ನವದೆಹಲಿ: ಕೇಂದ್ರ ಮಾಜಿ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ (67) ಅವರು ಹೃದಯಾಘಾತದಿಂದ ಮಂಗಳವಾರ ರಾತ್ರಿ ವಿಧಿವಶರಾಗಿದ್ದಾರೆ.
Sushma Ji’s demise is a personal loss. She will be remembered fondly for everything that she’s done for India. My thoughts are with her family, supporters and admirers in this very unfortunate hour. Om Shanti.
— Narendra Modi (@narendramodi) August 6, 2019
ನಿನ್ನೆ ರಾತ್ರಿ 11:15ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ, ಸದ್ಯ ಸುಷ್ಮಾ ಸ್ವರಾಜ್ರವರ ಪಾರ್ಥಿವ ಶರೀರ ಜನಪತ್ನಲ್ಲಿರುವ ಧವನ್ ದೀಪ್ ಬಿಲ್ಡಿಂಗ್ನಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿದೆ. ಸಮೀಪದಲ್ಲೆ ಇರುವ ಜಂತರ್ಮಂತರ್ನಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
I’m shocked to hear about the demise of Sushma Swaraj Ji, an extraordinary political leader, a gifted orator & an exceptional Parliamentarian, with friendships across party lines.
My condolences to her family in this hour of grief.
May her soul rest in peace.
Om Shanti 🙏
— Rahul Gandhi (@RahulGandhi) August 6, 2019
ಬೆಳಗ್ಗೆ 8 ರಿಂದ 11 ಗಂಟೆಯವರೆಗೂ ಸಾರ್ವಜನಿಕರು ಅಂತಿಮ ದರ್ಶನವನ್ನು ಪಡೆಯಬಹುದು. ಬಳಿಕ ಬಿಜೆಪಿ ರಾಷ್ಟ್ರೀಯ ಕಚೇರಿಗೆ ಅವರ ಪಾರ್ಥಿವ ಶರೀರವನ್ನು, ವಿವಿಧ ರಾಜ್ಯಗಳ ಹಾಗೂ ರಾಷ್ಟ್ರೀಯ ನಾಯಕರು ಅಗಲಿದ ಹಿರಿಯ ನಾಯಕಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
Nation mourns today the loss of one of the strongest leaders & finest spokespersons India has seen. Her work as the MEA has been impeccable & as a politician she inspired many women to enter politics. May her soul rest in peace. #OmShanthi#SushmaSwaraj pic.twitter.com/aAWBCdUl5M
— B.S. Yediyurappa (@BSYBJP) August 6, 2019
ಇದಾದ ಬಳಿಕ ಮಧ್ಯಾಹ್ನ 3 ಗಂಟೆ ಸುಮಾರಿಗೆ ಲೋದಿ ರೋಡ್ನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಸುಷ್ಮಾಸ್ವರಾಜ್ರವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.