ಹಬ್ಬವನ್ನು ಸಂಭ್ರಮದಿಂದ ಆಚರಿಸಿ : ಅಹಿತಕರ ಘಟನೆಗಳಿಗೆ ಅವಕಾಶ ನೀಡಬೇಡಿ

0
93

ಸುರಪುರ: ಹಬ್ಬಗಳು ಯುದ್ಧವಲ್ಲ, ಹಬ್ಬಗಳನ್ನು ಸಂಭ್ರಮ ಸಡಗರಗಳಿಂದ ಆಚರಿಸಿ ಸಂತೋಷಪಡಬೇಕು ನಮ್ಮ ದೇಶ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ, ನಮ್ಮ ದೇಶದಲ್ಲಿ ಹಲವಾರು ಧರ್ಮಗಳ ಜನರು ವಿವಿಧ ಹಬ್ಬಗಳನ್ನು ಆಚರಿಸುತ್ತಾರೆ ಆದರೆ ಇಂತಹ ಹಬ್ಬಗಳ ಆಚರಣೆಯಲ್ಲಿ ಕೆಲವರು ಸಮಾಜ ಘಾತುಕ ವ್ಯಕ್ತಿಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಲು ಯತ್ನಿಸುತ್ತಾರೆ ಇಂತಹ ಕೃತ್ಯಗಳಿ ಯಾರೂ ಅವಕಾಶ ನೀಡಬಾರದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೋನಾವಣೆ ಹೃಷಿಕೇಶ ಬಾಗವಾನ ಹೇಳಿದರು.

ಅವರು ಮಂಗಳವಾರದಂದು ನಗರದ ಪೋಲಿಸ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಏರ್ಪಡಿಸಿದ್ದ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಾಗರಿಕರ ಸಹಕಾರ ತುಂಬಾ ಅವಶ್ಯವಾಗಿದ್ದು ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ತಡೆಗಟ್ಟಲು ಪೋಲಿಸ್ ಇಲಾಖೆಗೆ ಮಾಹಿತಿ ಕೊಡಿ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು,

Contact Your\'s Advertisement; 9902492681

ಪ್ರಾಸ್ತಾವಿಕವಾಗಿ ಮಾತನಾಡಿದ ಸಿ.ಪಿ.ಐ ಆನಂದರಾವ ಮಾತನಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಶಾಂತಿ ಕಾಪಾಡಿಕೊಂಡು ಹೋಗಲು ನಾಗರಿಕರ ಸಹಕಾರ ತುಂಬಾ ಅವಶ್ಯ ಎಂದು ಹೇಳಿದರು.

ಮುಖಂಡರಾದ ಅರ್ಷದ್ ದಖನಿ, ವೆಂಕೋಬ ದೊರೆ, ಎಕ್ಬಾಲ್ ಒಂಟಿ, ಚಂದ್ರಶೇಖರ ಹಸನಾಪುರ ಸಭೆಯಲ್ಲಿ ಮಾತನಾಡಿದರು, ಡಿವೈಎಸ್‌ಪಿ ಶಿವನಗೌಡ ಪಾಟೀಲ್, ಪ್ರಮುಖರಾದ ಅಬ್ದುಲ್ ಗಫಾರ ನಗನೂರಿ, ಶೇಖ ಮಹಿಬೂಬ ಒಂಟಿ, ಎ.ಆರ್.ಪಾಶಾ, ಖಾಜಾ ಖಲೀಲ್ ಅಹ್ಮದ ಅರಕೇರಿ, ದಾವೂದ್ ಪಠಾಣ, ಹುಸೇನಬಾಷಾ ಇಲಕಲ್, ನಾಗಪ್ಪ ಕಟ್ಟಿಮನಿ, ಹಣಮಂತ ಬೊಮ್ಮನಹಳ್ಳಿ, ಧರ್ಮರಾಜ ಬಾದ್ಯಾಪುರ, ಶಕೀಲ್‌ಅಹ್ಮದ ಖುರೇಷಿ ಮೊಹಲ್ಲಾ, ಮಹ್ಮದ ಮಜೀದಸಾಬ, ಮಹ್ಮದ ಮೌಲಾ ಸೌದಾಗರ, ಕಮರುದ್ದಿನ್, ಅಮಜದ್‌ಸಾಬ, ಸೇರಿದಂತೆ ಸುರಪುರ ಹಾಗೂ ರಂಗಂಪೇಟ-ತಿಮ್ಮಾಪುರನ ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here