ಕಾಲೇಜು ವಿದ್ಯಾರ್ಥಿಗಳನ್ನು ಮತದಾನ ಪಟ್ಟಿಗೆ ಸೇರಿಸಲು ಮುಂದಾಗಿ

0
57

ಶಹಾಬಾದ:ನಗರದ ಸರಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು (18 ವರ್ಷ ಪೂರೈಸುವವರು) ಮತದಾರರ ಪಟ್ಟಿಗೆ ನೊಂದಾಯಿಸಲು ಸೂಕ್ತ ಅವಕಾಶವಿದ್ದು ಅದರ ಸಂಪೂರ್ಣ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲರು ಮಕ್ಕಳಿಗೆ ತಿಳಿಹೇಳಬೇಕೆಂದು ಉಪತಹಸೀಲ್ದಾರ ಮಲ್ಲಿಕಾರ್ಜುನರೆಡ್ಡಿ ಹೇಳಿದರು.

ಅವರು ಬುಧವಾರ ನಗರದ ವಿವಿಧ ಕಾಲೇಜುಗಳಿಗೆ ಬೇಟಿ ನೀಡಿ ಮದತಾರರ ಪಟ್ಟಿಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಲು ಯುವ ಮತದಾರರ ನೊಂದಣಿ ಅಗತ್ಯ ಅಭಿಯಾನ ಕೈಗೊಂಡು ಮಾತನಾಡಿದರು.

Contact Your\'s Advertisement; 9902492681

18 ವರ್ಷ ಪೂರೈಸುವವರ ವಿದ್ಯಾಥಿಗಳ ದಾಖಲೆಗಳನ್ನು ಒದಗಿಸಿದರೇ ನಮ್ಮ ಇಲಾಖೆ ವತಿಯಿಂದ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು.ಅಲ್ಲದೇ ವಿದ್ಯಾರ್ಥಿಗಳಿಗೆ ಅವರವರ ಮೊಬೈಲಿನಲ್ಲಿ ವೋಟರ್ ಹೆಲ್ತ್‍ಲೈನ್ ಅಪ್ ಅಪ್‍ಲೋಡ್ ಮಾಡಿಸಿ ವಿದ್ಯಾರ್ಥಿಗಳ ಹೆಸರನ್ನು ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಬಹುದು. ಭಾರತದ ಪ್ರಜಾಪ್ರಭುತ್ವ ಸದೃಢಗೊಳಿಸಲು ಪ್ರತಿಯೊಬ್ಬ ಯುವಕರು ಮತದಾನ ಮಾಡಿ ಒಳ್ಳೆ ಸರ್ಕಾರವನ್ನು ನಿರ್ಮಿಸುವದು ನಮ್ಮೆಲ್ಲರ ಕರ್ತವವಾಗಿದೆ.ಅದಕ್ಕಾಗಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಇದಕ್ಕೆ ಸಹಕಾರ ನೀಡಬೇಕೆಂದು ತಿಳಿಸಿದರು.

ಸಿಎ ಇಂಗಿನಶೆಟ್ಟಿ ಕಾಲೇಜಿನ ಪ್ರಾಂಶುಪಾಲ ರಾಜಗೋಪಾಲ ಜೂಜಾರೆ ಮಾತನಾಡಿ, ಮೊಬೈಲಿನಲ್ಲಿ ವೋಟರ್ ಹೆಲ್ತ್‍ಲೈನ್ ಅಪ್‍ಲೋಡ್ ಮಾಡಿಸಿ ನೊಂದಣಿ ಮಾಡಲು ಹೋದರೆ ಸರ್ವರ್ ಸಮಸ್ಯೆ ಆಗುತ್ತಿದೆ.ಆದ್ದರಿಂದ ಸರಳ ಉಪಾಯ ಇದ್ದರೇ ತಿಳಿಸಿ ಎಂದರು. ಯಾವುದೇ ತೊಂದರೆ ಅನುಭವಿಸುವ ಅಗತ್ಯವಿಲ್ಲ. ವಿದ್ಯಾರ್ಥಿಗಳ ದಾಖಲೆಗಳನ್ನು ನೀಡಿದರೇ ನಮ್ಮ ಸಿಬ್ಬಂದಿಗಳು ಕಾಲೇಜಿಗೆ ಬಂದು ನೊಂದಣಿ ಮಾಡಿಸಿ ಕೊಡುತ್ತಾರೆ ಎಂದು ಹೇಳಿದರು. ಶಿರಸ್ತೆದಾರ ಸಯ್ಯದ್ ಹಾಜಿಸಾಬ, ಶರಣು, ಗಂಗಾಧರ ವಾಗ್ಮೋರೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here