ಕಲಬುರಗಿ: ವಾರ್ಡ ನಂ. 54 ರ ತಾರಫೈಲ್ ಬಡಾವಣೆಯಲ್ಲಿ ಮೂಲಭೂತ ಸೌಕರ್ಯ ಮಂಜೂರ ಮಾಡಿ ಕಾಮಗಾರಿ ಕೈಗೊಳ್ಳಬೇಕೆಂದು ಕರುನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷ ಪುನೀತ ಕವಡೆ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.
ದೇವು ನೀಲೂರ ಮನೆಯಿಂದ ನರಸಪ್ಪ ಗೂಡೂರ ಮನೆಯವರೆಗೂ ಉದ್ದ 60 ಮೀಟರ್ ಸಿಸಿ ರಸ್ತೆ ಮೀಟರ್ ರಸ್ತೆ ನಿರ್ಮಾಣ ಹಾಗೂ ದೇವಿಂದ್ರಪ್ಪ ಉಳ್ಳೆಸೂಗುರು ಮನೆಯಿಂದ ಸರ್ಕಾರಿ ಪ್ರಾಥಮಿಕ ಶಾಲೆ ತಾರಫೈಲ್ 200 ಅಡಿ ಸಿಸಿ ರಸ್ತೆ ನಿರ್ಮಾಣ ಮಾಡುವುದು ಹಾಗೂ ನರಸಪ್ಪ ಗೂಡೂರಮನೆಯಿಂದ 2 ಒಳಚರಂಡಿ ಇದ್ದು ಭೂಗತ ಒಳಚರಂಡಿ ಸಂಪೂರ್ಣ ತಪ್ಪಾಗಿ ಮಾಡಿದ್ದಾರೆ, ಅಲ್ಲಿನ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸಿ ಇನ್ನೂ 2 ಒಳಚರಂಡಿ ಮಾಡಿಕೊಡಬೇಕು.
ದೇವಿಂದ್ರ ಉಳ್ಳೆಸೂಗುರು ಮನೆಯಿಂದ ಶ್ರೀಧರ ಹುಲಿಮನಿ ಮನೆಯವರೆಗೂ ಒಳಚರಂಡಿ ಮಾಡಿ ಅನುಕೂಲತೆ ಮಾಡಿಕೊಡಬೇಕು, 14 ನೇ ಅಡ್ಡ ರಸ್ತೆ , ಗುಡ್ ಶೆಥೋರ್ಡ ಮೆಥೋಡಿಸ್ಟ್ ದೇವಾಲಯ ತಾರಫೈಲ್, ಮತ್ತು ಬುದ್ಧ ಮಂದಿರ ಇಂದ ಆಂಜನೆಯ ಟೆಂಪಲ್ ವರೆಗೂ 150 ಮೀ ಸಿ.ಸಿ.ರಸ್ತೆ ನಿರ್ಮಾಣ ಹಾಗೂ ಒಳಚರಂಡಿ ಅನುಕೂಲತೆ ಮಾಡಿಕೊಡಬೇಕು 150 ಮೀಟರ್. ಆದಕಾರಣ ತಾವುಗಳು ಕೂಡಲೇ ಸದರಿ ಬಡಾವಣೆಗೆ ಮೂಲಭೂತ ಸೌಕರ್ಯ ಮಂಜೂರು ಮಾಡಿ ತಾರಫೈಲ್ ಜನರಿಗೆ ಅನುಕೂಲ ಮಾಡಿಕೊಡಲು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಒಂದು ವೇಳೆ ಕವಿಸೇ ಜಿಲ್ಲಾ ಘಟಕದ ಈ ಮನವಿಗೆ ಸ್ಪಂದಿಸದೇ ಇದ್ದಲ್ಲಿ ನಮ್ಮ ಸಂಘಟನೆಯ ವತಿಯಿಂದ ಮುಂದಿನ ದಿನಗಳಲ್ಲಿ ಮಾನವ ಸರಪಣೆ ಮೂಲಕ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ನಾಗರಾಜ ರಾಂಪೂರ, ಜಿಲ್ಲಾ ಪ್ರ.ಕಾರ್ಯದರ್ಶಿ ಪೃಥ್ವಿರಾಜ ರಾಂಪೂರ, ಪ್ರಭು ಯಳವಂತಗಿ, ನಿಸಾರಹ್ಮದ ಖಾನ್, ಕಲ್ಯಾಣಿ ತಳವಾರ, ಶಿವಲಿಂಗ ಗುತ್ತೇದಾರ, ಎಸ್.ಪಿ.ರಾಂಪೂರ, ಅಲ್ಲಿಸಾಬ್ ಹಾಗೂ ಬಡಾವಣೆಯ ಮಹಿಳೆಯರು ಇದ್ದರು.