ಗುಜರಾತ್ ಫಲಿತಾಂಶ: ನಿರೀಕ್ಷೆಯಂತೆ ಸ್ಥಾನಗಳು ಬಂದಿಲ್ಲ | ಶಾಸಕ ಪ್ರಿಯಾಂಕ್ ಖರ್ಗೆ

0
35

ಕಲಬುರಗಿ: ಗುಜರಾತನಲ್ಲಿ ನಮ್ಮ ನಿರೀಕ್ಷೆಗಿಂತ ಕಡಿಮೆ ಸ್ಥಾನ ಬಂದಿವೆ. ಈ ಕುರಿತು ಪರಾಮರ್ಶೆ ಮಾಡಲಾಗುವುದು ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು ನಮಗೆ ಗುಜರಾತನಲ್ಲಿ 80 ರಿಂದ 95 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ನಿರೀಕ್ಷೆಯಂತೆ ಗೆಲ್ಲಲು ಆಗಲಿಲ್ಲ. ಅಲ್ಲಿ ಮೂರು ‘ತ್ರೀ’ ಗಳು ಚೆನ್ನಾಗಿ ಕೆಲಸ ಮಾಡಿವೆ. ಅವುಗಳಿಂದಲೇ ಬಿಜೆಪಿ ಗೆಲುವು ಸಾಧಿಸಿದೆ. ಆ ಮೂರು ತ್ರಿ ಗಳೆಂದರೆ, ಮೋದಿ, ಮನಿ ಹಾಗೂ ಮಸಲ್ ಪವರ್ ಗಳು ಎಂದರು.

Contact Your\'s Advertisement; 9902492681

ಗುಜರಾತನಲ್ಲಿ ನಮ್ಮ ಹಲವು ಮುಖಂಡರ ಮೇಲೆ ಹಲ್ಲೆ ಸಹ ನಡೆಸಲಾಗಿದೆ ಎಂದು ಆರೋಪಿಸಿದ ಖರ್ಗೆ, ಬಿಜೆಪಿ ಸಿಬಿಐ, ಐಟಿ ಹಾಗೂ ಇಡಿಗಳ ಬೆಂಬಲ ಪಡೆದುಕೊಂಡಿದೆ ಎಂದರು.

ಗುಜರಾತ್ ನಲ್ಲಿ ಮೋದಿ ಪ್ರಭಾವವಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡ ಪ್ರಿಯಾಂಕ್, ಮೋದಿ ಈ ಸಲದ ಚುನಾವಣೆ ಪ್ರಚಾರವನ್ನು ಕಾರ್ಪೋರೇಷನ್ ಚುನಾವಣೆಗಳ ರೀತಿ ನಡೆಸಿದ್ದಾರೆ ಎಂದರು.

ಪಕ್ಷದ ಸೋಲಿನ ಕುರಿತಂತೆ ನ್ಯೂನ್ಯತೆಗಳ ಬಗ್ಗೆ ಚರ್ಚೆ ನಡೆಸಿ ಸರಿಪಡಿಸಿಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ರಾಜ್ಯದಲ್ಲಿ ಮೋದಿ ಪ್ರಭಾವ ಕುರಿತು ಮಾತನಾಡಿದ ಅವರು, ಕರ್ನಾಟಕ ಪ್ರಗತಿಪರ ಚಿಂತನೆಯ ರಾಜ್ಯ ಇಲ್ಲಿ‌ ಅವರ ಆಟ ನಡೆಯುವುದಿಲ್ಲ. ಅವರ ಆಟ ನಡಯುವುದಿಲ್ಲ ಎಂದು ಅರಿತುಕೊಂಡಿದ್ದರಿಂದಲೇ ಯಡಿಯೂರಪ್ಪನವರನ್ನ ಪಾರ್ಲಿಮೆಂಟರಿ ಬೋರ್ಡ್ ಗೆ ತರಲಾಗಿದೆ ಎಂದರು.

ಬಿಜೆಪಿಗರ ಜಟ್ಕಾಕಟ್ ಹಾಗೂ ಹಲಾಲ್ ಕಟ್ ಗಳಿಗೆ ರಾಜ್ಯದಲ್ಲಿ ಸ್ಪಂದನೆ ಸಿಕ್ಕಿಲ್ಲ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here