ಶಹಾಪುರ: ಕಳೆದ ಒಂದು ವಾರದಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ನಾರಾಯಣಪುರ ಬಸವಸಾಗರ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದ್ದು ಆದ್ದರಿಂದ ನದಿ ತಟದ ಗ್ರಾಮಗಳು ಅಪಾಯದಲ್ಲಿರುವುದರಿಂದ ಈಗಾಗಲೇ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ವತಿಯಿಂದ ಡಂಗೂರು ಸಾರುವುದರ ಮುಖಾಂತರ ಮುನ್ನ ಮುಂಜಾಗೃತಾ ಕ್ರಮವಾಗಿ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಶಹಾಪುರ ತಾಲ್ಲೂಕು ತಹಸೀಲ್ದಾರರ ಸಂಗಮೇಶ್ ಜಿಡಗೆ ತಿಳಿಸಿದರು.
ಕೊಳ್ಳೂರು ಮತ್ತು ಗೌಡೂರು ಗ್ರಾಮಗಳಲ್ಲಿ ಗಂಜಿ ಕೇಂದ್ರಗಳನ್ನು ಕೂಡ ಈಗಾಗಲೇ ಸ್ಥಾಪಿಸಲಾಗಿದೆ ಸಂಬಂಧಪಟ್ಟಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸುವ ನಿಟ್ಟಿನಲ್ಲಿ ನಮ್ಮ ತಾಲೂಕಾಡಳಿತ ಮತ್ತು ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಿದೆ.ಜೊತೆಗೆ ಸಾರಿಗೆ ಸಂಪರ್ಕ ಕೂಡ ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು ಬಂದೋಬಸ್ತ ಸಲುವಾಗಿ ಪೊಲೀಸರು ಕೂಡ ಇಪ್ಪತ್ತ್ನಾಲ್ಕು ಗಂಟೆಗಳ ಕೆಲಸಕ್ಕೆ ನಿಯೋಜಿಸಲಾಗಿದೆ.