ಮಕ್ಕಳ ಆನ್ ಲೈನ್ ಸಾಹಿತ್ಯ ಮೇಳ ಸಪ್ತಾಹ

0
12

ಸುರಪುರ: ಮಕ್ಕಳ ದಿನಾಚರಣೆಯ ಅಂಗವಾಗಿ ಅಜೀಮ ಪ್ರೇಮಜಿ ವಿಶ್ವವಿದ್ಯಾಲಯದ ವತಿಯಿಂದ ಸಾಹಿತ್ಯದೆಡೆಗೆ ಮಕ್ಕಳ ಪ್ರತಿಸ್ಪಂದನೆ ಕಾರ್ಯಕ್ರಮವನ್ನು ಶಿಕ್ಷಕರ ಕಲಿಕಾ ಕೇಂದ್ರ ದರ್ಬಾರದಲ್ಲಿ ಹಮ್ಮಿಕೊಳ್ಳಲಾಯಿತು.

5 ದಿನಗಳವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕತೆ ಕವನ ಅಭಿನಯ ಸಂಭಾಷಣೆ ಸಾಹಿತ್ಯದ ಕಡೆಗೆ ಮಕ್ಕಳಲ್ಲಿ ಆಸಕ್ತಿಯನ್ನುಂಟು ಮಾಡುವುದು ಈ ಕಾರ್ಯಕ್ರಮದ ಮೂಲ ಆಶಯ. ಮಾದರಿಯ ಪ್ರಾಥಮಿಕ ಶಾಲೆ ದರಬಾರ ಶಾಲೆಯ ಮಕ್ಕಳು ಭಾಗವಹಿಸಿದ್ದರು.

Contact Your\'s Advertisement; 9902492681

ಮೈತ್ರಿ ವಾಸುದೇವ್ ರವರು ಮಕ್ಕಳಿಗೆ ಅಜ್ಜಿಯ ಕಥೆಯನ್ನು ಹಾವ ಭಾವ ಸ್ಪಷ್ಟ ಉಚ್ಚಾರಣೆಯೊಂದಿಗೆ ಹೇಳುತ್ತಾ ಅಲ್ಲಲ್ಲಿ ಮಕ್ಕಳೊಂದಿಗೆ ಸಂಭಾಷಿಸುತ್ತಿದ್ದರು . ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಶನ್ ನ ಉಮಾಶಂಕರ ಪೆರಿಯೋಡಿ ಅವರು ಗಟ್ಟಿ ಓದು ಎಂಬ ವಿಷಯದ ಕುರಿತು ಚರ್ಚಿಸಿದರು .

ಕಾರ್ಯಕ್ರಮದಲ್ಲಿ ಮಕ್ಕಳು ತಾವು ಕೇಳಿರುವ ಅಜ್ಜಿಯ ಕಾಲ್ಪನಿಕ ಚಿತ್ರವನ್ನು ರಚಿಸಿ ಪ್ರದರ್ಶಿಸಲಾಯಿತು ಕಾರ್ಯಕ್ರಮದಲ್ಲಿ ಶಿಕ್ಷಕರಾದ ರೇಷ್ಮಾ ಮಹಾಲಕ್ಷ್ಮಿ ಅಜೀಂ ಪ್ರೇಮ್ ಜಿ ಫೌಂಡೇಶನ್ ನ ಪರಮಣ್ಣ ತೆಳಗೇರಿ ಅನ್ವರ್ ಜಮಾದರ್ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here