ಪ್ರತಿಯೊಬ್ಬರ ಜೀವನಕ್ಕೆ ಸರಿಯಾದ ಮಾರ್ಗ ತೋರುವವನೇ ಗುರು

0
53

ಶಹಾಬಾದ: ಪ್ರತಿಯೊಬ್ಬರ ಜೀವನಕ್ಕೆ ಸರಿಯಾದ ಮಾರ್ಗವನ್ನು ತೋರಿ, ಅಸತ್ಯದಿಂದ ಸತ್ಯದ ಕಡೆಗೆ ಬೆಳಕು ತೋರಿಸುವವನೇ ಗುರು ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ಬುಧವಾರ ಗೋಳಾ(ಕೆ) ಗ್ರಾಮದ ನಿಜಾಮ ಬಜಾರನ ಬೆಂಕಿ ತಾತನ ಮಠದಲ್ಲಿ ಮಂಗಲಸಿಂಗ ತಾತನವರ 33ನೇ ಹುಟ್ಟು ಹಬ್ಬದ ನಿಮಿತ್ತ ಗುರುವಂದನಾ ಹಾಗೂ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಮಂಗಲಸಿಂಗ ತಾತನವರು ತಮ್ಮ ಹುಟ್ಟು ಹಬ್ಬದ ನಿಮಿತ್ತ ಯಾವುದೇ ಆಡಂಬರವಿಲ್ಲದೇ, ಅದ್ದೂರಿ ಕಾರ್ಯಕ್ರಮ ಮಾಡದೇ ತಮ್ಮ ಹುಟ್ಟು ಹಬ್ಬದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸುವ ಮೂಲಕ ಸಮಾಜಮುಖಿ ಮತ್ತು ಜನೋಪಯೋಗಿ ಕಾರ್ಯಕ್ರಮ ಮಾಡುತ್ತಿರುವುದು ನಿಜಕ್ಕೂ ಸಂತೋಷ ತಂದಿದೆ ಎಂದರು.

ಮಠ ಮಂದಿರಗಳಿಂದ ಸಮಾಜದಲ್ಲಿ ಜನರು ನೆಮ್ಮದಿಯ ಜೀವನವನ್ನು ನಡೆಸಬಹುದು. ಇಂದಿನ ಆಧುನಿಕ ಸಮಾಜದಲ್ಲಿ ಪ್ರತಿಯೊಬ್ಬರೂ ಹಲವಾರು ಜಂಜಾಟದಲ್ಲಿ ಜೀವನ ನಡೆಸುತ್ತಾರೆ ಬದುಕಿನ ಜಂಜಾಟ ದೂರವಾಗಬೇಕಾದರೆ ಆಧ್ಯಾತ್ಮಿಕ ಚಿಂತನೆಯ ಅವಶ್ಯಕತೆಯಿದೆ. ಅದನ್ನು ಭೋಧಿಸಲು ಗುರು ಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಧ್ಯಾತ್ಮಿಕ, ಧಾರ್ಮಿಕ ಚಂತನೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಮಠ ಮಂದಿರಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಬೇಕಾಗಿದೆ. ಇಲ್ಲಿಯವರೆಗೆ ಮಂಗಲಸಿಂಗ ಬೆಂಕಿ ತಾತನವರು ಇಲ್ಲಿಯವರೆಗೆ ಯಾವುದು ಕೇಳಿಲ್ಲ.ಮಠಕ್ಕೆ ಏನಾದರೂ ಮಾಡಲು ಶ್ರೀಗಳು ಹೇಳಿದರೆ,ಅದನ್ನು ಮಾಡಲು ಸಿದ್ಧ ಎಂದು ಹೇಳಿದರು.

ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಮಾತನಾಡಿ, ಹುಟ್ಟು ಹಬ್ಬದ ನೆಪದಲ್ಲಿ ಇಂತಹ ಸಾಮಾಜಿಕ ಸೇವೆ ಮಾಡುವ ಮೂಲಕ ಇನ್ನೋಬ್ಬರಿಗೆ ಶ್ರೀ ಮಾದರಿಯಾಗಿದ್ದಾರೆ.ಇಂತಹ ಕಾರ್ಯಗಳು ಮೇಲಿಂದ ಮೇಲೆ ನಡೆಯುತ್ತಿರಬೇಕೆಂದು ಹೇಳಿದರು.

ಬೆಂಕಿ ತಾತನ ಮಠದ ಮಂಗಲಸಿಂಗ ತಾತನವರು ಸಾನಿಧ್ಯ ವಹಿಸಿ ಮಾತನಾಡಿ, ಶಾಸಕರಾದ ಮೇಲೆ ವ್ಯಕ್ತಿಯ ಚಿತ್ರಣ ಬದಲಾಗುತ್ತದೆ.ಆದರೆ ಶಾಸಕ ಬಸವರಾಜ ಮತ್ತಿಮಡು ಮೊದಲು ಹೇಗೆ ಇದ್ದರೋ ಹಾಗೆ ಇದ್ದಾರೆ. ಅವರು ಸರಳ ವ್ಯಕ್ತಿತ್ವದವರು. ಎಲ್ಲರೊಂದಿಗೆ ಬೆರೆಯುವ ನಮ್ಮ ನಿಮ್ಮಂತೆ ಸಾಮನ್ಯ ವ್ಯಕ್ತಿ. ಅವರಿಂದ ಇನ್ನೂ ಅಭಿವೃದ್ಧಿಯ ಕೆಲಸಗಳು ಆಗಲಿ. ಆನರ ಸಮಸ್ಯೆಗಳಿಗೆ ಕಿವಿಗೊಡಲಿ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ ಮರ್ಚಂಟ ಮಾತನಾಡಿದರು.ಉದ್ದಿಮೆದಾರರಾದ ನರೇಂದ್ರ ವರ್ಮಾ,ವಿಶ್ವರಾಧ್ಯ ಬೀರಾಳ, ಮುಖಂಡರಾದ ಶರಣಗೌಡ ಪಾಟೀಲ ಗೋಳಾ(ಕೆ), ನಗರಸಭೆ ಸದಸ್ಯ ರವಿ ರಾಠೋಡ, ನಾಗರಾಜ ಕರಣಿಕ್, ಬಿಜೆಪಿ ಮುಖಂಡ ನಿಂಗಣ್ಣ ಹುಳಗೋಳಕರ್,ಫಜಲ್ ಪಟೇಲ್,ರಾಜೇಶ ಯನಗುಂಟಿಕರ್, ಅಂಬಾರಾಯ ಬೆಳೆಕೋಟೆ,ಭೀಮರಾವ ಸೌಕಾರ, ಕನಕಪ್ಪ ದಂಡಗುಲಕರ್,ಸೂರ್ಯಕಾಂತ ಕೋಬಾಳ,ವಿಜಯಕುಮಾರ ಮಾಣಿಕ್,ನಾಗಣ್ಣ ರಾಂಪೂರೆ ವೇದಿಕೆಯ ಮೇಲಿದ್ದರು.

ಇದೇ ಸಂದರ್ಭದಲ್ಲಿ ಕಲಬುರಗಿಯ ಅಶ್ವಥಾ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಯಿತು. ಬಸವರಾಜ ಮದ್ರಿಕಿ ನಿರೂಪಿಸಿದರು, ರಘವೀರಸಿಂಗ ಠಾಕೂರ ಸ್ವಾಗತಿಸಿದರು, ರಾಜು ಕೋಬಾಳ,ದಶರಥ ಕೋಟನೂರ್ ಪ್ರಾರ್ಥಿಸಿದರು, ಲೋಹಿತ್ ಕಟ್ಟಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here