ನೀರಾವರಿ ಕಾಲುವೆ ಒತ್ತುವರಿ ತಡೆಯಲು ಸೇನೆ ಒತ್ತಾಯ

0
17

ಸುರಪುರ: ತಾಲೂಕಿನ ಟಿ.ಬೊಮ್ಮನಹಳ್ಳಿಯಿಂದ ಲಿಂಗದಹಳ್ಳಿ ವರೆಗಿನ ನೀರು ಹರಿಯುವ ಕಾಲುವೆ ಒತ್ತುವರಿಯಾಗಿದ್ದು ಇದನ್ನು ತಡೆಯುವಂತೆ ಜಯ ಕರ್ನಾಟಕ ರಕ್ಷಣಾ ಸೇನೆ ಮುಖಂಡರು ಒತ್ತಾಯಿಸಿದರು.

ನಗರದ ಹಸನಾಪುರ ಕ್ಯಾಂಪ್‍ಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮದ ಓ,ಎಮ್ ವಿಭಾಗ ಸಂಖ್ಯೆ 10 ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಮಾತನಾಡಿದ ಮುಖಂಡರು,ಟಿ.ಬೊಮ್ಮನಹಳ್ಳಿ ಗ್ರಾಮದಿಂದ ಸಿದ್ದಾಪುರ,ಹಸನಾಪುರ ಕೆ.ಇ.ಬಿ ಹಿಂಬದಿಯಿಂದ ವಣಕಿಹಾಳ ಮಾರ್ಗವಾಗಿ ಲಿಂಗದಹಳ್ಳಿಗೆ ತಲಪುವ ಲ್ಯಾಟ್ರಲ್ ಸಂಖ್ಯೆ 12ರ ಕಾಲುವೆಯನ್ನು ಅನೇಕ ಕಡೆಗಳಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದೆ,ಇದರಿಂದ ಕಾಲುವೆಯ ಕೊನೆ ಭಾಗದ ರೈತರಿಗೆ ನೀರು ಬಾರದೆ ಇರುವುದರಿಂದ ಈಗ ರೈತರು ತೀವ್ರ ತೊಂದರೆಪಡುವಂತಾಗಿದೆ,ಆದ್ದರಿಂದ ಕೂಡಲೇ ಕಾಲುವೆ ಒತ್ತುವರಿ ಮಾಡಿದವರ ಮೇಲ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಸಂಘಟನೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ನಂತರ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಮಲ್ಲು ನಾಯಕ ಕಬಾಡಗೇರ,ಮುಖಂಡರಾದ ಶರಣು ಬೈರಿಮರಡಿ,ಹೊನ್ನಪ್ಪ ಬೈರಿಮರಡಿ,ರವಿ ನಾಯಕ ಬಿಚ್ಚಗತ್ತಿಕೇರಿ,ರಾಘು ಕಟ್ಟಿಮನಿ,ರಾಘು ಗೋಗಿಕೇರಾ,ಶಿವರಾಜ ವಗ್ಗರ ದೀವಳಗುಡ್ಡ,ತಿಪ್ಪಣ್ಣ ಖಾನಿಕೇರಿ,ರಾಮಚಂದ್ರಕಟ್ಟಿಮನಿ ದೇವರಗೋನಾಲ,ಅಶೋಕ ನಾಯಕ ಬೈರಿಮರಡಿ,ತಿಪ್ಪಣ್ಣ ಪೊಲೀಸ್ ಪಾಟೀಲ್,ವೆಂಕಟೇಶ ಗುಡ್ಡಕಾಯಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here