ಕಲಬುರಗಿ: ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಸೇಂಟ್ ಮೇರಿ ಚರ್ಚ್ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಂಸ್ಕೃತಿಕ ಸಂಭ್ರಮ ಹಾಗೂ ಹಲವು ಸಾಧಕರಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ಸಾನಿಧ್ಯ ವಹಿಸಿದ್ದ ಶ್ರೀನಿವಾಸ ಸರಡಗಿಯ ಡಾ. ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ, ಕನ್ನಡ ಭಾμÉ, ನಾಡು-ನುಡಿ-ಸಂಸ್ಕೃತಿ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.ಅನೇಕ ಕಲಾವಿದರಿಂದ ಸಂಗೀತ ಸಂಭ್ರಮ ನಡೆಯಿತು. ಶರಣಗೌಡ ಪಾಳಾ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಚಿ.ಸಿ.ನಿಂಗಣ್ಣ ಅವರು ಕನ್ನಡ ನಾಡು,ನುಡಿ ಕುರಿತು ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಪಿ.ಡಬ್ಲ್ಯೂಡಿ. ಇಂಜಿನಿಯರ ಚಂದ್ರಶೇಖರ ನಾಶಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವಿನೋದ ಪಾಟೀಲ್ ಸರಡಗಿ, ಫಾದರ್ ಸಂತೋಷ, ಸಾಹಿತಿಗಳಾದ ಡಾ. ವಿಜಯಕುಮಾರ ಪರುತೆ, ಬಿ.ಎಚ್. ನಿರಗುಡಿ ವೇದಿಕೆಯಲ್ಲಿ ಇದ್ದರು. ಡಾ. ಶರಣಬಸಪ್ಪ ವಡ್ಡನಕೇರಿ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆಯಲ್ಲಿ ಸಿಪಿಐ ದೌಲತ್ ಎನ್.ಕೆ., ಲಿಂಗರಾಜ ಸಿರಗಾಪುರ, ಎ.ಎಸ್. ಭದ್ರಶೆಟ್ಟಿ, ಲಕ್ಷ್ಮಿ ಕೋರೆ, ಜಿ.ಜಿ. ವಣಿಕ್ಯಾಳ, ಡಾ. ವಿಜಯಲಕ್ಷೀ ನರೋಣಿ, ಬಿ.ಎಸ್.ಮಾಲಿಪಾಟೀಲ್, ಸುಭಾಷಶ್ಚಂದ್ರ ಕಶೆಟ್ಟಿ, ವಿನೋದ ಪಾಟೀಲ್, ಆಶೋಕ ಕಮಲಾಪುರ, ಬಾಬುರಾವ ಕುಲಕರ್ಣಿ ಸೇರಿ 67 ಸಾಧಕರಿಗೆ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.