ಕಲಬುರಗಿ: ಜಿಲ್ಲೆಯ ಜಿಮ್ಸ್ ಆವರಣದಲ್ಲಿರುವ ಜಿಲ್ಲಾ ಅಂಗವಿಕಲರ ಪುನರವಸತಿ ಕೇಂದ್ರ ( ಡಿ.ಡಿ.ಆರ್ ಸಿ.) ಕಛೇರಿಯಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಗೋಪಾಲದೇವ ಜಾಧವ ಮೆಮೋರಿಬಲ್ ಟ್ರಸ್ಟ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ “ವಿಕಲಚೇತನ ಮೌಲ್ಯಮಾಪನ ಕಾರ್ಯಕ್ರಮ”ವನ್ನು ಹೂವಿನ ಗಿಡಕ್ಕೆ ನೀರನ್ನು ಹಾಕುವ ಮೂಲಕ ಚಾಲನೆ ನೀಡಲಾಯಿತು.
ನಂತರ ಕಾರ್ಯಕ್ರಮ ಉದ್ದೇಶಿ ಮಾತನಾಡಿದ ಜಿಮ್ಸ್ ನಿರ್ದೇಶಕರಾದ ಡಾ.ಕವಿತಾ ಪಾಟೀಲ್ರವರು ವಿಕಲಚೇತರಿಗೆ ಸಾಧನ ಸಲಕರಣೆಗಳು ಮೌಲ್ಯಮಾಪನ ಮಾಡಿ ವಿತರಿಸಲಾಗುವುದು ಹಾಗೂ ಇದರ ಉಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಗೋಪಾಲದೇವ ಜಾಧವ ಮೇಮೋರಿಬಲ್ ಟ್ರಸ್ಟ ಕಾರ್ಯದರ್ಶಿಗಳಾದ ಡಾ.ಅಬ್ದುಲ ಮುನೀರ, ಡಾ.ಇಬ್ರಾಹಿಂ, ಡಾ.ಜಿ.ಟಿ ದೊಡ್ಡಮನಿ,ಡಾ.ನಾಗರಾಜ್ ಪಾಟೀಲ್, ನೀತಿನ್ ಕುಮಾರ್ ಅಲೀಂಕೋ ಕಂಪನಿ ಅಧಿಕಾರಿಗಳು ಹಾಗೂ ಆರೋಗ್ಯ ಸಮಿತಿ ಸದಸ್ಯರು, ಪ್ರಮುಖ ಮುಖಂಡರು ಉಪಸ್ಥಿತರಿದ್ದರು.