ಕಲ್ಲಿಗೆ ಹಾಲು ಸುರಿಯುವ ಬದಲು ಮಕ್ಕಳಿಗೆ ಕುಡಿಸಿ

0
99

ಸುರಪುರ: ಮಾನವ ಬಂಧುತ್ವ ವೇದಿಕೆ ಹಾಗು ಬುದ್ಧ ಬಸವ ಅಂಬೇಡ್ಕರ ಜನ ಜಾಗೃತಿ ಸಮಿತಿಯಿಂದ ನಗರದ ಫಕೀರ ಓಣಿಯಲ್ಲಿನ ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳಿಗೆ ಹಾಲು ಕುಡಿಸುವವ ಮೂಲಕ ವೈಚಾರಿಕ ಬಸವ ಪಂಚಮಿ ಕಾರ್ಯಕ್ರಮ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಜೀವಪ್ಪ ಕಟ್ಟಿಮನಿ ಭಾಗವಹಿಸಿ ಮಾತನಾಡಿ,ದೇಶದಲ್ಲಿ ಹಲವಾರು ಮೌಢ್ಯಾಚರಣೆಗಳನ್ನು ನಡೆಸಲಾಗುತ್ತಿದೆ.ಅದರ ಅಂಗವಾಗಿ ನಾಗರ ಪಂಚಮಿ ಹೆಸರಲ್ಲಿ ಹಾಲನ್ನು ನಾಗರಕ್ಕೆ ಕುಡಿಸುವ ಹೆಸರಲ್ಲಿ ಕಲ್ಲಿನ ಮೇಲೆ ಸುರಿಯಲಾಗುತ್ತದೆ.ಇದು ಮೂಢ ನಂಬಿಕೆಯ ಭಾಗವಾಗಿದ್ದು,ಕಲ್ಲಿನ ಮೇಲೆ ಹಾಲು ಸುರಿಯುವ ಬದಲು ಮಕ್ಕಳಿಗೆ ಕುಡಿಸುವ ಮೂಲಕ ವೈಚಾರಿಕತೆ ಮೆರೆಯಬೇಕೆಂದರು.

Contact Your\'s Advertisement; 9902492681

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮಾನವ ಬಂಧುತ್ವ ವೇದಿಕೆ ಮುಖಂಡ ರಮೇಶ ದೊರೆ ಆಲ್ದಾಳ ಮಾತನಾಡಿ, ಮಾನವ ಬಂಧುತ್ವ ವೇದಿಕೆ ಹಾಗು ಬುದ್ಧ ಬಸವ ಅಂಬೇಡ್ಕರ ಜನ ಜಾಗೃತಿ ಸಮಿತಿಯಿಂದ ನಾಡಿನೆಲ್ಲೆಡೆ ಅನೇಕ ವೈಚಾರಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಅದರಂತೆ ಅನೇಕ ವರ್ಸಗಳಿಂದ ನಾಗರ ಪಂಚಮಿ ಬದಲು ಬಸವ ಪಂಚಮಿ ಆಚರಿಸುವ ಮೂಲಕ ಜನರಲ್ಲಿ ಹಾಲು ವ್ಯರ್ಥ ಮಾಡುವ ಬದಲು ಮಕ್ಕಳಿಗೆ ಕುಡಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಅಲ್ಲದೆ ಮುಂಬರುವ ದಿನಗಳಲ್ಲಿ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕರಾದ ಸತೀಶ ಜಾರಕಿಹೊಳೆಯವರ ನೇತೃತ್ವದಲ್ಲಿ ಸ್ಮಶಾನ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಲ್ಲಿನ ಮೌಢ್ಯದ ಭಯವನ್ನು ದೂರ ಮಾಡಲು ಪ್ರಯತ್ನಿಸಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಯುವ ಮುಖಂಡ ಅಖಿಲೇಶ ದೊರೆ ಮಾತನಾಡಿದರು.

ಈ ಸಂದರ್ಭದಲ್ಲಿ ಅಭಿಷೇಕ ನಾಯಕ,ಅಭೀಜಿತ್ ನಾಯಕ,ಅಶೋಕ ದೊರೆ,ಶಿವಪ್ರಸಾದ ಹೂಗಾರ,ಗೌರೀಶ ಚಿನ್ನಾಕಾರ,ಪ್ರವೀಣ ಕುಮಾರ,ಮಲ್ಲು ಮುಧೋಳ,ಅಂಗನವಾಡಿ ಕಾರ್ಯಕರ್ತೆ ರೇಣುಕಾ ಸೇರಿದಂತೆ ಅನೇಕರಿದ್ದರು.ಸ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here