ಕಲಬುರಗಿ: ಇಂದಿನ ಆಧುನಿಕ ದಿನಗಳಲ್ಲಿ ಅಲೋಪಥಿ ವೈದ್ಯಕೀಯ ವಿಜ್ಞಾನದ ಬೆಳವಣಿಗೆಯಲ್ಲಿ ದುಬಾರಿ ಚಿಕಿತ್ಸಾ ಪದ್ಧತಿಗಳ ಮಧ್ಯದಲ್ಲಿ ಆಯುರ್ವೇದ ತನ್ನತನವನ್ನು ಉಳಿಸಿಕೊಂಡು ಬಂದಿದೆ ಎಂದು ವಿಧಾನ ಪರಿಷತ್ ಶಾಸಕರಾದ ಶಶೀಲ್ ಜಿ ನಮೋಶಿ ಹೇಳಿದರು.
ಶನಿವಾರದಂದು ಜಿಲ್ಲಾ ವಿಜ್ಞಾನ ಭವನದಲ್ಲಿ ಆಯುಷ್ ಇಲಾಖೆ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಅಯುಷ್ ಇಲಾಖೆ ಕಲಬುರಗಿ ಮತ್ತು ರೋಟರಿ ಕ್ಲಬ್ ಮಿಡ್ ಟೌನ್ ಕಲಬರುಗಿ ಇವರ ಸಹಯೋಗದೊಂದಿಗೆ ಧನ್ವಂತರಿ ಜಯಂತಿಯ ಅಂಗವಾಗಿ 7 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಧನ್ವಂತರಿ ದೇವಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿಸಿ ಉದ್ಫಾಟಿಸಿ ಮಾತನಾಡಿದರು.
ಆಯುರ್ವೇದ ಜನರನ್ನು ತನ್ನ ಕಡೆಗೆ ಆಕರ್ಷಿಸುತ್ತಿದೆ ಇತ್ತೀಚಿನ ದಿನಗಳ ಆಯರ್ವೇದ ಬೇಡಿಕೆ ಹೆಚ್ಚಾಗುತ್ತಿದೆ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಿರಿಜಾ ಎಸ್.ಯು. ಅವರು ಮಾತನಾಡಿ, ಮನುಷ್ಯನು ನಾಗಾಲೋಟದ ಜೀವನದಲ್ಲಿ ಅನೇಕ ಒತ್ತಡಗಳು, ದುಗುಡು, ಭಯ, ಯಾಂತ್ರಿಕ ಜೀವನದಿಂದಾಗಿ ಮನುಷ್ಯನ ಮಾನಸಿಕ ಆರೋಗ್ಯವು ಹದಗೆಟ್ಟು ಜೀವನೋತ್ಸಾಹಕ ಕುಂದುತ್ತಿದೆ. ನಮ್ಮ ಆರೋಗ್ಯ ಸರಿಪಡಿಸಿಕೊಳ್ಳಲು ಯೋಗ, ಧ್ಯಾನ, ಪ್ರಾರ್ಥನೆ, ಆಹಾರ ವಿಹಾರ ಮತ್ತು ಜೌಷಧಿಗಳ ಬಳಕೆಯಿಂದ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು ಎಂದರು.
2016 ನೇ ಇಸ್ವಿಯಿಂದ 7 ನೇ ಅಂತರಾಷ್ಟ್ರೀಯ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಸೆಪ್ಟೆಂಬರ್ 12 ರಿಂದ ಅಕ್ಟೋಬರ್ 23 ರವರೆಗೆ ಒಟ್ಟು 6 ವಾರಗಳ ಕಾಲ ಗ್ರಾಮ ಪಂಚಾಯತ ಅಂಗನವಾಡಿ ಶಾಲೆಗಳಲ್ಲಿ ಅಂಗನವಾಡಿ ಕಟ್ಟಡಗಳಲ್ಲಿ ಆರ್ಯವೇದಿಕೆ ಜಾಗೃತಿ ಮೂಡಿಸಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮಗ್ರ ಆರೋಗ್ಯಕ್ಕಾಗಿ ಆಯುರ್ವೇದ, ಮಿಲೇನಿಯಲ್ಸ್‍ಗಳಿಗೆ ಆಯುರ್ವೇದ, ಆಯುರ್ವೇದ ಆಹಾರ, ಹಿರಿಯ ನಾಗರೀಕರಿಗಾಗಿ ಆಯುರ್ವೇದ, ಮಾನಸಿಕ ಯೋಗ ಕ್ಷೇಮಕ್ಕಾಗಿ ಆಯುರ್ವೇದ, ಆಯುರ್ವೇದ ಅನುಭವ ಹಂಚಿಕೆ ಇವುಗಳ ಬಗ್ಗೆ ಮಾಹಿತಿ ನೀಡಿದರು.
ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ. ಅರತಿ ಬಡಿಗೇರ್ ಉಪನ್ಯಾಸಕರಾಗಿ ಮಾತನಾಡಿ, ನಿದ್ರೆ, ಆಹಾರ ಮತ್ತು ಬ್ರಹ್ಮಚರ್ಯ ಆರೋಗ್ಯ ಕಾಪಾಡುವಲ್ಲಿ ಮೂರು ಪ್ರಮುಖ ಅಂಶಗಳೆಂದು ಆಯುರ್ವೇದ ತಿಳಿಸಿದೆ ಆಹಾರವನ್ನು ಸರಿಯಾದ ಸಮಯದಲ್ಲಿ ಸೇವಿಸುವುದು, ಅದರ ಜೊತೆಯಲ್ಲಿ ನಮಗೆ ದಿನನಿತ್ಯದ ವಾಯ್ಯಮ ಬಹಳ ಪ್ರಮುಖ್ಯವಾಗಿದೆ ಎಂದು ಹೇಳಿದರು.
ಭಾರತ ಜನಸಂಖ್ಯೆಯಲ್ಲಿ ಶೇ. 34 ರಷ್ಟು ಮಿಲ್ಲೇನಿಯಲ್ಸ್‍ಗಳು (21 ರಿಂದ 41 ರ ವಯಸ್ಸಿನ ಜನರು) ಇರುತ್ತಾರೆ ನಿರಂತರವಾಗಿ ಬೆಳೆಯುತ್ತಿರುವ ಮತ್ತು ಕ್ರಿಯಾತ್ಮಕ ಪೀಳಿಗೆಯನ್ನು ಸಶಕ್ತಗೊಳಿಸಲು ಆಯುರ್ವೇದ ಸನ್ನದ್ದವಾಗಿದ್ದು, ಈ ಪದ್ಧತಿಯ ಸಮಗ್ರ ವಿಧಾನವು ಅತ್ಯತ್ತಮವಾದ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಅಧ್ಯಾತ್ಮಿಕ ಆರೋಗ್ಯವನು ಪಡೆಯಲು ಸಹಾಯ ಮಾಡುತ್ತದೆ ಎಂದು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಮಾತನಾಡಿದರು.
ವೇದಿಕೆ ಮೇಲೆ ಜಿ.ಪಂ.ಯೋಜನಾ ನಿರ್ದೇಶಕ ಜಗದೇವಪ್ಪ, ಜಿಲ್ಲಾಧಿಕಾರಿಗಳ ಕಚೇರಿ ಶಿಷ್ಟಾಚಾರ ತಹಶೀಲ್ದಾರ ನಿಸಾರ ಅಹ್ಮದ ಅವರು ಉಪಸ್ಥಿತರಿದ್ದರು ಆಯುಷ ಇಲಾಖೆ ವೈದ್ಯಾಧಿಕಾರಿ ಡಾ.ಚಿದನಂದ ಮೂರ್ತಿ, ಡಾ. ಸುಧೀರ ಕುಳಗೇರಿ, ಸೇರಿದಂತೆ ಎಲ್ಲಾ ತಾಲೂಕಿನ ವೈದ್ಯಾಧಿಕಾರಿಗಳು ಎನ್.ಆರ್.ಎಚ್.ಎಮ್. ವೈದ್ಯಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ. ಶ್ರೀಶೈಲ ಪಾಟೀಲ ಕಾರ್ಯಕ್ರಮ ನಿರೂಪಿಸಿದರು ಹಾಗೂ ಡಾ.ಕೆ.ಬಿ. ಬಬಲಾದಿ ವಂದಿಸಿದರು.