ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ರವರ 66ನೇ ಮಹಾಪರಿನಿರ್ವಾಣ ದಿನದಂದು ಭವಿಷ್ಯ ನಿಧಿ ಕ್ಷೇತ್ರೀಯ ಆಯುಕ್ತ ರವಿ ಯಾದವ ಅವರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವಪೂರ್ವಕವಾಗಿ ನಮನಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿ.ಎಮ್ ಅಪ್ಸರ, ಶಿವರಾಜ, ಬಸವರಾಜ ಹೆಳವರ, ಮದನ ಕುಲಕರ್ಣಿ, ಮನೋಜಕುಮಾರ, ಕಲ್ಪನಾ ಮಧಬಾವಿ, ಪ್ರಶಾಂತ ಇಂಗಳೇಶ್ವರ, ಗೋಪಿಕೃಷ್ಣ, ಪ್ರತಿಭಾ, ಪಾರ್ವತಿಬಾಯಿ, ಶಿವಶರಣಪ್ಪ ಶಿವಕೇರಿ, ಮಲ್ಲಿಕಾರ್ಜುನ ಹಾಗೂ ಇನ್ನಿತರ ಸಿಬ್ಬಂದಿಗಳು ಭಾಗವಹಿಸಿದ್ದರು.