ಚಿಂಚೋಳಿ: ಪಿಯು ಕಾಲೇಜಿನ ನವೀಕರಣ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

0
60

ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮದ ಪಿಯು ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್ ಮತ್ತು ಕೊಠಡಿ ನವೀಕರಣ ಕಾರ್ಯಕ್ರಮಕ್ಕೆ ಸೋಲಾರ್ ಪ್ಯಾಕ್ ಪ್ರೋಜಕ್ಟರ್ ಮ್ಯಾನೇಜರ್ ವೆಂಕಟೇಶ್ವರ ರಾಜು ಹಾಗೂ ಬಾಲಾವಿಕಾಸ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಫ್ರಾನ್ಸಿಸ್ ಕ್ಸೇವಿಯರ್ ರೆಡ್ಡಿ ಚಾಲನೆ ನೀಡಿದರು.

ಸೋಲಾರ್ ಪ್ಯಾಕ್ ಪ್ರೋಜಕ್ಟರ್ ಮ್ಯಾನೇಜರ್  ವೆಂಕಟೇಶ್ವರ ರಾಜು ಮಾತನಾಡಿ ಅಕ್ಷರ ಜ್ಞಾನದ ಜತೆಗೆ ಇಂದಿನ ಕಂಪ್ಯೂಟರ್ ಯುಗದಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಮುಖ್ಯವಾಗಿದೆ. ಇದರಿಂದ ನಮ್ಮ ಸೋಲಾರ ಪ್ಯಾಕ್ ಬಾಲಾವಿಕಾಸ ಸಂಸ್ಥೆ ದಿಂದ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಂಪ್ಯೂಟರ ತರಬೇತಿ ನೀಡಲಾಗುತ್ತಿದೆ, ಮುಂಬರ ದಿನಗಳಲ್ಲಿ ಕಂಪ್ಯೂಟರ ಕೋಣೆಯ ಕಿಡಿ ,ವಾಟರ ಪ್ಲಾಟ್ ದುರಸ್ತಿ ಮಾಡುತ್ತೆವೆ ಮಕ್ಕಳು ಇದರ ಸದುಪಯೋಗ ಪಡೆಯಬೇಕು, ನಮ್ಮ ಸಂಸ್ಥೆಯಿಂದ ಯಾವ ರೀತಿ ಸಾಹಯ ಸಿಗುತ್ತದೆ ಅಂತಹ ಸೌಕರ್ಯಗಳು ನೀಡಲು ಸತತ ಪ್ರಯತ್ನ ಮಾಡುತ್ತೆವೆ ಎಂದು ಭರವಸೆ ನೀಡಿದರು.

Contact Your\'s Advertisement; 9902492681

ಬಾಲಾವಿಕಾಸ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಫ್ರಾನ್ಸಿಸ್ ಕ್ಸೇವಿಯರ್ ರೆಡ್ಡಿ  ಮಾತನಾಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿ ಜೀವನದ ಪ್ರಾರಂಭಿಕ ಹಂತದಿಂದಲೇ ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳುವುದರಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವುದರ ಜೊತೆಗೆ ಖಾಸಗಿ ಕ್ಷೇತ್ರದಲ್ಲೂ ಉದ್ಯೋಗ ಪಡೆಯಲು ಅನುಕೂಲವಾಗಲಿದೆ. ಇದರಿಂದ ಸ್ವಯಂ ಉದ್ಯೋಗವೂ ಮಾಡಬಹುದೆಂದು ಹೇಳಿದರು.

ಸೋಲಾರ್ ಪ್ಯಾಕ್ ಮತ್ತು  ಬಾಲವಿಕಾಸ ಸಂಸ್ಥೆಯಿಂದ ಕಂಪ್ಯೂಟರ್ ಶಿಕ್ಷಕ ನೇಮಕ ಮಾಡಿ ಶಾಲೆಯ ಮಕ್ಕಳಿಗೆ ಕಂಪ್ಯೂಟರ ಕಲಿಸುವ ಕೆಲಸ ಮಾಡುತ್ತಿದೆವೆ, ಸರಕಾರದಿಂದ ಕಂಪ್ಯೂಟರ ನೀಡಿದ್ದಾರೆ ಆದರೆ ಶಿಕ್ಷಕ  ನೇಮಕ ಮಾಡಿಲ್ಲ ಇದನ್ನು ಅರಿತು ಮಕ್ಕಳ ಭವಿಶ್ಯಕಾಗಿ ಸೋಲಾರ ಪ್ಯಾಕ-ಬಾಲ ವಿಕಾಸದಿಂದ ಶಿಕ್ಷಣ ನೀಡುತ್ತವೆ ಇದರ ಸದುಪಯೋಗ ಪಡೆಯಬೇಕು ಎಂದರು.

ಆರ್.ಐ ಕೇಶವರಾವ ಕುಲಕರ್ಣಿ, ವೆಂಕಟೇಶ್ವರ ರಾಜು, ಶರಣಬಸಪ್ಪ ಗಂಗಾಣಕರ್, ಬಾಲಾವಿಕಾಸ ಕಾರ್ಯಕ್ರಮ ಸಂಯೋಜನರು, ಪಿಜೆ ಪ್ರಾಸದ, ನಾರಾಯಣ ರೆಡ್ಡಿ, ಜಗ್ನಾಥ ಖೋದಂಪೂರ, ಮಾತನಾಡಿದರು ಇಂಜೀನಿಯರ್  ಅಶೋಕ , ನೀಲಕಂಟ , ಸೈಡ್  ಕೂಡಿನೇಟರ್ ಇರ್ಶಾದ ,ಬಾಲಾ ವಿಕಾಸ  ಕಾರ್ಯಕ್ರಮ ಸಂಯೋಜನರು, ಕೀರನ, ಬಾಲಾವಿಕಾಸ ಸೋಲಾರ ಕ್ಷೇತ್ರ ಸಂಯೋಜಕ ಲಿಂಗ್ಹಾ  ,ಮಲ್ಲಿನಾಥ ಬಿ ಅಣ್ಣಾರಾಯ ವಡ್ಡಳ್ಳಿ ಸತೀಶ ಕುಮಾರ ಬಿ ಯಾಸ್ಮೀನ್ ಬೇಗಂ ನಾಹೀದ್ ಬೇಗಂ, ಗಂಗಾಧರ ಹೊಸಳ್ಳಿ ನಾರಾಯಣ ರೆಡ್ಡಿ ಸ್ವಾಗತಿಸಿದರು, ವಿದ್ಯಾರ್ಥಿ ಕಾರ್ತಿಕ್ ನೀರೂಪಿಸಿದರು, ಗಂಗಾಧರ ಹಿಸಳ್ಳಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here