯದ ಜನತೆಯನ್ನು ಅತ್ಯಂತ ಸಂಕಷ್ಠಕ್ಕೀಡು ಮಾಡುವಂತಹದ್ದಾಗಿದೆ. ಇದರಿಂದ ಜನತೆಯ ನಡುವೆ ಅಸಮಾನತೆಯು ಮತ್ತಷ್ಠು ಆಳಗೊಳ್ಳುವಂತಾಗಿದೆ. ಶ್ರೀಮಂತರು ಬಡವರು ಹಾಗೂ ದಲಿತರು ಮತ್ತು ಮಹಿಳೆಯರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳು ಬೆಳೆಯುತ್ತಲೇ ಇವೆ. ರಾಜ್ಯದಲ್ಲಿ ಭ್ರμÁ್ಠಚಾರ ತಾಂಡವವಾಡುತ್ತಿದೆ. ಮಂತ್ರಿ ಮಂಡಲ ಹಾಗೂ ಉನ್ನತ ಅಧಿಕಾರಿಗಳ ಶಾಮೀಲುತನ ಕಂಡು ಬರುತ್ತಿದೆ. ಅತೀವೃಷ್ಠಿ ಹಾಗು ಪ್ರವಾಹದಿಂದ ರಾಜ್ಯ ನಲುಗುತ್ತಿದ್ದರೂ ಸಮರ್ಪಕ ಪರಿಹಾರ ಒದಗಿಸಲಾಗುತ್ತಿಲ್ಲ. ಸರಕಾರವೆ ಸಾಮಾಜಿಕ ಹಾಗೂ ಆರ್ಥಿಕ ತಾರತಮ್ಯವನ್ನು ಬೆಳೆಸುತ್ತಿದೆ. ಕೋಮುವಾದಿ ಶಕ್ತಿಗಳು ಬಹಿರಂಗವಾಗಿ ಕಾದಾಟಕ್ಕಿಳಿದಿವೆ ಎಂದು ಆರೋಪಿಸಿದರು.

Contact Your\'s Advertisement; 9902492681

ಈ ವೇಳೆ ಬಂಡಾಯ ಸಾಹಿತಿ ಡಾ. ಪ್ರಭು ಖಾನಾಪೂರೆ, ಸುಧಾಮ ಧನ್ನಿ, ಪಕ್ಷದ ತಾಲೂಕು ಕಾರ್ಯದರ್ಶಿ ಪಾಂಡುರಂಗ ಮಾವೀನಕರ್, ಸುಮಂಗಲಾ, ಸುನಿತಾ ದೇಗಾಂವ, ಭಾರತಬಾಯಿ ಆಳಂದ, ರೂಪಾ ಇಕ್ಕಳಕಿ ಸೇರಿದಂತೆ ಮತ್ತಿತರು ಇದ್ದರು. ಇದೇ ವೇಳೆ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಅವರು ಹಕ್ಕೊತ್ತಾಯ ಪ್ರತಿಯನ್ನು ಸಲ್ಲಿಸಿದರು.

ಅತೀವೃಷ್ಠಿ ಮತ್ತು ಪ್ರವಾಹ ಹಾಗೂ ಎರಡು ವರ್ಷ ಕೋವಿಡ್ ಸಂಕಷ್ಠದಿಂದ ರಾಜ್ಯ ನಲುಗಿ ಹೋಗಿದೆ. ಈ ನೆಲೆಯಲ್ಲಿ ಈ ಸಂಕಷ್ಠದಿಂದ ಪಾರು ಮಾಡಬೇಕು, ಮನೆ ಬಿದ್ದು ಹೋಗಿ ವಸತಿಯಿಂದ ವಂಚಿತರಾದ ರಾಜ್ಯದ ಎಲ್ಲ ಜನತೆಗೆ ಪಕ್ಕಾ ಮನೆಗಳನ್ನು ಕಟ್ಟಿಸಿಕೊಡಬೇಕು.

ಪ್ರವಾಹ ಹಾಗೂ ಅತೀವೃಷ್ಠಿಯಿಂದ ಹಾನಿಗೀಡಾದ ರೈತರ ಜಮೀನುಗಳ ಪುನರ್ ರೂಪಿಸಿಕೊಳ್ಳಲು ತಲಾ 50,000 ರೂಗಳ ಪರಿಹಾರ ಘೋಷಿಸಬೇಕು.

ಬೆಳೆ ಹಾನಿಗೆ ಎಕರೆಗೆ 25,000 ರೂಗಳ ಪರಿಹಾರ ಮತ್ತು ಬೆಳೆ ವಿಮೆ ಒದಗಿಸಬೇಕು. ರೈತರು, ಕೂಲಿಕಾರರು ಕಸುಬುದಾರರು ಮತ್ತು ಮಹಿಳೆಯರ ಖಾಸಗೀ ಹಾಗೂ ಸಾರ್ವಜನಿಕ ಸಾಲವೂ ಸೇರಿದಂತೆ ಎಲ್ಲಾ ರೀತಿಯ ಸಾಲವನ್ನು ಮನ್ನಾ ಹಾಗೂ ಎಲ್ಲ ಬಡವರ ಮಕ್ಕಳ ಶಾಲಾ ಹಾಗೂ ಕಾಲೇಜು ಶುಲ್ಕವನ್ನು ಮನ್ನಾ ಮಾಡಬೇಕು.

ರಾಜ್ಯದಲ್ಲಿ ನಡೆದ ಎಲ್ಲ ಭ್ರಷ್ಟಾಚಾರ ತನಿಖೆಗೊಳಪಡಿಸಲು ಸ್ವತಂತ್ರ ನ್ಯಾಯಾಂಗ ತನಿಖೆ ಇಲ್ಲವೇ ನ್ಯಾಯಸಂಗದ ಸುಪರ್ಧಿಯಲ್ಲಿ ಸಿಬಿಐ ತನಿಖೆಗೆ ಮತ್ತು ಸದನ ಸಮಿತಿ ರಚಿಸಿ ತನಿಖೆಗೆ ಕ್ರಮವಹಿಸಬೇಕು. ಸಾಮಾಜಿಕ ಹಾಗೂ ಆರ್ಥಿಕ ತಾರತಮ್ಯ ನಿವಾರಣೆಗೆ ಕ್ರಮವಹಿಸಿರಿ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ – 2020, ಏಪಿಎಂಸಿ ತಿದ್ದುಪಡಿ ಕಾಯ್ದೆ – 2020 ಹಾಗೂ ಜಾನುವಾರು ಹತ್ಯೆ ನಿμÉೀಧ ತಿದ್ದುಪಡಿ ಕಾಯ್ದೆ – 2020 ಮತ್ತು ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ವಾಪಾಸು ಪಡೆಯ ಬೇಕು.

ಕನಿಷ್ಟ ವೇತನವನ್ನು 21,000 ರೂಗಳಿಗೆ ಹೆಚ್ಚಿಸಬೇಕು. ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಕಾಯ್ದೆಯು ಆಧಾರವಾಗಿದೆ. ಆದರೆ ಇದನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. 200 ದಿನಗಳಿಗೆ ಹೆಚ್ಚಿಸಿ ರೂ.700 ಕೂಲಿ ಕೊಡಬೇಕು. ಕೇರಳ ಮಾದರಿಯಲ್ಲಿ ನಗರ ಉದ್ಯೋಗ ಖಾತ್ರಿ ತರಬೇಕೆಂದು ಎಂದು ಮನವಿ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here