ಬಯಲು ಗ್ರಂಥಾಲಯದ 22 ನೇ ವಾರ್ಷಿ ಕೋತ್ಸವ

0
136

ಓದು ಮನುಷ್ಯರನ್ನು ಪರಿವರ್ತಿಸುತ್ತದೆ. ಮೊಬೈಲ್ ವ್ಯಕ್ತಿಯ ತಲೆ ತಗ್ಗಿಸುವಂತೆ ಮಾಡಿದರೆ. ಪುಸ್ತಕಗಳು, ಪತ್ರಿಕೆಗಳು ಒದುವುದರಿಂದ ತಲೆ ಎತ್ತಿ ನಿಲ್ಲುವಂತೆ ಮಾಡುತ್ತವೆ. ವಿದ್ಯಾರ್ಥಿಗಳು, ಯುವಕರು ಮೊಬೈಲ್ ಬಳಸಿ ತಲೆ ತಗ್ಗಿಸುವಂತಾಗದೆ, ಪುಸ್ತಕ ಓದಿ ತಲೆ ಎತ್ತಿ ಓಡಾಡುವಂತಾಗಬೇಕು. – ಬಾಬುರಾವ ಯಡ್ರಾಮಿ, ಅಧ್ಯಕ್ಷರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ.

ಕಲಬುರಗಿ: ಬಯಲು ಪ್ರದೇಶದಿಂದ ಜ್ಞಾನ ಸಿಂಚನ ಚಿಮ್ಮಲಿ. ಆ ಜ್ಞಾನದ ಬೆಳಕು ಸಮಾಜವನ್ನು ಬೆಳಗುವಂತಾಗಲಿ ಎಂದು ರಾಜ್ಯ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಿ.ಎಸ್.ದೇಸಾಯಿ ಆಶಯ ವ್ಯಕ್ತಪಡಿಸಿದರು.

Contact Your\'s Advertisement; 9902492681

ನಗರದ ಸಾರ್ವಜನಿಕ ಉದ್ಯಾನವನ ಗೋಲ್ ಬಂಗ್ಲಾದಲ್ಲಿ ಶನಿವಾರ ಆಯೋಜಿಸಿದ್ದ ಬಯಲು ಗ್ರಂಥಾಲಯದ 22ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ‌ ಸುಧಾರಣೆಯ ಸುಂದರ ಕನಸಿನೊಂದಿಗೆ ಹಿರಿಯ ಪತ್ರಕರ್ತ ಸುಭಾಷ್ ಬಣಗಾರ ಅವರು ಆರಂಭಿಸಿದ ಬಯಲು ಗ್ರಂಥಾಲಯ ಸಾಮಾನ್ಯ ಜನರಿಗೆ ಉತ್ತಮ‌ ಜ್ಞಾನ ನೀಡುತ್ತಿರುವುದು, ಈ ಬಯಲು ಗ್ರಂಥಾಲಯದಲ್ಲಿ ಓದಿ‌ ಅನೇಕರು ಉತ್ತಮ‌ ಜ್ಞಾನ ಪಡೆದುಕೊಂಡು ಉನ್ನತ ಹುದ್ದೆಯನ್ನು ಅಲಂಕರಿಸಿರುವುದ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಯಾಗಿ‌ ಪಾಲ್ಗೊಂಡಿದ್ದ ಸರ್ವಜ್ಞ‌ ಶಿಕ್ಷಣ ಸಂಸ್ಥೆಗಳ ಸಮೂಹದ ಸಂಸ್ಥಾಪಕ ಪ್ರೊ. ಚನ್ನಾರೆಡ್ಡಿ ಪಾಟೀಲ್ ಮಾತನಾಡಿ, ಪುಸ್ತಕ ನಡೆದಾಡುವ ಶಿಕ್ಷಕ ಇದ್ದಂತೆ. ಮನುಷ್ಯನಿಗೆ ಓದು ಮತ್ತು ಯೋಗ ಅತ್ಯಗತ್ಯ. ಯೋಗದಿಂದ ಶರೀರ ಸಧೃಡವಾದರೆ, ಓದಿನಿಂದ ಬುದ್ಧಿ ಚುರುಕಾಗುತ್ತದೆ. ಮೊಬೈಲ್ ಬಳಕೆ ಕಡಿಮೆಯಾಗಿ ಓದುವ ಹವ್ಯಾಸ ಬೆಳೆಯಬೇಕು. ಓದುವ ಅಭಿರುಚಿ ಬೆಳೆಸುವ ಕಾರ್ಯ ಸುಭಾಷ್ ಬಣಗಾರ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ಮೊಬೈಲ್ ಬಳಕೆ ಮಾಡುವುದು ಕಡಿಮೆಯಾಬೇಕು. ಓದುವ ಜ್ಞಾನ ಹೆಚ್ಚಿಸಬೇಕು. ಓದುವ ಹವ್ಯಾಸ ಹೆಚ್ಚಿಸುವ ಹಿನ್ನೆಲೆಯಲ್ಲಿ ಕರುಣೇಶ್ವರ ನಗರದಲ್ಲಿ ಬಯಲು ಗ್ರಂಥಾಲಯವನ್ನು ಶೀಘ್ರವಾಗಿ ಸ್ಥಾಪಿಸಿ ಅಗತ್ಯವಿರುವ ಪುಸ್ತಕಗಳನ್ನು ಕೊಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಯಾರು ಪುಸ್ತಕವನ್ನು ಓದುತ್ತಾರೋ ಅವರಲ್ಲಿ ಜ್ಞಾನ ವೃದ್ದಿಸುತ್ತದೆ. ಉತ್ತಮ‌ ಬದುಕು ಕಟ್ಟಿಕೊಡುವ ಶಕ್ತಿ ಪುಸ್ತಕದಲ್ಲಿದೆ ಎಂದರು.

ಓದುವ ಹವ್ಯಾಸ ಹೆಚ್ಚಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೂಡಾ ಕಾರ್ಯೊನ್ಮುಖವಾಗಿದೆ. ಅಗತ್ಯ ಇರುವ ಕಡೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ದೇವಸ್ಥಾನ ಇಲ್ಲವೆ ಪಾರ್ಕ್ ಗಳಲ್ಲಿ ಬಯಲು ಗ್ರಂಥಾಲಯ ಆರಂಭಿಸಲು ಉದ್ದೇಶ ಹೊಂದಲಾಗಿದೆ ಎಂದರು.

ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಬಯಲು ಗ್ರಂಥಾಲಯದ ಸಂಸ್ಥಾಪಕ, ಹಿರಿಯ ಪತ್ರಕರ್ತ ಸುಭಾಷ್ ಬಣಗಾರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಪ್ರಮುಖರಾದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಎಂ.ಎಸ್. ಪಾಟೀಲ್ ನರಬೋಳಿ, ದಿನಕರರಾವ ಕುಲಕರ್ಣಿ ಅಷ್ಟಗಿ, ಚನ್ನಪ್ಪ ಸುರ್ಮಿ, ಪ್ರಭಾಕರ ಸಿಂಪಿ, ಸಂದೀಪ್ ಬೈರಾಮಡಗಿ, ರವಿಕುಮಾರ್ ಬಣಗಾರ, ಸೋಮಶೇಖರ್ ಬಣಗಾರ, ವಿನೋದ ದೇಸಾಯಿ, ಚಂದ್ರಶೇಖರ ಮ್ಯಾಳಗಿ,‌ ರಾಜು ಕೊಸ್ಟಗಿ, ಪತ್ರಕರ್ತ ಭೀಮಾಶಂಕರ ಫಿರೋಜಾಬಾದ, ಇತರರು ಪಾಲ್ಗೊಂಡಿದ್ದರು.

ಹಿರಿಯ ವರದಿಗಾರರೂ ಆಗಿರುವ ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯ ಹಣಮಂತರಾವ ಭೈರಾಮಡಗಿ ಹಾಗೂ ರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ ಕೌನ್ಸಿಲ್ ಸದಸ್ಯರಾಗಿ ನೇಮಕಗೊಂಡಿರುವ ರಾಜಕುಮಾರ ಉದನೂರ ಅವರನ್ನು ಬಯಲು ಗ್ರಂಥಾಲಯದ ಪರವಾಗಿ ಸನ್ಮಾನಿಸಲಾಯಿತು.

ಕಸಾಪ ದಕ್ಷಿಣ ವಲಯದ ಅಧ್ಯಕ್ಷ ಶಾಮಸುಂದರ ಕುಲಕರ್ಣಿ ವಂದಿಸಿದರು.

ಓದುವುದಕ್ಕೆ ಸಮಯ‌ ಮೀಸಲಿಡಿ: ಎಲ್ಲ ಶಾಲಾ ಕಾಲೇಜುಗಳಲ್ಲಿ ಪತ್ರಿಕೆ, ಪುಸ್ತಕ ಓದುವುದಕ್ಕಾಗಿಯೇ ಒಂದು ಕ್ಲಾಸ್ ಮೀಸಲಿಡಬೇಕು ಎಂದು ಹಿರಿಯ ಪತ್ರಕರ್ತರೂ ಆಗಿರುವ ಬಯಲು ಗ್ರಂಥಾಲಯದ ರೂವಾರಿ ಸುಭಾಷ ಬಣಗಾರ ಸರ್ಕಾರಕ್ಕೆ ಆಗ್ರಹಿಸಿದರು.

ಯೋಗ ಮತ್ತು ಕ್ರೀಡೆಗೆ ಒತ್ತು ನೀಡುವಂತೆ ಪ್ರತಿದಿನ ಓದಿಗೂ ಒಂದು‌ ಸಮಯ ನಿಗದಿ ಪಡಿಸಬೇಕು ಎಂದು ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here