ನ್ಯಾಯವಾದಿಗಳ ದಿನಾಚರಣೆ ನಿಮಿತ್ತ ಸನ್ಮಾನ

0
323

ಕಲಬುರಗಿ: ಸಮಾಜ ಸೇವಕರಿಗೆ ಸನ್ಮಾನ, ಪ್ರಶಸ್ತಿ ಕೊಡುವುದಕ್ಕಿಂತ ಸಮಾಜ ಗುರುತಿಸಿ ಗೌರವ ನೀಡಿದರೆ ಸಾಕು ಸಮಾಜ ಸೇವೆ ಇಮ್ಮಡಿಯಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ವಕೀಲರ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷರಾದ  ನ್ಯಾಯವಾದಿ ಅಂಬಾರಾಯ ಪಟ್ಟಣಕರ ಹೇಳಿದರು.

ನಗರದ ಬ್ರಹ್ಮ ಪುರ ಬಡಾವಣೆಯಲ್ಲಿರುವ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸ್ನೇಹ ಸಂಗಮ ವಿವಿಧೊದ್ಧೆಶ ಸೇವಾ ಸಂಘ ಹಾಗೂ ತರಬೇತಿ ಕೇಂದ್ರದ ವತಿಯಿಂದ “ವಕೀಲರ ದಿನಾಚರಣೆ” ನಿಮಿತ್ಯ  ಸನ್ಮಾನ ಸ್ವೀಕರಿಸಿ ಮಾತನಾಡಿ, ಮನುಷ್ಯರು ಒಬ್ಬರಿಗೊಬ್ಬರು ಬೆಳೆಯಲು ಬಿಡದವರು ಹಾಗೂ ಯಾರಾದರೂ ನನಗಿಂತ ಮೇಲೆ ಬರುತ್ತಾರೆ ಎಂದು ತಿಳಿದು ಸಹಾಯ ಮಾಡದೆ ಇರುವವರು ಎಂದಿಗೂ ಮುಂದೆ ಬರುವುದಿಲ್ಲ ಸರ್ವರೂ ನಮ್ಮವರೆಂಬ ಭಾವದಿಂದ ಸೇವೆಗೆ ಸಹಕಾರ ನೀಡಿದರೆ  ಸಮೃದ್ಧ ಸಮಾಜ ನಿರ್ಮಿಸಬಹುದು ಎ೦ದು ಹೇಳಿದರು.

Contact Your\'s Advertisement; 9902492681

ತರಬೇತಿ ಕೇಂದ್ರದ ಮುಖ್ಯಸ್ಥರಾದ ಅಸ್ಲಾಂ ಶೇಕ್ ಮಾತನಾಡಿ, ತಮ್ಮ ವೃತ್ತಿಯೊಂದಿಗೆ ಹಲವಾರೂ ಸಾಮಾಜಿಕ ಸೇವೆ ಮಾಡುತ್ತಿರುವ ವಕೀಲರಿಗೆ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ರಾಷ್ಟ್ರದ ಸ್ವಾತಂತ್ರ್ಯ  ಚಳುವಳಿಯಲ್ಲಿ ವಕೀಲರು ಭಾಗವಹಿಸಿ  ಸ್ವತಂತ್ರ ಪಡೆಯಲು ಮಹತ್ವದ ಪಾತ್ರವಹಿಸಿದ್ದಾರೆ. ಸಮೃದ್ಧ ಸಮಾಜ ಕಟ್ಟಲು ವಕೀಲರ ಪಾತ್ರ ಮಹತ್ವವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಅವರಿಗೂ ವಿಶೇಷವಾಗಿ ಗೌರವಿಸಲಾಯಿತು. ಮಲಕಾರಿ ಪೂಜಾರಿ, ಶಿವರುದ್ರ ಕರಿಕಲ್ಲ, ರಘುನಂದನ್ ಕುಲಕರ್ಣಿ, ಸೋನಾಲಿ ಸ್ವಾಮಿ, ತ್ರಿವೇಣಿ ರಾಜುರಕರ, ರಮೇಶ,ಸೀಮಾ, ಇರ್ಫಾನ್ ಶೇಖ ಸೇರಿದಂತೆ ಅನೇಕ ತರಬೇತಿದಾರರು ಭಾಗವಹಿಸಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here