ಕಲಬುರಗಿಗೆ ಡಿ. 2 ರಂದು ಎಚ್.ಡಿ ದೇವೇಗೌಡ | 8ಕ್ಕೆ ಕುಮಾರಸ್ವಾಮಿ ಆಗಮನ

0
301

ಕಲಬುರಗಿ : ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷದ ಕಚೇರಿಯಲ್ಲಿ ಹಮ್ಮಿಕೋಂಡ ಪೂರ್ವ ಭಾವಿ ಸಭೆಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಬಂಡೆಪ್ಪ ಕಾಶಂಪೂರ ಅವರು ಮಾತನಾಡಿದರು.

ಅವರು ಪಕ್ಷದ ಜಿಲ್ಲಾ ಮುಖಂಡರ ಜೊತೆ ಮಾತನಾಡುತ್ತಾ ಡಿಸೆಂಬರ್. 2 ರಂದು ಮಾಜಿ ಪ್ರಧಾನ ಮಂತ್ರಿಗಳಾದ ಎಚ್ ಡಿ ದೇವೇಗೌಡ ಅವರು ಆಳಂದ ಮತಕ್ಷೇತ್ರಕ್ಕೆ ಪಕ್ಷ ಸಂಘಟಿಸಲು ಆಗಮಿಸಲಿದ್ದಾರೆ. ಹಾಗೂ 8 ರಂದು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಅಫಜಲಪೂರ್ ಮತಕ್ಷೇತ್ರಕ್ಕೆ ಪಕ್ಷ ಸಂಘಟಿಸಲು ಆಗಮಿಸಲಿದ್ದಾರೆ. ಆದ ಕಾರಣ ಜಿಲ್ಲಾ ಹಿರಿಯ ಮುಖಂಡರುಗಳು ಹಾಗೂ ಪಕ್ಷದ ಎಲ್ಲಾ ಮತಕ್ಷೇತ್ರದ ಅಭ್ಯರ್ಥಿಗಳು ಆಕಾಂಕ್ಷಿಗಳು ಮಹಾನಗರ ಪಾಲಿಕೆಯ ಹಾಜಿ ಮತ್ತು ಮಾಜಿ ಸದಸ್ಯರುಗಳು ಪಕ್ಷದ ವತಿಯಿಂದ ಎಲ್ಲಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು ಹಾಗೂ ಮಹಿಳಾ ಮುಖಂಡರುಗಳು ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಬಂದು ಈ ಎರಡು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿ ಸಭೆಯಲ್ಲಿ ಹೇಳಿದರು.

Contact Your\'s Advertisement; 9902492681

2023ರ ವಿಧಾನಸಭೆಯ ಚುನಾವಣೆಯಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ಆಯ್ಕೆ ಮಾಡಲು ಪಕ್ಷದ ಪದಾಧಿಕಾರಿಗಳು ಹಿರಿಯ ಮುಖಂಡರು, ಕಾರ್ಯಕರ್ತರುಗಳು, ಹೆಚ್ಚಿನ ಶ್ರಮವಹಿಸಿ ಪಕ್ಷವನ್ನು ಗೆಲ್ಲಿಸಬೇಕಾಗಿ ಜಿಲ್ಲಾ ಉಸ್ತುವಾರಿಗಳಾದ ಮಹಾಂತೇಶ್ ಪಾಟೀಲ ಹಾಗೂ ಐಲಿನ್ ಜಾನ್ ರವರು ಪಕ್ಷದ ಕಾರ್ಯಕರ್ತರಿಗೆ ಹುರಿದುಂಬಿಸಿದರು.ಜಿಲ್ಲಾ ಪದಾಧಿಕಾರಿಗಳು ಹಾಗೂ ಜಿಲ್ಲಾ ವಿವಿಧ ಘಟಕಗಳ ಅಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಜಿಲ್ಲಾ ಪದಾಧಿಕಾರಿಗಳಿಗೆ ಹಾಗೂ ಜಿಲ್ಲಾ ವಿವಿಧ ಘಟಕಗಳ ಅಧ್ಯಕ್ಷರುಗಳಿಗೆ ನೇಮಕಾತಿ ಆದೇಶ ಪತ್ರವನ್ನು ಜೆ. ಡಿ. ಎಸ್. ಪಕ್ಷದ ರಾಜ್ಯ ಉಪಾಧ್ಯಕ್ಷರು ಹಾಗೂ ಪಕ್ಷದ ಜಿಲ್ಲಾ ಉಸ್ತುವಾರಿಗಳಾದ ಮಹಾಂತೇಶ ಪಾಟೀಲ್, ಐಲಿನ್ ಜಾನ್ ಮಠಪತಿ, ಪಕ್ಷದ ಜಿಲ್ಲಾ ಅಧ್ಯಕ್ಷ ಸುರೇಶ ಮಾಹಾಗಾಂವಕರ, ಪಕ್ಷದ ಹಿರಿಯ ಮುಖಂಡರಾದ ಅಶೋಕ ಗುತ್ತೇದಾರ್, ಬೀದರ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ, ಇಂಡಿ ಮತಕ್ಷೇತ್ರದ ಬಿಡಿ ಪಾಟೀಲ, ಶಿವಾನಂದ್ ಪಾಟೀಲ್ ಸಿಂದಗಿ, ಸೇಡಂ ವಿಧಾನಸಭಾ ಮತಕ್ಷೇತ್ರದ ಪಕ್ಷದ ಅಭ್ಯರ್ಥಿ ಬಾಲರಾಜ್ ಗುತ್ತೇದಾರ, ಅಫಜಲಪೂರ ಮತಕ್ಷೇತ್ರದ ಅಭ್ಯರ್ಥಿ ಶಿವಕುಮಾರ್ ನಾಟೇಕರ್, ಆಳಂದ ಮತಕ್ಷೇತ್ರದ ಅಭ್ಯರ್ಥಿ ಮಹೇಶ್ವರಿ ವಾಲಿ, ಚಿಂಚೋಳಿ ಮತಕ್ಷೇತ್ರದ ಅಭ್ಯರ್ಥಿ ಸಂಜೀವನ್ ಯಾಕಾಪುರ್, ಕಲಬುರಗಿ ದಕ್ಷಿಣ ಮತಕ್ಷೇತ್ರದ ಆಕಾಂಕ್ಷಿ ಕೃಷ್ಣಾರೆಡ್ಡಿ, ಜೇವರ್ಗಿ ಮತಕ್ಷೇತ್ರದ ಕೇದಾರಲಿಂಗಯ್ಯ ಹಿರೇಮಠ್, ಪಕ್ಷದ ಜಿಲ್ಲಾ ಪದಾಧಿಕಾರಿಗಳಿಗೆ, ಹಾಗೂ ಪಕ್ಷದ ವಿವಿಧ ಘಟಕಗಳ ಅಧಕ್ಷ್ಯರುಗಳಿಗೆ ನೇಮಕಾತಿ ಆದೇಶ ಪತ್ರ ನೀಡಿ ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here