ಶೋಷಿತ ಜನರ ವಿಮುಕ್ತಿಗೆ ರಷ್ಯಾದ ಮಹಾಕ್ರಾಂತಿ ನಮಗೆ ಸ್ಫೂರ್ತಿ

0
107

ಶಹಾಬಾದ: ಜಾಗತಿಕವಾಗಿ ಸಾಮ್ರಾಜ್ಯಶಾಹಿಗಳು ಹಾಗೂ ಬಂಡವಾಳಶಾಹಿಗಳು ಇಡೀ ಮನುಕುಲಕ್ಕೆ ಸೇರಿದ ಸಂಪನ್ಮೂಲಗಳನ್ನು ಹಾಗೂ ಜನಸಾಮಾನ್ಯರ ಶ್ರಮವನ್ನು ಲೂಟಿ ಮಾಡುತ್ತಿದ್ದಾರೆ. ಇದು ಪರಿಸರದ ಅಸಮತೋಲನೆಗೆ ಹಾಗೂ ಜನರ ಶೋಷಣೆಗೆ ಕಾರಣವಾಗಿದ್ದು ಇವರ ವಿರುದ್ಧ ಶೋಷಿತ ಕಾರ್ಮಿಕ ಹಾಗೂ ರೈತ ವರ್ಗದವರು ಸಂಘಟಿತ ಹೋರಾಟ ಮಾಡಬೇಕಾಗಿದೆ. ಈ ಹೋರಾಟಕ್ಕೆ ರಷ್ಯಾದ ಮಹಾಕ್ರಾಂತಿಯು ನಮಗೆ ಸ್ಫೂರ್ತಿಯಾಗಿದೆ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಷ್ಟ್) ಪಕ್ಷದ ಶಹಾಬಾದ ಸ್ಥಳೀಯ ಸಮಿತಿಯ ಕಾರ್ಯದರ್ಶಿಗಳಾದ ಕಾಮ್ರೇಡ್ ಗಣಪತರಾವ ಕೆ ಮಾನೆ ಹೇಳಿದರು.

ಗುರುವಾರ ಸಾಯಂಕಾಲ ಶಹಾಬಾದ ನಗರದ ಬಸವೇಶ್ವರ ವೃತ್ತದಲ್ಲಿ ಎಸ್.ಯು.ಸಿ.ಐ (ಐ) ಪಕ್ಷದ ವತಿಯಿಂದ ಸಂಘಟಿssಸಲಾದ ರಷ್ಯಾದ ನವೆಂಬರ್ ಕ್ರಾಂತಿಯ 105ನೇ ವರ್ಷಾಚರಣೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪ್ರಪಂಚದಲ್ಲಿಯೇ ರೋಗಗ್ರಸ್ಥವಾದ ದೇಶ ರಷ್ಯಾದಲ್ಲಿ ಕಾಮ್ರೇಡ್ ಲೆನಿನ್ ರವರು ಶೋಷಿತ ಕಾರ್ಮಿಕರನ್ನು ಕಮ್ಯೂನಿಸ್ಟ್ ವಿಚಾರಧಾರೆಯ ಆಧಾರದ ಮೇಲೆ ಸಂಘಟಿಸಿ ಕ್ರೂರ ಝಾರ್ ದೊರೆಗಳ ವಿರುದ್ಧ ಹೋರಾಟಗಳನ್ನು ಬೆಳೆಸಿ, 1917ರ ನವೆಂಬರನಲ್ಲಿ ಸಮಾಜವಾದಿ ಕ್ರಾಂತಿ ನೇರವೆರಿಸಿದರು. ಕ್ರಾಂತಿಯ ನಂತರ ಯು.ಎಸ್.ಎಸ್.ಆರ್ ಆದ ರಷ್ಯಾ ದೇಶವನ್ನು ಮುನ್ನಡೆಸಿದ ಲೆನಿನ್ ಹಾಗೂ ಸ್ಟಾಲಿನ್ ರವರು ಸಮಾಜವಾದಿ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಎಲ್ಲಾ ರಂಗಗಳಲ್ಲೂ ಅಭಿವೃದ್ಧಿಗೊಳಿಸಿದರು.

Contact Your\'s Advertisement; 9902492681

ಬಡತನ, ನಿರುದ್ಯೋಗ, ಬೆಲೆಏರಿಕೆ, ಅನಕ್ಷರತೆ, ವೈಶ್ಯವಾಟಿಕೆಯಂತಹ ಹಲವು ಸಮಸ್ಯೆಗಳನ್ನು ಬುಡಸಮೇತ ಕಿತ್ತುಹಾಕಿ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಿದ್ದರು. ಭಾರತದಲ್ಲಿ ಅಂತಹ ಸಮಾನತೆಯ ಸಮಾಜದ ಕನಸು ಕಂಡಿದ್ದ ಭಗತಸಿಂಗ್, ನೇತಾಜಿ ಸುಭಾಷಚಂದ್ರ ಬೋಸರ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ. ದೇಶವನ್ನು ಇಲ್ಲಿಯವರೆಗೆ ಆಳ್ವಿಕೆ ಮಾಡಿರುವ ಎಲ್ಲಾ ಪಕ್ಷಗಳು ಬಂಡವಾಳಶಾಹಿಗಳಿಗೆ ಸೇವೆ ಸಲ್ಲಿಸುತ್ತಿರುವುದರಿಂದ, ಜನಸಾಮಾನ್ಯರ ಸಮಸ್ಯೆಗಳು ಹಾಗಿಯೇ ಉಳಿದಿವೆ ಎಂದು ಹೇಳುತ್ತಾ ಜನಾಂದೋಲದ ಮೂಲಕ ಈ ವ್ಯವಸ್ಥೆಯನ್ನು ಕಿತ್ತೊಗೆದು ಸಮಾನತೆಯ ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸಲು ಮುಂದೆ ಬರಬೇಕೆಂದು ಕರೆ ನೀಡಿದರು.

ಎಸ್.ಯು.ಸಿ.ಐ (ಸಿ) ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಕಾಮ್ರೇಡ್ ರಾಮಣ್ನ ಎಸ್.ಇಬ್ರಾಹಿಂಪುರ ರವರು ಮಾತನಾಡುತ್ತ 1917ರ ಕ್ರಾಂತಿಯ ನಂತರ ರಷ್ಯಾವು ಅಮೆರಿಕಾಕ್ಕಿಂತ ವೇಗವಾಗಿ ಅಭಿವೃದ್ಧಿಯನ್ನ ಸಾಧಿಸಿತು. ಲೆನಿನ್ ಹಾಗೂ ಸ್ಟಾಲಿನಿನ ನಂತರ ಬಂದಂತಹ ನಾಯಕರ ತಪ್ಪು ನೀತಿಗಳಿಂದ್ದಾಗಿ ಅಲ್ಲಿ ಸಮಾಜವಾದಿ ವ್ಯವಸ್ಥೆಯು 1991ರಲ್ಲಿ ಕುಸಿತ ಕಂಡಿತು. ಇದು ತಾತ್ಕಾಲಿಕವಾಗಿದ್ದು, ರಷ್ಯಾದ ಜನರು ಲೆನಿನ್, ಸ್ಟಾಲಿನರ ಭಾವಚಿತ್ರಗಳನ್ನು ಹಿಡಿದು ಮತ್ತೆ ಸಮಾಜವಾದಿ ವ್ಯವಸ್ಥೆಗಾಗಿ ಹೋರಾಟಗಳನ್ನು ಪ್ರಾರಂಭಿಸಿದ್ದಾರೆ ಎಂದು ಹೇಳುತ್ತಾ ಭಾರತವು ಸ್ವಾತಂತ್ರ್ಯ ದೊರಕಿ 75 ವರ್ಷಗಳ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಇಲ್ಲಿಯವರೆಗೆ ಆಡಳಿತ ಮಾಡಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ, ಬಡತನ, ಬೆಲೆಏರಿಕೆ, ಅನಕ್ಷರತೆ, ಭ್ರಷ್ಟಾಚಾರವನ್ನು ಪರಿಹಾರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ, ಎಂದು ಆರೋಪಿಸಿದರು. ರಷ್ಯಾ ಕ್ರಾಂತಿಯ ಸ್ಫೂರ್ತಿಯನ್ನು ಪಡೆದು ಹಾಗೂ ಮಾಕ್ರ್ಸವಾದ, ಲೆನಿನ್‍ವಾದ ವೈಚಾರಿಕತೆಯನ್ನು ಜೀವನದಲ್ಲಿ ಆಳವಡಿಸಿಕೊಳ್ಳುವುದರ ಮೂಲಕ ಈ ಭ್ರಷ್ಟ ವ್ಯವಸ್ಥೆಯನ್ನು ಕಿತ್ತೊಗೆದು ಶೋಷಣೆಮುಕ್ತ ಸಮಾಜವನ್ನು ಕಟ್ಟಲು ಹೋರಾಟಕ್ಕೆ ಮುಂದೆ ಬರಬೇಕೆಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಸ್.ಯು.ಸಿ.ಐ (ಐ) ಪಕ್ಷದ ಸ್ಥಳೀಯ ಸಮಿತಿಯ ಸದಸ್ಯರಾದ ಕಾಮ್ರೇಡ್ ರಾಘವೇಂದ್ರ ಎಮ್.ಜಿ ಅವರು 1947 ರಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವತಂತ್ರವಾದರೂ ಸಹ ಅದು ಜನಸಮಾನ್ಯರಿಗೆ ನೈಜ್ಯವಾದ ಸ್ವಾತಂತ್ರ್ಯ ತಂದು ಕೊಡಲಿಲ್ಲ್ಲ. ಶೋಷಣೆಯಿಂದ ಮುಕ್ತವಾಗಲಿಲ್ಲ. ಬದಲಿಗೆ ಶೋಷಕ ಬಂಡವಾಳಶಾಹಿ ವರ್ಗದ ಆಳ್ವಿಕೆಯು ಸ್ಥಾಪನೆಗೊಂಡು ಇಂದಿನ ಎಲ್ಲಾ ಸಮಸ್ಯೆಗಳಿಗೆ ಇದೇ ಮೂಲ ಕಾರಣವೆಂದು ಹೇಳುತ್ತ, ರಷ್ಯಾದ ಕ್ರಾಂತಿಯಂತೆ ಭಾರತದಲ್ಲಿಯು ಜನರ ವಿಮುಕ್ತಿಗಾಗಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಗಾಗಿ ಬಲಿಷ್ಠ ಜನಾಂದೋಲನ ಸಂಘಟಿಸಬೇಕಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ರಷ್ಯಾ ಕ್ರಾಂತಿಯ ನೇತಾರರಾದ ಕಾಮ್ರೇಡ್ ಲೆನಿನ್, ಕಾಮ್ರೇಡ್ ಸ್ಟಾಲಿನರವರ ಭಾವಚಿತ್ರಕ್ಕೆ ಎಸ್.ಯು.ಸಿ.ಐ (ಸಿ) ಪಕ್ಷದ ಶಹಾಬಾದ ಸ್ಥಳೀಯ ಸಮಿತಿಯ ಕಾರ್ಯದರ್ಶಿಗಳಾದ ಕಾಮ್ರೇಡ್ ಗಣಪತರಾವ ಮಾನೆ ಅವರು ಮಾಲಾರ್ಪಣೆ ಮಾಡಿದರು.

ಈ ಸಭೆಯನ್ನು ಎಸ್.ಯು.ಸಿ.ಐ (ಸಿ) ನಾಯಕರಾದ ಕಾಮ್ರೇಡ್ ಜಗನ್ನಾಥ ಎಸ್.ಎಚ್. ಅವರು ನಿರೂಪಿಸಿದರು. ಪಕ್ಷದ ನಾಯಕರಾದ ಗುಂಡಮ್ಮ ಮಡಿವಾಳ, ರಾಜೇಂದ್ರ ಆತ್ನೂರ್, ಸಿದ್ದು ಚೌದರಿ. ತುಳಜರಾಮ ಎನ್ ಕೆ, ರಮೇಶ ದೇವಕರ. ನೀಲಕಂಠ ಎಮ್ ಹುಲಿ. ತಿಮ್ಮಣ್ಣ ಮಾನೆ. ಶಿವುಕುಮಾರ ಕುಸಾಳೆ, ಮಹಾದೇವಿ ಆತ್ನೂರ, ಅಂಭಿಕಾ ಗುರಜಾಲಕರ್, ರಾಧಿಕಾ ಚೌದರಿ. ಸುಕನ್ಯಾ. ರಘು ಪವಾರ. ಶ್ರೀನಿವಾಸ. ಆನಂದ, ಭಾಬು, ಕಿರಣ ಮಾನೆ, , ಅಜಯ ಗುರಜಾಲಕರ್. ಬಾಬು. ಸುರೇಶ ಸೇರಿ ಹಲವಾರು ಜನ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here