ಕಲಬುರಗಿ: 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಠಿಯಿಂದ ಹಾಳಾದ ಬೆಳೆಗಳಿಗೆ ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲಾಗಿರುವವರ ಪೈಕಿ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯಾಗದೆ ಪರಿಹಾರಕ್ಕೆ ಬಾಕಿ ಉಳಿದುಕೊಂಡಿದ್ದ ಜಿಲ್ಲೆಯ 13,929 ರೈತರಿಗೆ 9.98 ಕೋಟಿ ರೂ. ಇನ್ಪುಟ್ ಸಬ್ಸಿಡಿ ಬಿಡುಗಡೆಗೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಬುಧವಾರ ಅನುಮೋದನೆ ನೀಡಿದ್ದಾರೆ.
ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾದ ಕಾರಣ ಬಾಕಿ ಉಳಿದಿದ್ದವು. ಇದೀಗ ಆಧಾರ್ ಜೋಡಣೆಯಾಗಿದ್ದರಿಂದ ಸಬ್ಸಿಡಿ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಈಗ ಅನುಮೋದನೆ ನೀಡಿದ ಪರಿಹಾರದ ಮೊತ್ತ 2-3 ದಿನದಲ್ಲಿ ರೈತರ ಖಾತೆಗೆ ಜಮೆ ಆಗಲಿದೆ.