ವಾರ್ಡ್ ಸಮಿತಿ ರಚನೆಗೆ ಆಗ್ರಹಿಸಿ ಆಯುಕ್ತರಿಗೆ ಮನವಿ

0
21

ಕಲಬುರಗಿ: ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಅಡಿಯಲ್ಲಿ ಪಾಲಿಕೆಯು ಪ್ರತಿಯೊಂದು ವಾರ್ಡಿನಲ್ಲಿ ವಾರ್ಡ್ ಸಮಿತಿ ರಚಿಸಬೇಕಿರುತ್ತದೆ. ಮಹಾನಗರ ಪಾಲಿಕೆ ವಾರ್ಡ್ ಸಮಿತಿ ರಚಿಸಲು ದಿಟ್ಟ ಹೆಜ್ಜೆ ಇಟ್ಟು ಅತಿ ಶೀಘ್ರವಾಗಿ ಸಮಿತಿ ರಚನೆಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿ ವಾರ್ಡ್ ಸಮಿತಿ ಬಳಗ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದೆ.

ವಾರ್ಡ್ ಸಮಿತಿ ಬಳಗದ ನೇತೃತ್ವದ ಸಂಚಾಲಕರಾದ ಪಿ.ಎಸ್.ಮಹಾಗಾಂವಕರ, ಸಹ ಸಂಚಾಲಕರಾದ ಡಾ.ಕೆ.ಎಸ್.ವಾಲಿ ಹಾಗೂ ಬಳಗದ ಸದಸ್ಯರು ಕೂಡಲೇ ಮಂಗಳೂರು ಮತ್ತು ಬಳ್ಳಾರಿ ಮಾದರಿಯಲ್ಲಿ ವಾರ್ಡ್ ಸಮಿತಿ ರಚನೆಗೆ ಮುಂದಾಗುವಂತೆ ಒತ್ತಾಯಿಸಿ ಮನವಿ ಪತ್ರವನ್ನು ಆಯುಕ್ತರಿಗೆ ಸಲ್ಲಿಸಿದರು. ಬಳ್ಳಾರಿಯಲ್ಲಿ ಈಗಾಗಲೇ ವಾರ್ಡ್ ಸಮಿತಿ ರಚಿಸಲು ವಾರ್ಡ್ ಸೆಕ್ರೆಟರಿಗಳನ್ನು ನೇಮಕ ಮಾಡಿದ್ದಾರೆ.

Contact Your\'s Advertisement; 9902492681

ಮಂಗಳೂರು ಪಾಲಿಕೆ ಪಾರದರ್ಶಕ ಆಯ್ಕೆ ಪ್ರಕ್ರಿಯೆ ನಡೆಸಿ ವಾರ್ಡ್ ಸಮಿತಿಗಳನ್ನು ಈಗಾಗಲೇ ರಚಿಸಿದ್ದಾರೆ. ಈ ಎರಡು ಮಾದರಿಗಳನ್ನು ಇಟ್ಟುಕೊಂಡು ವಾರ್ಡ್ ಸಮಿತಿ ಕಲ್ಬುರ್ಗಿಯಲ್ಲೂ ರಚಿಸಬೇಕು.550 ಸ್ಥಾನಗಳಿಗೆ ಸಾವಿರಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿ ತಮ್ಮ ಬಡಾವಣೆಯ ಅಭಿವೃದ್ಧಿಯಲ್ಲಿ ಭಾಗವಹಿಸುವ ಇಚ್ಛಾಶಕ್ತಿ ತೋರಿಸಿದ್ದಾರೆ. 55 ವಾರ್ಡುಗಳಿಂದ ಕ್ರಿಯಾಶೀಲ ಪ್ರಜೆಗಳು, ಪ್ರತಿಷ್ಠಿತ ವಕೀಲರು, ವೈದ್ಯರು ಹಾಗೂ ಸಾಮಾಜಿಕ ಹಿತಾಸಕ್ತಿ ಬಯಸುವವರು ಹಾಗೂ ವಿಶೇಷವಾಗಿ ಮಹಿಳೆಯರು ಸಹ ಉತ್ಸಾಹದಿಂದ ಅರ್ಜಿ ಸಲ್ಲಿಸಿದ್ದಾರೆ.

ವಾರ್ಡ್ ಸಮಿತಿ ಹೊಂದುವದು ಸಾಂವಿಧಾನಿಕ ಹಕ್ಕಾಗಿದೆ.ನಗರದ ಅಭಿವೃದ್ಧಿಗೆ ವಾರ್ಡ್ ಸಮಿತಿ ನಿರಂತರ ಕಾರ್ಯ ನಿರ್ವಹಣೆ ಅನಿವಾರ್ಯವಾಗಿದೆಅರ್ಜಿಗಳ ಪರಿಶೀಲನೆ ಪ್ರಕ್ರಿಯೆ ಆರಂಭಿಸುವಂತೆ ಆಯುಕ್ತರಿಗೆ ಮನವಿ ಮಾಡಿದರು. ಮತ್ತು ವಾರ್ಡ ವಾರು ಅರ್ಜಿದಾರರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುವುದು. ಫಾರ್ಮ್ಗಳನ್ನು ಪರಿಶೀಲಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಲ್ಬುರ್ಗಿ ಮಹಾನಗರ ಪಾಲಿಕೆ ಆಯುಕ್ತರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ.

ನವೆಂಬರ್ 20 ರಂದು ನಡೆದ ವಾರ್ಡ್ ಸಮಿತಿ ಬಳಗ ಸಮಾವೇಶದ ಕುರಿತು ಆಯುಕ್ತರಿಗೆ ಬಳಗದ ಸದಸ್ಯರು ವಿವರವಾಗಿ ತಿಳಿಸಿದರು. ಸಮಾವೇಶವನ್ನು ಯಶಸ್ವಿಯಾಗಿ ನಡೆಸುವಲ್ಲಿ ಬಳಗದ ಸದಸ್ಯರ ಶ್ರಮವನ್ನು ಆಯುಕ್ತರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ನಾಗರಿಕ ಸೇವಾ ಸಮಿತಿಯ, ಬಿಎಂ ರಾವೂರ್, ಶರಣು ಕುಂಬಾರ್, ಬಸವ ಸಮಿತಿಯ ಬಸವರಾಜ ಮೊರಬಾದ್, ಶರಣ್ ಐಟಿ, ಡಾ. ಜೈ ಭೀಮ್ ಧರಗಿ,,ಪ್ರಭುಲಿಂಗ ಮಹಾಗವ್ಕರ್ , ಪ್ರೊ ಕೆ ಎಸ್ ವಾಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here