ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿ

0
58

ಕಲಬುರಗಿ: ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಲೀಟರಗೆ ಎರಡು ರೂಪಾಯಿ ಹೆಚ್ಚಿಸಿರುವುದು ಅಖಿಲ ಭಾರತ ಯುವಜನ ಒಕ್ಕೂಟ ಜಿಲ್ಲಾ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್‌. ಅಟ್ಟೂರ ಖಂಡಿಸಿದ್ದಾರೆ.

ಈಗಾಗಲೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಮನೆಯ ಅಡುಗೆ ವಸ್ತುಗಳ ಬೆಲೆ ಗಗನಕೇರಿದರಿ೦ದ  ಜನ ತತ್ತರಿಸಿದ್ದಾರೆ. ಇಂತಹ ಸಮಯದಲ್ಲಿ ಸರಕಾರ ಹಾಲಿನ ಬೆಲೆಯು ಹೆಚ್ಚಿಸಿ ಜನರ ನೋವಿನ ಮೇಲೆ ಬರೆ ಎಳೆದ೦ತಾಗಿದೆ.

Contact Your\'s Advertisement; 9902492681

ಚುನಾವಣೆ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ನಿರುದ್ಯೋಗಗಳಿಗೆ ಉದ್ಯೋಗ ಸೃಷ್ಟಿ ಮಾಡಿ ಉದ್ಯೋಗ ನೀಡುತ್ತೇವೆಂದ ಮಾತು ಎಲ್ಲಿ ಹೋಯಿತು ? ಸರ್ಕಾರ ಮರೆತು ಬಿಟ್ಟಿತೆ? ಅಥವಾ ಹಲವಾರು ಯುವಕರು ಉದ್ಯೋಗವಿಲ್ಲದೆ ಅಪರಾಧ ಕ್ರಿಯೆಯಲ್ಲಿ ತೊಡಗಿರುವ ಯುವಕರು ಮರೆತುಬಿಟ್ಟರೆ? ಇದು ಗ೦ಭೀರವಾದ ವಿಷಯ ಸರಕಾರ ಮೊದಲು
ಹೆಚ್ಚಿರುವ  ಬೆಲೆ ಕಡಿಮೆ ಮಾಡಿ ಬಡಜನರು ನೆಮ್ಮದಿಯಿಂದ ಬದುಕುವ ಹಾಗೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕಲ್ಯಾಣ ಕನಾ೯ಟಕ ಭಾಗದ ಹೆಸರು ಬದಲಾವಣೆ ಆಯಿತು. ಆದರೆ ಅಭಿವೃದ್ಧಿಯಲ್ಲಿ  ಬದಲಾವಣೆ ಆಗಲೇ ಇಲ್ಲ. ಈ ಭಾಗದ ಹಲವು ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುವ ಮೂಲಕ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿದ್ದಾರೆ.

ಹೈದರಾಬಾದ ಕನಾ೯ಟಕ ಪ್ರದೇಶದ ಅಭಿವೃದ್ಧಿಗಾಗಿ 371 (ಜೆ)ಕಲಮ್ ಸಮಪ೯ಕವಾಗಿ ಜಾರಿಗೊಳಿಸಿ ಈ ಭಾಗಕ್ಕೆ ನ್ಯಾಯ ದೊರಕಿಸಿಕೊಡಬೇಕೆ೦ದು  ಪತ್ರಿಕಾ ಪ್ರಕಟಣೆ  ಮೂಲಕ ಒತ್ತಾಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here