ಕಲಬುರಗಿ: ಮಕ್ಕಳ ಬುದ್ಧಿಶಕ್ತಿ ಮತ್ತು ಸ್ಮರಣ ಶಕ್ತಿ ಹೆಚ್ಚಿಸಲು ಅಧ್ಯಾತ್ಮ ಮತ್ತು ಧ್ಯಾನ ಅತ್ಯಂತ ಪ್ರಮುಖವಾದದ್ದು ಎಂದು ಬೆಂಗಳೂರು ದಕ್ಷಿಣದ ಇಸ್ಕಾನ್ ನಿರ್ದೇಶಕರಾದ ಸುವರ್ಣಗೌರ್ ಹರಿ ಪ್ರಭುಜಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ವಲಯ ಮತ್ತುಚನ್ನಮಲ್ಲೇಶ್ವರ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಚನ್ನಮಲ್ಲೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಬುದ್ಧಿಶಕ್ತಿಯ ಹೆಚ್ಚಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಸುವರ್ಣಗೌರ್ ಹರಿ ಪ್ರಭುಜಿ ಮಾತನಾಡಿ ಮಕ್ಕಳು ತಮ್ಮ ಬುದ್ಧಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾದರೆ ಅಧ್ಯಾತ್ಮ ಅತ್ಯಂತ ಪ್ರಮುಖವಾಗಿದೆ ಏಕಾಗ್ರತೆ ಮತ್ತು ಆತ್ಮವಿಶ್ವಾಸ ಬರಬೇಕಾದರೆ ಭಗವದ್ಗೀತೆಗಳಂತಹ ಗ್ರಂಥಗಳು ಮಕ್ಕಳು ಓದಬೇಕೆಂದು ಹೇಳಿದರು.
ಜ್ಞಾನ ಹರಿಯುವ ನದಿ, ನಾವು ಎಷ್ಟೇ ತಿಳಿದುಕೊಂಡರು ಕಡಿಮೆಯೇ. ನಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಪರ್ಧೆಯನ್ನು ಕಾಣುತ್ತೇವೆ. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಸ್ಪರ್ಧೆಗೆ ತಕ್ಕಂತೆ ನಾವು ಮುಂದುವರೆಯಬೇಕಾದರೆ ನಮ್ಮ ಬುದ್ದಿಶಕ್ತಿ ಮತ್ತು ಸ್ಮರಣ ಶಕ್ತಿ ಅತ್ಯಂತ ಪ್ರಮುಖವಾದುದ್ದಾಗಿದ್ದು, ಅದನ್ನು ಹೆಚ್ಚಳಕ್ಕೆ ಮಕ್ಕಳಿಗೆ ಈಗಿನಿಂದಲೇ ತಯಾರಿ ಮಾಡಬೇಕಾಗುತ್ತದೆ ಆದ್ದರಿಂದ ಶಿಕ್ಷಕರು ಮತ್ತು ಪೋಷಕರು ಮಕ್ಕಳ ಸ್ಮರಣ ಶಕ್ತಿ ವೃದ್ದಿಗಾಗಿ ಶ್ರಮಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ವಲಯದ ಅಧ್ಯಕ್ಷರಾದಪ್ರಭುಲಿಂಗ ಮೂಲಗೆ ಉತ್ತರ ವಲಯದ ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಸಾಹಿತ್ಯ ಪರಿಷತ್ತು ಮಕ್ಕಳ ಅಭಿವೃದ್ಧಿ ದೃಷ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಮಕ್ಕಳಿಗಾಗಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುಸಿದ್ಧರಾಮಪ್ಪ ಉಕ್ಕಲಿ ವಹಿಸಿದ್ದುರು ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ವಲಯದ ಕಾರ್ಯಕ್ರಮಗಳ ಅತ್ಯತ್ತಮವಾಗಿವೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿಧೂಳಪ್ಪ ಹಾದಿಮನಿ ಕಾರ್ಯದರ್ಶಿಗಳು.ಪರಮೇಶ್ವರ ಮುನ್ನಹಳ್ಳಿ ಖಜಾಂಚಿ.ಚನ್ನಮಲ್ಲಯ್ಯ ಹಿರೇಮಠ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದಹಣಮಂತರಾಯ ದಿಂಡೂರೆ,ನಾಗೇಶ್ ತಿಮ್ಮಾಜಿ, ಗೌರವಾಧ್ಯಕ್ಷರಾದಶಿವಯೋಗಪ್ಪ ಬಿರಾದರ್. ಸಂಚಾಲಕರಾದ ನವಾಬಖಾನ್ ಸಂಘಟನಾ ಕಾರ್ಯದರ್ಶಿಶಿವಲಿಂಗಪ್ಪ ಟೆಂಗಳಿ, ಕೋಶ್ಯಾಧ್ಯಕ್ಷರಾದ ಕಾಂತ್ ಪಾಟೀಲ್ ದಿಕ್ಸಂಗಾ, ಶಾಲೆಯ ಮುಖ್ಯ ಗುರುಗಳ ಮತಿ ಶ್ವೇತ ಮುತ್ತಾ. ಮತಿ ಸುಭದ್ರ ಜೇವರ್ಗಿ. ಜ್ಯೋತಿ ಡಿಗ್ಗಿ. ಅನುರಾಧ ಗಂಗಾಣಿ. ಮತಿ ಲೀಲಾವತಿ ಮಠಪತಿ ಮೀನಾಕ್ಷಿ ಲಾಲಿ ಅನ್ನಪೂರ್ಣ ರಾಜೇಶ್ವರಿ ಪಾಟೀಲ್ ಬಾಬಾನ ರಾಥೋಡ್ ಲಕ್ಷ್ಮಿ ದೇವಿ ಉಮಾದೇವಿ ಹಿರೇಮಠ್ ಸೇರಿದಂತೆ ಎಲ್ಲಾ ಶಿಕ್ಷಕರು ಹಾಜರಿದ್ದರು.