ಕಲಬುರಗಿ ವಿಶ್ವ ವಿಕಲಚೇತನರ ಕ್ರೀಡಾಕೂಟ | ವಿಜೇತರ ವಿವರ

0
19

ಕಲಬುರಗಿ: ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಮತ್ತು ಯುವ ಕ್ರೀಡಾ ಮತ್ತು ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ಶುಕ್ರವಾರ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಆಯೋಜಿಸಲಾದ 2022-23ನೇ ಸಾಲಿನ ವಿಕಲಚೇತನರ ಕ್ರೀಡಾಕೂಟದಲ್ಲಿ ವಿಜೇತರಾದ ಸ್ಪರ್ಧಿಗಳ ವಿವರ ಹೀಗಿದೆ.

ಪುರುಷ ದೈಹಿಕ ವಿಕಲಚೇತನರ 18 ವರ್ಷ ಮೇಲ್ಪಟ್ಟ 100 ಮೀ. ಓಟದಲ್ಲಿ ಅನೀಲ ಶಂಕರ ರಾಠೋಡ ಪ್ರಥಮ, ಗುರುದೇವ ಎಸ್. ಪಾಟೀಲ ದ್ವಿತೀಯ ಹಾಗೂ ದಯಾನಂದ ಶರಣಪ್ಪ ತೃತೀಯ ಸ್ಥಾನ ಪಡೆದಿದ್ದಾರೆ. ಪುರುಷ ಬಗಲಬಡಿಗೆಯೊಂದಿಗೆ 18 ವರ್ಷ ಮೇಲ್ಪಟ್ಟ 100 ಮೀ. ಓಟದಲ್ಲಿ ಸೋಮಶೇಖರ ಶಿವಪ್ಪ ಮೊದಲನೇ ಸ್ಥಾನ ಪಡೆದರೆ ಹಣಮಂತಪ್ಪ ರಾಚಪ್ಪ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಮಹಿಳೆ ದೈಹಿಕ ವಿಕಲಚೇತನರು 18 ವರ್ಷ ಮೇಲ್ಪಟ್ಟ 100 ಮೀ. ಓಟದಲ್ಲಿ ಮಲ್ಲಮ್ಮ ಕಂಠಪ್ಪ ಮೊದಲನೇ ಸ್ಥಾನ ಮತ್ತು ಸವಿತಾ ಮಾಪಣ್ಣ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾಲಕರ ಶ್ರವಣದೋಷವುಳ್ಳ 18 ವರ್ಷ ಒಳಗಿನ 100 ಮೀ. ಓಟದಲ್ಲಿ ಅಭಿಶೇಕ್ ಪ್ರಥಮ ಸ್ಥಾನ, ನಿಸಾರ ಅಹ್ಮದ ದ್ವಿತೀಯ ಸ್ಥಾನ ಹಾಗೂ ಸಂದೀಪ ತೃತೀಯ ಸ್ಥಾನ ಪಡೆದಿದ್ದಾರೆ.

Contact Your\'s Advertisement; 9902492681

ಪುರುಷ ದೈಹಿಕ ವಿಕಲಚೇತನ 18 ವರ್ಷ ಮೇಲ್ಪಟ್ಟ ಶಾಟ್ ಪುಟ್ ಸ್ಪರ್ಧೇಯಲ್ಲಿ ವೆಂಕಟಪ್ಪ ಪ್ರಥಮ, ಆಯ್ಯುಬ್ ದ್ವಿತೀಯ, ಗುರುದೇವ ಪಾಟೀಲ ತೃತೀಯ ಸ್ಥಾನ ಪಡೆದುಕೊಂಡರು. ಪುರುಷರ ಬಗಲಬಡಿಗೆಯೊಂದಿಗೆ ಲಾಂಗ್ ಜಂಪ್ ಸ್ಪರ್ಧೇಯಲ್ಲಿ ಹಣಮಂತ ಪ್ರಥಮ ಸ್ಥಾನ ಪಡೆದರು.

ಪುರುಷ 18 ವರ್ಷ ಮೇಲ್ಪಟ್ಟ ಅಂಧರ ಶಾಟ್ ಪುಟ್ ಸ್ಪರ್ಧೇಯಲ್ಲಿ ಖಂಡೆಪ್ಪ ಪ್ರಥಮ, ಶ್ರೀಕಾಂತ ದ್ವಿತೀಯ, ಎಸ್.ಜಗದೀಶ ನಾಯ್ದ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಪುರುಷ ಅಂಧರು 18 ವರ್ಷ ಮೇಲ್ಪಟ್ಟ 50 ಮೀ. ಓಟದಲ್ಲಿ ಎಸ್.ಜಗದೀಶ ನಾಯ್ಕ್, ಪ್ರಥಮ ಸ್ಥಾನ, ಶ್ರೀಕಾಂತ ಹಂಗರಗಿ ದ್ವಿತೀಯ ಹಾಗೂ ಫಾಳೆಪ್ಪ ಸಲಗಾರ ತೃತೀಯ ಸ್ಥಾನ, ಅದೇ ರೀತಿಯಾಗಿ 18 ವರ್ಷದೊಳಗಿನ ಸ್ಪರ್ಧೇಯಲ್ಲಿ ಭಾಗಣ್ಣ, ಶರಣಬಸಪ್ಪ ಹಾಗೂ ಪ್ರಶಾಂತ ಪಲ್ಯದ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಅಂಧ ಬಾಲಕೀಯರ 18 ವರ್ಷದೊಳಗಿನ 100 ಮೀ. ಓಟದಲ್ಲಿ ಫರಾನ್, ಪ್ರಥಮ, ಪ್ರಿಯಾಂಕಾ ವಿಠ್ಠಲ್ ದ್ವಿತೀಯ, ಜಯಶ್ರೀ ಲಕ್ಷಣ ತೃತೀಯ ಸ್ಥಾನ ಹಂಚಿಕೊಂಡರು. ಪುರುಷ ಶ್ರವಣ ದೋಷವುಳ್ಳ 18 ವರ್ಷ ಮೇಲ್ಪಟ್ಟ 100 ಮೀ. ಓಟದಲ್ಲಿ ಮಲ್ಲಿಕಾರ್ಜುನ ಸುರಪುರ ಪ್ರಥಮ, ಶಿವಶಂಕರ ಗುತ್ತೇದಾರ ದ್ವಿತೀಯ ಹಾಗೂ ಶಶಿಕಾಂತ ರಸ್ತಾಪೂರ ತೃತೀಯ ಸ್ಥಾನ ಪಡೆದಿದ್ದಾರೆ.

ಪುರುಷ ಶ್ರವಣ ದೋಷವುಳ್ಳ 18 ವರ್ಷ ಮೇಲ್ಪಟ್ಟ ಲಾಂಗ್ ಜಂಪ್‍ನಲ್ಲಿ ಮಲ್ಲಿಕಾರ್ಜುನ ಸುರಪುರ, ಶರಣಗೌಡ ಬಿರಾದಾರ ಹಾಗೂ ಪರವೀನ ಸದ್ದಾಮ ಅವರು ಕ್ರಮವಾಗಿ ಅಗ್ರ ಮೂರು ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ಪುರುಷ ಶ್ರವಣ ದೋಷವುಳ್ಳ 18 ವರ್ಷ ಮೇಲ್ಪಟ್ಟ ಶಾಟ್ ಪುಟ್‍ನಲ್ಲಿ ಧನಂಜಯ ಉದನೂರ ಪ್ರಥಮ, ಸೈಯದ್ ಅಫ್ರೋಜ್ ದ್ವಿತೀಯ, ಮುಷ್ತಾಕ ಅಹ್ಮದ್ ತೃತೀಯ ಸ್ಥಾನ ಹಂಚಿಕೊಂಡರು.
ಪುರುಷ ದೈಹಿಕ ವಿಕಲಚೇತನರ 18 ವರ್ಷ ಮೇಲ್ಪಟ್ಟ ಕ್ರೀಕೆಟ್ ಆಟದಲ್ಲಿ ಕಲಬುರಗಿ ಜಿಲ್ಲೆಯ ಎಂ.ಆರ್.ಡಬ್ಲ್ಯೂ/ವಿ.ಆರ್.ಡಬ್ಲ್ಯೂ ತಂಡ ಪ್ರಥಮ ಸ್ಥಾನ ಪಡೆದರೆ ಚಿತ್ತಾಪೂರಿನ ಎಂ.ಆರ್.ಡಬ್ಲ್ಯೂ/ವಿ.ಆರ್.ಡಬ್ಲ್ಯೂ ತಂಡ ಎರಡನೇ ಸ್ಥಾನ ಪಡೆದಿದೆ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here